ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಅವರಿಗೆ ಕರ್ನಾಟಕ ರಾಜ್ಯ ಬಲಿಜ ಸಂಘದ ಬೆಂಬಲ ಘೋಷಣೆ ಮಾಡಲಾಗಿದೆ.
ದಿನಾಂಕ :20-4- 2024 ರಂದು ವಿಲ್ಸನ್ ಗಾರ್ಡನ್ ಕ್ಲಬ್ ನಲ್ಲಿ ಕರ್ನಾಟಕ ರಾಜ್ಯ ಬಲಿಜ ಸಂಘ ಹಾಗೂ ಕರ್ನಾಟಕ ರಾಜ್ಯ ಬಲಿಜ ಸಂಘಗಳ ಒಕ್ಕೂಟದ ಅಧ್ಯಕ್ಷ ಟಿ ವೇಣುಗೋಪಾಲ್ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಬಲಿಜ ಜನಾಂಗದ ಪ್ರಮುಖರು ಗಳಾದ ಮಮತ ದೇವರಾಜ್, ಫಿಲಂ ಚೇಂಬರ್ ನ ನರಸಿಂಹಲು ವಿಜಯನಗರದ ಸಂಜೀವಪ್ಪ ಬನಗಿರಿ ನಗರದ ಉದ್ಯಮಿ UD ಮಂಜಣ್ಣ ಹಾಗೂ ವೀರೇಂದ್ರ ಕುಮಾರ್, ಜಯನಗರದ ಲಕ್ಷ್ಮಣ್, ಮಿಲ್ಸನ್ ಗಾರ್ಡನ್ ರವಿಚಂದ್ರ, ರಾಜಶೇಖರ್, ಪ್ರಭಾಕರ್, ಲಕ್ಕಸಂದ್ರ ದಿಂದ ಶಾಮಣ್ಣ, ಹೊಸ ರೋಡ್ SLV ಮುನಿರಾಜು, ಬೊಮ್ಮನಹಳ್ಳಿ ಪ್ಯಾರ ಡೈಸ್ ಸ್ಕೂಲ್ ಮಂಜುನಾಥ್, ಮಡಿವಾಳದ ಸಂಜೀವ, BTM ಕ್ಷೇತ್ರದಿಂದ ಚಂದ್ರಶೇಖರ್, ಬಸವನಗುಡಿ ಕ್ಷೇತ್ರದ P G ಶ್ರೀನಿವಾಸಲು ಹಾಗೂ ರವೀಂದ್ರ ಹಾಗೂ ಇನ್ನೂ ಅನೇಕ ಬಲಿಜ ಒಕ್ಕೂಟದ ಪ್ರಮುಖರು ಗಳು ಭಾಗವಹಿಸಿದ್ದ ಸಭೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ದಿಸಿರುವ ಸೌಮ್ಯ ರೆಡ್ಡಿಯವರನ್ನು ಬೆಂಬಲಿಸಲು ತೀರ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ರವರು ಸಹ ಭಾಗವಹಿಸಿ ಧನ್ಯವಾದ ಸಲ್ಲಿಸಿದರು.