Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬಿರುಗಾಳಿ ಸಹಿತ ಭಾರೀ ಮಳೆಗೆ ದೆಹಲಿ ತತ್ತರ : ನಾಲ್ವರು ಸಾವು, 11 ಜನರು ಗಂಭೀರ | Heavy rain in delhi

22/05/2025 11:01 AM

BREAKIG : ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 570 ಕ್ಕೂ ಹೆಚ್ಚು ಅಂಕ ಕುಸಿತ : 15 ನಿಮಿಷಗಳಲ್ಲಿ ಹೂಡಿಕೆದಾರರಿಗೆ 2.52 ಲಕ್ಷ ಕೋಟಿ ರೂ.ನಷ್ಟ |Share Market

22/05/2025 10:58 AM

BIG NEWS : ಭಾರತದಲ್ಲಿ ಬೇಹುಗಾರಿಕೆಗೆ ಶಿಕ್ಷೆ ಏನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

22/05/2025 10:50 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಈ ಬಾರಿ ಅದ್ಧೂರಿಯಾಗಿ ‘ಕರ್ನಾಟಕ ಸುವರ್ಣ ಸಂಭ್ರಮ’ ಆಚರಿಸಲು ನಿರ್ಧಾರ: ಸಿಎಂ ಸಿದ್ಧರಾಮಯ್ಯ
KARNATAKA

BIG NEWS: ಈ ಬಾರಿ ಅದ್ಧೂರಿಯಾಗಿ ‘ಕರ್ನಾಟಕ ಸುವರ್ಣ ಸಂಭ್ರಮ’ ಆಚರಿಸಲು ನಿರ್ಧಾರ: ಸಿಎಂ ಸಿದ್ಧರಾಮಯ್ಯ

By kannadanewsnow0920/09/2024 2:51 PM

ಮೈಸೂರು : ಕನ್ನಡದ ವಾತಾವರಣವನ್ನು ವಿಸ್ತರಿಸಲು, ಗಟ್ಟಿಗೊಳಿಸಲು ನಾವೆಲ್ಲಾ ಹೆಚ್ಚೆಚ್ಚು ಶ್ರಮಿಸೋಣ. ಕರ್ನಾಟಕ ಬಹುತ್ವದ ಬೀಡು. ಬಹುತ್ವದ ನಾಡು ಕಟ್ಟುವ ವಿಚಾರದಲ್ಲಿ ರಾಜಿಯೇ ಇಲ್ಲ‌ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ನುಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಜಂಟಿಯಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ “ಕರ್ನಾಟಕ ಸಾಂಸ್ಕೃತಿಕ ಮುನ್ನೋಟ: ಚಿಂತನಾ ಸಮಾವೇಶ” ವನ್ನು ಉದ್ಘಾಟಿಸಿ ಮಾತನಾಡಿದರು.

ದೇವರಾಜ ಅರಸರು 1973ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದರು. ನಾಮಕರಣಗೊಂಡು 50 ವರ್ಷದ ಸುವರ್ಣ ಸಂಭ್ರಮವನ್ನು ಬಿಜೆಪಿ ಸರ್ಕಾರ ಮಾಡಬೇಕಿತ್ತು. ಅವರು ಮಾಡಲಿಲ್ಲ. ಹೀಗಾಗಿ ನಾನು ಸುವರ್ಣ ಸಂಭ್ರಮವನ್ನು ಬಜೆಟ್ ನಲ್ಲೇ ಘೋಷಿಸಿ ಇದನ್ನು ಕನ್ನಡ ಜನೋತ್ಸವವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಕರ್ನಾಟಕ ಮತ್ತು ಕನ್ನಡ ಏಳು ಕೋಟಿ ಜನರ ಉಸಿರಾಗಲಿ. ಇಲ್ಲಿ ಬದುಕನ್ನು ಕಟ್ಟಿಕೊಂಡಿರುವ ಇತರೆ ಭಾಷಿಕರು ಕನ್ನಡ ಮಾತಾಡುವಂತಾದರೆ ಒಳ್ಳೆಯದು. ನಾವು ಯಾವ ಭಾಷೆಗೂ ದ್ವೇಷಿಗಳಲ್ಲ. ಸಾಧ್ಯವಿರುವಷ್ಟು ಭಾಷೆಗಳನ್ನೆಲ್ಲಾ ಕಲಿತರೆ ಒಳ್ಳೆಯದೆ. ಆದರೆ ಕರ್ನಾಟಕದಲ್ಲಿ ಕನ್ನಡದ ವಾತಾವರಣ ನಿರ್ಮಿಸಿ ಕನ್ನಡವನ್ನು ಪೂರ್ತಿಯಾಗಿ ಬಳಸಬೇಕು. ಇದು ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿ ಎಂದರು.

