Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಜಮ್ಮು ಮತ್ತು ಕಾಶ್ಮೀರದಲ್ಲಿ ದೆಹಲಿ ಬಾಂಬರ್ ಉಮರ್ ಮೊಹಮ್ಮದ್ ನಿವಾಸ ಧ್ವಂಸ

14/11/2025 7:59 AM

BREAKING : ದೆಹಲಿ ಕಾರು ಬಾಂಬ್ ಸ್ಪೋಟದ ಉಗ್ರ `ಉಮರ್ ಮೊಹಮ್ಮದ್’ ಮನೆಯನ್ನು `IED’ ಸ್ಫೋಟಿಸಿದ ಭದ್ರತಾ ಸಂಸ್ಥೆಗಳು.!

14/11/2025 7:56 AM

ರಾಜ್ಯದಲ್ಲಿ `ಮಾನವ-ವನ್ಯಪ್ರಾಣಿ ಸಂಘರ್ಷ’ ತಪ್ಪಿಸಲು ಡ್ರೋನ್ ಕ್ಯಾಮರಾಗಳ ಬಳಕೆ : CM ಸಿದ್ದರಾಮಯ್ಯ

14/11/2025 7:52 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIGG NEWS: ಕರ್ನಾಟಕ ಪೊಲೀಸರು ಕರ್ತವ್ಯದ ವೇಳೆ ಈ ‘ಮಾರ್ಗಸೂಚಿ ಪಾಲನೆ’ ಕಡ್ಡಾಯ!
KARNATAKA

BIGG NEWS: ಕರ್ನಾಟಕ ಪೊಲೀಸರು ಕರ್ತವ್ಯದ ವೇಳೆ ಈ ‘ಮಾರ್ಗಸೂಚಿ ಪಾಲನೆ’ ಕಡ್ಡಾಯ!

By kannadanewsnow0725/10/2025 5:35 AM
  • ಅವಿನಾಶ್‌ ಆರ್‌ ಭೀಮಸಂದ್ರ

 

ಬೆಂಗಳೂರು : ಸಮಾಜದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಉತ್ತಮ ಅಭಿಪ್ರಾಯವನ್ನು ಮೂಡಿಸಲು, ಪೊಲೀಸ್ ಅಧಿಕಾರಿ / ಸಿಬ್ಬಂದಿಯವರುಗಳು ಕರ್ತವ್ಯ ನಿರ್ವಹಿಸುವಾಗ ಪಾರದರ್ಶಕತೆ, ಸೌಜನ್ಯದ ವರ್ತನೆ ಮತ್ತು ನಿಷ್ಠೆಯನ್ನು ಕಾಯ್ದುಕೊಳ್ಳುವ ಬಗ್ಗೆ ಪೊಲೀಸ್‌ ಮಹಾನಿರ್ದೇಶಕರಾದ ಡಾ. ಎಂ.ಎ. ಸಲೀಂ ಅವರು ತಮ್ಮ ಅಧೀನದ ಅಧಿಕಾರಿಗಳಿಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ ಅದು ಈ ಕೆಳಕಂಡತಿದೆ. 

ಪೊಲೀಸ್ ಅಧಿಕಾರಿಗಳು ಸಾರ್ವಜನಿಕರೊಂದಿಗೆ ವರ್ತಿಸುವ ರೀತಿಯು ಪರಿಣಾಮಕಾರಿ ಕಾನೂನು ಜಾರಿ ಮತ್ತು ಸಮುದಾಯದ ಜೊತೆಗಿನ ಉತ್ತಮ ಸಂಬಂಧವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅತ್ಯಂತ ಮುಖ್ಯವಾಗಿದೆ. ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕಾರವನ್ನು ಚಲಾಯಿಸುವಾಗ ನಾಗರೀಕರೊಂದಿಗೆ ಸೌಜನ್ಯದಿಂದ ಮತ್ತು ಗೌರವದಿಂದ ವರ್ತಿಸಬೇಕು. ಪೊಲೀಸರ ನಡವಳಿಕೆಯಲ್ಲಿ ಸೌಜನ್ಯ ಮತ್ತು ಘನತೆ ಎದ್ದು ಕಾಣಬೇಕು. ಸಕಾರಾತ್ಮಕ ಮತ್ತು ವೃತ್ತಿಪರ ನಡವಳಿಕೆಯು ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲಿನ ನಂಬಿಕೆ ಮತ್ತು ಸಹಕಾರವನ್ನು ಹೆಚ್ಚಿಸುತ್ತದೆ. ಪೊಲೀಸ್ ಅಧಿಕಾರಿಗಳ ಸಾರ್ವಜನಿಕರೊಂದಿಗಿನ ನಡವಳಿಕೆಯು ಅಪರಾಧ ತಡೆಗಟ್ಟುವಿಕೆ ಮತ್ತು ಅಪರಾಧ ನಿಯಂತ್ರಣ ಕಾರ್ಯವು ಹೆಚ್ಚು ಪರಿಣಾಮಕಾರಿಯಾಗುವಲ್ಲಿ ಸಹಕರಿಸುತ್ತದೆ. ಅಧಿಕಾರ ದುರುಪಯೋಗಪಡಿಸಿಕೊಂಡು ಸಾರ್ವಜನಿಕರ ಮೇಲೆ ಅನಗತ್ಯ ಬಲ ಪ್ರಯೋಗ ಮಾಡುವುದು ಅಥವಾ ದರ್ಪದಿಂದ ವರ್ತಿಸುವುದು ಇಲಾಖೆಯ ಘನತೆಗೆ ತಕ್ಕುದಾದ ನಡವಳಿಕೆಯಲ್ಲ. ನಾಗರೀಕರ ಹಕ್ಕುಗಳಿಗೆ ಗೌರವವನ್ನು ನೀಡುವುದು ಮತ್ತು ಸಂಯಮದಿಂದ ಅವರೊಡನೆ ವರ್ತಿಸುವುದು ಇಲಾಖೆಯ ಘನತೆಯನ್ನು ಹೆಚ್ಚಿಸಿ ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಗೌರವ ಮೂಡುವಂತೆ ಮಾಡುತ್ತದೆ.

