ವಿಜಯಪುರ: ಈ ವರ್ಷ ಕರ್ನಾಟಕದಲ್ಲಿ ಉತ್ತಮ ಮಳೆ – ಬೆಳೆಯಾಗಲಿದೆ ಅಂತ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಅವರು ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಸುಕ್ಷೇತ್ರ ಕಡಣಿ ಗ್ರಾಮದಲ್ಲಿ ಶ್ರೀ ಭೋಗಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ಇದೇ ವೇಳೆ ಅವರು ಮಾತನಾಡಿ, ರಾಜ್ಯದಲ್ಲಿ ಮಳೆ ಬೆಳೆ ಚೆನ್ನಾಗಿದೆ ರಾಜ್ಯ ಸುಭಿಕ್ಷವಾಗಿರಲಿದೆ. ಹಿಮಾಯಲ ಹಾಗೂ ದೆಹಲಿಯಲ್ಲಿ ಅಪಾಯವಿದೆ. ಧರ್ಮ ಮತ್ತು ದೇವರ ಮೊರೆ ಹೋಗುವುದೇ ಇದಕ್ಕೆ ಪರಿಹಾರ ಜಪ, ತಪ ಮಾಡಬೇಕು ಅಂತ ತಿಳಿಸಿದರು. ಇನ್ನೂ ಸಚಿವ ಎಂಬಿ ಪಾಟೀಲ್ ಅವರು ರಾಜಕೀಯದಲ್ಲಿದ್ದಾರೆ. ಉತ್ತರ ಕರ್ನಾಟಕದಿಂದ ಯಾರನ್ನಾದರೂ ಸಿಎಂ ಮಾಡಬೇಕೆಂದರೆ ಅದು ಎಂಬಿ ಪಾಟೀಲ್ ಅವರನ್ನು ಮಾಡಬೇಕು ಎಂದು ಸ್ವಾಮೀಜಿ ಹೇಳಿದರು.