ತಮಿಳುನಾಡಿನಲ್ಲಿ ತಮಿಳಿನಲ್ಲಿ, ಕೇರಳದಲ್ಲಿ ಮಲಯಾಳಂನಲ್ಲಿ, ಆಂಧ್ರದಲ್ಲಿ ತೆಲುಗಿನಲ್ಲಿ, ಮಹಾರಾಷ್ಟ್ರದಲ್ಲಿ ಮರಾಠಿಯಲ್ಲೇ ವ್ಯವಹರಿಸುತ್ತಾರೆ. ಆದರೆ ನಮ್ಮಲ್ಲಿ ಕನ್ನಡ ಬಿಟ್ಟು ಅವರವರ ಭಾಷೆಯಲ್ಲೇ ಹೆಚ್ಚು ವ್ಯವಹರಿಸಲು ಉತ್ಸುಕರಾಗಿ ಉದಾರಿ ಅನ್ನಿಸಿಕೊಂಡಿದ್ದೇವೆ. ಇದು ಅಷ್ಟು ಸರಿಯಲ್ಲ. ಕನ್ನಡದ ವಾತಾವರಣವನ್ನು ಗಟ್ಟಿಗೊಳಿಸಬೇಕು ಎಂದು ಸಿಎಂ ಕರೆ ನೀಡಿದರು.

ಕರ್ನಾಟಕ ಬಹುತ್ವದ ಬೀಡು

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಕನ್ನಡ ನಾಡು ಬಹುತ್ವದ ಬೀಡು. ಇಲ್ಲಿ ಮನುಷ್ಯ ಪ್ರೀತಿಯ ಬಹುತ್ವ ಆಚರಿಸಲ್ಪಡುತ್ತದೆ. ಆದರೆ ವಿದ್ಯಾವಂತರೇ ಬಹುತ್ವ, ಜಾತ್ಯತೀತತೆ ಕೈಬಿಟ್ಟು ತಾರತಮ್ಯ , ಕಂದಾಚಾರವನ್ನು ಆಚರಿಸುತ್ತಿರುವುದು ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.

ಬಸವಣ್ಣನವರನ್ನು ನಾವು ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿದ್ದು ಬಸವಣ್ಣನವರ ವೈಚಾರಿಕ ನಿಲುವುಗಳನ್ನು ನಾವು ಪಾಲಿಸಬೇಕು ಎನ್ನುವ ಉದ್ದೇಶದಿಂದ. ಸರ್ಕಾರಕ್ಕೆ ಕಿರೀಟ ಸಿಗುತ್ತದೆ ಎನ್ನುವ ಕಾರಣಕ್ಕೆ ಘೋಷಣೆ ಮಾಡಿದ್ದಲ್ಲ. ಬಸವಣ್ಣನ ಆಶಯಗಳು, ವಿಚಾರಗಳು, ವೈಚಾರಿಕತೆ ಯುವ ಪೀಳಿಗೆಗೆ ಹೆಚ್ಚೆಚ್ಚು ಗೊತ್ತಾಗಬೇಕು.

ಈ ಮಣ್ಣಿನ ಕನ್ನಡ-ಕರ್ನಾಟಕ-ಬಹುತ್ವ-ವೈಚಾರಿಕತೆ ಎಲ್ಲವೂ ಸೇರಿ ಆಗಿರುವ ಕನ್ನಡತನ ರೂಪುಗೊಂಡಿದೆ. ಈ ಕನ್ನಡತನವನ್ನು, ಇದು ರೂಪುಗೊಂಡ ಚರಿತ್ರೆಯನ್ನು ನಾವು ಈ ತಲೆಮಾರಿಗೆ ದಾಟಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ಈ ಚಿಂತನಾ ಸಮಾವೇಶವನ್ನು ಆಯೋಜಿಸಲಾಗಿದೆ. ನಿಮ್ಮಂಥಾ ವಿಚಾರವಾದಿಗಳು ಒಟ್ಟಾಗಿ ಸೂಕ್ತವಾದ ಸಾಂಸ್ಕೃತಿಕ‌ ಮುನ್ನೋಟವನ್ನು ನೀಡುತ್ತೀರಿ ಎನ್ನುವ ವಿಶ್ವಾಸವಿದೆ ಎಂದರು.