ಸಾರ್ವಜನಿಕರೊಂದಿಗಿನ ಎಲ್ಲಾ ವ್ಯವಹಾರಗಳಲ್ಲಿ ಎಲ್ಲಾ ಪೊಲೀಸ್ ಅಧಿಕಾರಿಗಳು ಗರಿಷ್ಠ ಮಟ್ಟದ ವೃತ್ತಿಪರತೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆ. ಪೊಲೀಸ್ ಇಲಾಖೆಯ ಮೇಲಿನ ಗೌರವ ಹಾಗೂ ನಂಬಿಕೆಗಳು ಸಮಗ್ರವಾಗಿ ಪ್ರತಿ ಅಧಿಕಾರಿಯು ಯಾವ ರೀತಿ ನಡೆದುಕೊಳ್ಳುತ್ತಾನೆ ಎಂಬುದರ ಮೇಲೆ (ಸಮವಸ್ತ್ರ ಧರಿಸಿದ್ದಾಗ ಅಥವಾ ಮಷ್ಟಿಯಲ್ಲಿರುವಾಗ) ಅವಲಂಬಿತವಾಗಿದೆ ಎಂಬುದನ್ನು ಮರೆಯಬಾರದು.

ಈ ನಿಟ್ಟಿನಲ್ಲಿ ಕೆಳಕಂಡ ಮಾರ್ಗಸೂಚಿಗಳನ್ನು ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಕಟ್ಟುನಿಟ್ಟಾಗಿ ಪಾಲಿಸುವುದು:

1. ಇಲಾಖೆಯ ಎಲ್ಲಾ ಅಧಿಕೃತ ವ್ಯವಹಾರಗಳು ಮತ್ತು ಕಾರ್ಯವಿಧಾನಗಳಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು. ಪೊಲೀಸ್ ಠಾಣೆಗೆ ಭೇಟಿ ನೀಡುವ ಯಾವುದೇ ವ್ಯಕ್ತಿಯ ಸಾಮಾಜಿಕ ಅಥವಾ ಆರ್ಥಿಕ ಹಿನ್ನೆಲೆಯನ್ನು ಗಮನಿಸದೇ ಎಲ್ಲರನ್ನೂ ಸಮಾನವಾಗಿ ಪರಿಗಣಿಸಬೇಕು.

2. ಸಾರ್ವಜನಿಕರ ಕುಂದುಕೊರತೆಗಳನ್ನು ತಾಳ್ಮೆಯಿಂದ ಆಲಿಸಿ ಮತ್ತು ಕಾನೂನಿನ ಪ್ರಕಾರ ಅನಗತ್ಯ ಕಾಲವಿಳಂಬವಿಲ್ಲದೇ ದೂರುಗಳನ್ನು ದಾಖಲಿಸುವುದು.
3. ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಅಥವಾ ವರ್ತನೆಯನ್ನು ತೋರದೆ ಯಾವಾಗಲೂ ಸೌಜನ್ಯ ಮತ್ತು ಘನತೆಯಿಂದ ವರ್ತಿಸಿ ಕಾನೂನು ಜಾರಿಗೊಳಿಸುವಲ್ಲಿ ದೃಢತೆಯನ್ನು ಪ್ರದರ್ಶಿಸುವುದು.

