ಬೆಂಗಳೂರು: ಕರ್ನಾಟಕದ ಹೆಮ್ಮೆಯ ಕೆ ಎಸ್ ಆರ್ ಟಿಸಿಗೆ ಪ್ರಶಸ್ತಿಗಳ ಸರಮಾಲೆಯೇ ಬಂದಿದೆ. ಬರೋಬ್ಬರಿ 16 ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮಾಹಿತಿ ಹಂಚಿಕೊಂಡಿದ್ದು, ಕೆ ಎಸ್ ಆರ್ ಟಿ ಸಿ ಗೆ ರಾಷ್ಟ್ರದ ಮಟ್ಟದ 8 ವೀಡಿಯಾ – ViDEA, 5 ಎಮ್ಕ್ಯೂಬ್ – mCUBE ಮತ್ತು 2 ಸ್ಕಾಚ್ ಆರ್ಡರ್ ಆಫ್ ಮೆರಿಟ್ ಮತ್ತು 1 ಸ್ಕಾಚ್ ಪ್ರಶಸ್ತಿಗಳು ಬಂದಿವೆ ಎಂಬುದಾಗಿ ತಿಳಿಸಿದೆ.
ಹೀಗಿವೆ 8 ವೀಡಿಯಾ ಪ್ರಶಸ್ತಿಗಳು
1. ಪಲ್ಲಕ್ಕಿ ಬ್ರಾಂಡಿಂಗ್ ಗಾಗಿ ಪ್ರಾಡಕ್ಟ್ ಪ್ಲೇಸ್ಮೆಂಟ್ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್.
2. ಅಶ್ವಮೇಧ ಬ್ರಾಂಡಿಂಗ್ ಗಾಗಿ ಕಡಿಮೆ ಬಜೆಟ್ ಮಾರ್ಕೆಟಿಂಗ್ ಕ್ಯಾಂಪೇನ್ (ಆಫ್ಲೈನ್) ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್.
3. ಶಕ್ತಿ ಯೋಜನೆಗೆ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಪಾರಂಪರಿಕ ಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವೀಡಿಯೊ ಕಂಟೆಂಟ್.
4. ಅಶ್ವಮೇಧ ಬ್ರಾಂಡಿಂಗ್ ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಬಹುಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವೀಡಿಯೊ ಕಂಟೆಂಟ್.
5. ಪಲ್ಲಕ್ಕಿ ಬ್ರಾಂಡಿಂಗ್ ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಡಿಜಿಟಲ್ ಕ್ಯಾಂಪೇನ್ ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್.
6. ಅಂಬಾರಿ ಉತ್ಸವದ ಬ್ರಾಂಡಿಂಗ್ ಗಾಗಿ ಇನ್ಸ್ಟಾಗ್ರಾಮ್ ಕ್ಯಾಂಪೇನ್ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್.
7. ಅಶ್ವಮೇಧ ಬ್ರಾಂಡಿಂಗ್ ಗಾಗಿ ಮೊಬೈಲ್ ಮಾರ್ಕೆಟಿಂಗ್ ಕ್ಯಾಂಪೇನ್ – ಒಟ್ಟಾರೆ ಅತ್ಯುತ್ತಮ ವೀಡಿಯೊ ಕಂಟೆಂಟ್.
8. ಶ್ರೇಷ್ಠ ವೀಡಿಯೊ ಕಂಟೆಂಟ್ ಬ್ರಾಂಡ್ಸ್ ಎಂಟರ್ಪ್ರೈಸ್ – ಕೆ ಎಸ್ ಆರ್ ಟಿ ಸಿ.
ಇಲ್ಲಿವೆ 5 ಎಮ್ಕ್ಯೂಬ್ ಪ್ರಶಸ್ತಿ ಗಳ ಪಟ್ಟಿ
1. ಬ್ರಾಂಡಿಂಗ್ ಗಾಗಿ ಶ್ರೇಷ್ಠ ಪಿಆರ್ ಕ್ಯಾಂಪೇನ್.
2. ಬ್ರಾಂಡಿಂಗ್ ಗಾಗಿ ಕಡಿಮೆ ಬಜೆಟ್ ಮಾರ್ಕೆಟಿಂಗ್ ಕ್ಯಾಂಪೇನ್ (ಆಫ್ಲೈನ್).
3. ಪ್ರವಾಸ ಮತ್ತು ಪ್ರಯಾಣದ ಶ್ರೇಷ್ಠ ಎಟಿಎಲ್ ಕ್ಯಾಂಪೇನ್.
4. ಶಕ್ತಿ ಯೋಜನೆಗಾಗಿ ಶ್ರೇಷ್ಠ ಬ್ರಾಂಡ್ ಕಂಟೆಂಟ್.
5. ಬ್ರಾಂಡಿಂಗ್ ಗಾಗಿ ಶ್ರೇಷ್ಠ ಆನ್ಲೈನ್ ಪಿಆರ್ ಕ್ಯಾಂಪೇನ್.
ನಿಗಮವು ಸಾರಿಗೆ ಸಂಜೀವಿನಿ- ನೌಕರರ ಹೃದಯ ರೋಗ ತಪಾಸಣೆಗಾಗಿ ಮತ್ತು ರಸ್ತೆ ಸುರಕ್ಷತೆ ಉಪಕ್ರಮ ಗಳಿಗಾಗಿ 2 ಸ್ಕೋಚ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಗಳನ್ನು ಮತ್ತು 1 ಸ್ಕೋಚ್ ಪ್ರಶಸ್ತಿಯನ್ನು ಪಡೆದಿರುತ್ತದೆ.
ViDEA ಪ್ರಶಸ್ತಿ ಮತ್ತು mCUBE ಪ್ರಶಸ್ತಿಗಳನ್ನು ಗುರುಗಾಂವ್ ನಲ್ಲಿ, ಪ್ರದಾನ ಮಾಡಲಾಯಿತು. ಸ್ಕೋಚ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಗಳನ್ನು ಆನ್ ಲೈನ್ ನಲ್ಲಿ ಪ್ರದಾನ ಮಾಡಲಾಯಿತು.
ಸ್ಕೋಚ್ ಪ್ರಶಸ್ತಿ ಸಮಾರಂಭವು 2024 ಸೆಪ್ಟೆಂಬರ್ 21ರಂದು ನವದೆಹಲಿಯಲ್ಲಿ ನಡೆಯಲಿದೆ ಎಂಬುದಾಗಿ ಕೆ ಎಸ್ ಆರ್ ಟಿಸಿ ತಿಳಿಸಿದೆ.
ನಿವೇಶನ ಲೂಟಿ ಮಾಡುತ್ತಿರುವುದು ನಾನಾ ನೀವಾ?: ಎಂ.ಬಿ.ಪಾಟೀಲರಿಗೆ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ
ಬ್ಯಾಂಕ್ ಗ್ರಾಹಕರೇ ಗಮನಿಸಿ : `ಸೆಪ್ಟೆಂಬರ್’ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ!Bank Holidays