“ಸುವರ್ಣ ಸಂಭ್ರಮ ಕರ್ನಾಟಕ-50: ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ದ ಅಂಗವಾಗಿ ಚಿಂತನಾ ಸಮಾವೇಶ ಆಯೋಜಿಸಲಾಗಿತ್ತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ, ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ.ಮಹದೇವಪ್ಪ, ಕನಕದಾಸ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಕಾ.ತ.ಚಿಕ್ಕಣ್ಣ, ಗ್ಯಾರಂಟಿ ಅನುಷ್ಠಾನ‌ ಸಮಿತಿ ಉಪಾಧ್ಯಕ್ಷರಾದ ಪುಷ್ಪ ಅಮರನಾಥ್, ಮುಕ್ತ ವಿವಿ‌ ಕುಲಪತಿಗಳಾದ ಪ್ರೊ.ಶರಣಪ್ಪ ವಿ.ಹಲ್ಸೆ, ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಧರಣೀದೇವಿ ಮಾಲಗತ್ತಿ, ವಿಧಾನ ಪರಿಷತ್ ಸದಸದಯರಾದ ಡಾ.ತಿಮ್ಮಯ್ಯ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ಅರ್ಧ ಶತಮಾನದಿಂದ ಕನ್ನಡದ ವಿವೇಕವನ್ನು ವಿಸ್ತರಿಸುತ್ತಿರುವ ಹಿರಿಯ ಸಾಹಿತಿಗಳು, ಬರಹಗಾರರು, ಲೇಖಕರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ನಾನಾ ಚಳವಳಿಗಳ ಕಾರ್ಯಕರ್ತರು, ಮುಖಂಡರುಗಳು ಚಿಂತನಾ ಸಮಾವೇಶದಲ್ಲಿ ಭಾಗವಹಿಸಿದ್ದರು.

ರೈತ-ದಲಿತ-ಕಾರ್ಮಿಕ-ಮಹಿಳಾ ಮತ್ತು ಕೋಮುಸೌಹಾರ್ಧ ಹಾಗೂ ಸಂವಿಧಾನ ಉಳಿಸಿ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಲವು ಮಹನೀಯರುಗಳು ಚಿಂತನಾ ಸಮಾವೇಶದಲ್ಲಿ ಉಪಸ್ಥಿತರಿದ್ದು ತಮ್ಮ ತಮ್ಮ ವಿಚಾರಗಳನ್ನು ಮಂಡಿಸಿದರು.

ಭಾರತದ ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನೆಲ್ ಹ್ಯಾಕ್: ‘ಕ್ರಿಪ್ಟೋಕರೆನ್ಸಿ’ ಸಂಬಂಧಿತ ವೀಡಿಯೋ ಶೇರ್ | Supreme Court YouTube channel

BIG NEWS : 3 ತಿಂಗಳಲ್ಲಿ ಪ್ರಪಂಚದ ವಿನಾಶ ಪ್ರಾರಂಭವಾಗುತ್ತದೆ : `ಬಾಬಾ ವಂಗಾ’ ಶಾಕಿಂಗ್ ಭವಿಷ್ಯವಾಣಿ!

BREAKING : `ಪೊಲೀಸ್ ಕಾನ್ ಸ್ಟೆಬಲ್’ ಹುದ್ದೆಗಳ ವಯೋಮಿತಿ 27 ರಿಂದ 33 ವರ್ಷಕ್ಕೆ ಏರಿಕೆ : CM ಸಿದ್ದರಾಮಯ್ಯ ಘೋಷಣೆ

Share. Facebook Twitter LinkedIn WhatsApp Email

Related Posts

ALERT : ಸಾರ್ವಜನಿಕರೇ ಎಚ್ಚರ : `ಆಧಾರ್ ಕಾರ್ಡ್’ ನಲ್ಲಿ ಈ ತಪ್ಪು ಮಾಡಿದ್ರೆ 3 ವರ್ಷ ಜೈಲು, 1 ಲಕ್ಷ ರೂ.ದಂಡ ಫಿಕ್ಸ್.!

22/05/2025 10:47 AM2 Mins Read

BREAKING : ತುಮಕೂರಿನ `ಸಿದ್ಧಾರ್ಥ ಶಿಕ್ಷಣ ಸಂಸ್ಥೆ’ ಮೇಲೆ `ED’ ದಾಳಿ : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಫಸ್ಟ್ ರಿಯಾಕ್ಷನ್.!

22/05/2025 10:06 AM1 Min Read

BREAKING : ಬೆಂಗಳೂರಿನಲ್ಲಿ ಗನ್ ಹಿಡಿದು ಪಬ್ ಗೆ ನುಗ್ಗಿ ಕಳ್ಳತನ ಪ್ರಕರಣ : ಒಡಿಶಾ ಮೂಲದ ಆರೋಪಿ ಅರೆಸ್ಟ್.!

22/05/2025 9:35 AM1 Min Read
Recent News

BREAKING : ಬಿರುಗಾಳಿ ಸಹಿತ ಭಾರೀ ಮಳೆಗೆ ದೆಹಲಿ ತತ್ತರ : ನಾಲ್ವರು ಸಾವು, 11 ಜನರು ಗಂಭೀರ | Heavy rain in delhi

22/05/2025 11:01 AM

BREAKIG : ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 570 ಕ್ಕೂ ಹೆಚ್ಚು ಅಂಕ ಕುಸಿತ : 15 ನಿಮಿಷಗಳಲ್ಲಿ ಹೂಡಿಕೆದಾರರಿಗೆ 2.52 ಲಕ್ಷ ಕೋಟಿ ರೂ.ನಷ್ಟ |Share Market

22/05/2025 10:58 AM

BIG NEWS : ಭಾರತದಲ್ಲಿ ಬೇಹುಗಾರಿಕೆಗೆ ಶಿಕ್ಷೆ ಏನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

22/05/2025 10:50 AM

ALERT : ಸಾರ್ವಜನಿಕರೇ ಎಚ್ಚರ : `ಆಧಾರ್ ಕಾರ್ಡ್’ ನಲ್ಲಿ ಈ ತಪ್ಪು ಮಾಡಿದ್ರೆ 3 ವರ್ಷ ಜೈಲು, 1 ಲಕ್ಷ ರೂ.ದಂಡ ಫಿಕ್ಸ್.!

22/05/2025 10:47 AM
State News
KARNATAKA

ALERT : ಸಾರ್ವಜನಿಕರೇ ಎಚ್ಚರ : `ಆಧಾರ್ ಕಾರ್ಡ್’ ನಲ್ಲಿ ಈ ತಪ್ಪು ಮಾಡಿದ್ರೆ 3 ವರ್ಷ ಜೈಲು, 1 ಲಕ್ಷ ರೂ.ದಂಡ ಫಿಕ್ಸ್.!

By kannadanewsnow5722/05/2025 10:47 AM KARNATAKA 2 Mins Read

ಆಧಾರ್ ಕಾರ್ಡ್ (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಭಾರತೀಯನಿಗೂ ಬಹಳ ಮುಖ್ಯವಾದ ಗುರುತಿನ ಚೀಟಿಯಾಗಿದೆ. ಇದನ್ನು…

BREAKING : ತುಮಕೂರಿನ `ಸಿದ್ಧಾರ್ಥ ಶಿಕ್ಷಣ ಸಂಸ್ಥೆ’ ಮೇಲೆ `ED’ ದಾಳಿ : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಫಸ್ಟ್ ರಿಯಾಕ್ಷನ್.!

22/05/2025 10:06 AM

BREAKING : ಬೆಂಗಳೂರಿನಲ್ಲಿ ಗನ್ ಹಿಡಿದು ಪಬ್ ಗೆ ನುಗ್ಗಿ ಕಳ್ಳತನ ಪ್ರಕರಣ : ಒಡಿಶಾ ಮೂಲದ ಆರೋಪಿ ಅರೆಸ್ಟ್.!

22/05/2025 9:35 AM

ನಿಮ್ಮ ಗೃಹಸ್ಥ ಜೀವನ ಸಮೃದ್ಧವಾಗಲು, ಕುಟುಂಬದಲ್ಲಿ ಸಂತೋಷವು ಉಂಟಾಗಲು ಈ ಪರಿಹಾರ ಮಾಡಿ

22/05/2025 9:18 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.