4. ಯಾವುದೇ ಸಂದರ್ಭದಲ್ಲೂ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳಿಂದ, ಯಾವುದೇ ರೀತಿಯ ಬೇಡಿಕೆ ಇಡುವುದರಿಂದ ಅಥವಾ ಯಾವುದೇ ಅಕ್ರಮ ಸಹಾಯ/ಲಾಭವನ್ನು ಸ್ವೀಕರಿಸುವುದರಿಂದ ಸಂಪೂರ್ಣವಾಗಿ ದೂರವಿರಬೇಕು.

5. ಕರ್ತವ್ಯದ ಸಮಯದಲ್ಲಿ/ಕರ್ತವ್ಯ ಮುಗಿದ ನಂತರವೂ ನೈತಿಕವಾಗಿ ಇತರರಿಗೆ ಮಾದರಿಯಾಗುವಂತೆ ಇದ್ದು ಇಲಾಖೆಯ ನೀತಿ ನಿಯಮಗಳನ್ನು ಎತ್ತಿಹಿಡಿಯಬೇಕು.

6. ಸ್ಟೇಷನ್ ಹೌಸ್ ಡೈರಿಗಳು ಮತ್ತು ಕೇಸ್ ಫೈಲ್ ಗಳಲ್ಲಿ ನಿಖರ ಮತ್ತು ಇಂದೀಕರಿಸಿದ ದಾಖಲೆಗಳನ್ನು ಕಾಯ್ದುಕೊಳ್ಳಬೇಕು ಮತ್ತು ಸಮಗ್ರವಾಗಿ ನಿರ್ವಹಿಸಬೇಕು.
7. ತನಿಖಾ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಮತ್ತು ಪ್ರತಿ ಹಂತದಲ್ಲೂ ಜವಾಬ್ದಾರಿಯಿಂದ ಕಾರ್ಯನಿರ್ವಹಣೆ ಮಾಡಬೇಕು. ಯಾವುದೇ ನಾಗರೀಕರಿಗೆ ಅನಗತ್ಯವಾಗಿ ತೊಂದರೆ ನೀಡಬಾರದು.

8. ಸಂತ್ರಸ್ಥರು, ಮಹಿಳೆಯರು, ಹಿರಿಯ ನಾಗರೀಕರು ಮತ್ತು ಮಕ್ಕಳೊಂದಿಗೆ ವಿಶೇಷ ಕಾಳಜಿಯಿಂದ ಮತ್ತು ಸೂಕ್ಷ್ಮತೆಯಿಂದ ವರ್ತಿಸಬೇಕು.

9. ಸಾರ್ವಜನಿಕರ ದೂರುಗಳ ಸ್ಥಿತಿ ಮತ್ತು ಬಾಕಿ ಇರುವ ಪ್ರಕರಣಗಳ ಕುರಿತು ನಾಗರೀಕರಿಗೆ ಮಾಹಿತಿ ನೀಡಬೇಕು. ಕರ್ತವ್ಯಕ್ಕೆ ಹಾಜರಾಗುವುದು ಮತ್ತು ಅಧಿಕೃತ ಕಾರ್ಯಗಳನ್ನು ನಿರ್ವಹಿಸುವಲ್ಲಿ ಶಿಸ್ತಿನಿಂದ ಸಮಯ ಪಾಲನೆ ಮಾಡಬೇಕು.

10. ಪೊಲೀಸ್-ಸಾರ್ವಜನಿಕ ಸಂವಹನದಲ್ಲಿ ನ್ಯಾಯಸಮ್ಮತೆಯನ್ನು ಎತ್ತಿಹಿಡಿಯಲು ಸಮವಸ್ತ್ರದ ಮೇಲೆ ಧರಿಸುವ ಕ್ಯಾಮೆರಾಗಳನ್ನು ಮತ್ತು ಲಭ್ಯವಿರುವ ತಂತ್ರಜ್ಞಾನಗಳನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳಬೇಕು.

11. ಎಲ್ಲಾ ಅಧಿಕೃತ ವಿಷಯಗಳಲ್ಲಿ ನ್ಯಾಯಾಂಗ ಮತ್ತು ಆಡಳಿತಾತ್ಮಕ ಅಧಿಕಾರಿಗಳಿಗೆ ಪೂರ್ಣ ಸಹಕಾರವನ್ನು ನೀಡಿ, ಶೋಧ, ಬಂಧನ ಅಥವಾ ವಿಚಾರಣೆಯ ಸಮಯದಲ್ಲಿ ಸಾರ್ವಜನಿಕರ ಖಾಸಗಿತನ ಮತ್ತು ಘನತೆಯನ್ನು ಗೌರವಿಸಿ, ಅಧಿಕಾರದ ದುರುಪಯೋಗ ಅಥವಾ ದೌರ್ಜನ್ಯದಿಂದ ದೂರವಿರಿ ಮತ್ತು ಸದ್ವರ್ತನೆಗೆ ಮಾದರಿಯಾಗಿರಿ.

12. ಸಮುದಾಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಪಾರದರ್ಶಕ, ಕಾನೂನುಬದ್ಧ ಮತ್ತು ಸಹಾನುಭೂತಿಯ ಪೊಲೀಸಿಂಗ್ ಅಭ್ಯಾಸಗಳ ಮೂಲಕ ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವುದು.

13. ಪೊಲೀಸ್ ಕಾರ್ಯಗಳ ಮೇಲೆ ಪ್ರಭಾವ ಬೀರುವ ಅಥವಾ ಭ್ರಷ್ಟಗೊಳಿಸುವ ಯಾವುದೇ ಪ್ರಯತ್ನಗಳು ಕಂಡುಬಂದಲ್ಲಿ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿರಿ.

14. ಬೇರೆ ಠಾಣಾ ವ್ಯಾಪ್ತಿಯ ದೂರು ಬಂದಲ್ಲಿ ದೂರುದಾರರನ್ನು ಸಂಬಂಧಿಸಿದ ಠಾಣೆಗೆ ಹೋಗಿ ದೂರು ನೀಡುವಂತೆ ಹೇಳದೇ, ಠಾಣೆಯಲ್ಲಿ ಶೂನ್ಯ ಪ್ರವ. ವರದಿಯನ್ನು ದಾಖಲಿಸಿ ಆ ನಂತರ ವ್ಯಾಪ್ತಿಯ ಆಧಾರದ ಮೇಲೆ ಸಂಬಂಧಪಟ್ಟ ಠಾಣೆಗೆ ದೂರನ್ನು ವರ್ಗಾಯಿಸುವುದು.

15. ಮಹಿಳೆಯರನ್ನು ಸಂಜೆ 06:00 ಗಂಟೆಯ ನಂತರ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಅಥವಾ ಹೇಳಿಕೆಯನ್ನು ನೀಡಲು ಕರೆತರಬಾರದು.

16. ಮಹಿಳೆಯು ಒಂದು ವೇಳೆ ಆರೋಪಿಯಾಗಿದ್ದಲ್ಲಿ ಅಥವಾ ಸಂತ್ರಸ್ಥೆಯಾಗಿದ್ದಲ್ಲಿ ಆಕೆಯನ್ನು ಮಹಿಳಾ ಪೊಲೀಸ್ ಅಧಿಕಾರಿಯ ನೆರವಿನೊಂದಿಗೆ, ಮಹಿಳೆಯ ವಾಸದ ಸ್ಥಳ/ಮನೆಯಲ್ಲಿಯೇ ವಿಚಾರಣೆ ಮಾಡಬೇಕು.

17. ಕ್ರಿಮಿನಲ್ ಪ್ರಕರಣಗಳಲ್ಲಿ ಮಹಿಳೆಯರು ಭಾಗಿಯಾದಾಗ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಅವರಿಗೆ ಯಾವುದೇ ಅವಮಾನಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು ಮತ್ತು ಅವರನ್ನು ಸಾರ್ವಜನಿಕರ ದೂರುಗಳ ಸ್ಥಿತಿ ಮತ್ತು ಬಾಕಿ ಇರುವ ಪ್ರಕರಣಗಳ ಕುರಿತು ನಾಗರೀಕರಿಗೆ ಮಾಹಿತಿ ನೀಡಬೇಕು. ಕರ್ತವ್ಯಕ್ಕೆ ಹಾಜರಾಗುವುದು ಮತ್ತು ಅಧಿಕೃತ ಕಾರ್ಯಗಳನ್ನು ನಿರ್ವಹಿಸುವಲ್ಲಿ ಶಿಸ್ತಿನಿಂದ ಸಮಯ ಪಾಲನೆ ಮಾಡಬೇಕು.

18. ಉತ್ತಮವಾಗಿ ನೀಟಾದ ಸಮವಸ್ತ್ರವನ್ನು/ಮಷ್ಟಿ ಬಟ್ಟೆಗಳನ್ನು ಧರಿಸುವ ಪೊಲೀಸ್ ಅಧಿಕಾರಿಯು ಸಾರ್ವಜನಿಕರಿಂದ ಉತ್ತಮ ಗೌರವವನ್ನು ಪಡೆಯುತ್ತಾನೆ. ಅಧಿಕಾರಿ ಮತ್ತು ಸಿಬ್ಬಂದಿಗಳು ನೀಟಾದ Turn out ಹೊಂದಿರಬೇಕು. ಇದು ಪೊಲೀಸ್ ಅಧಿಕಾರಿಯ ವ್ಯಕ್ತಿತ್ವ ಹಾಗೂ ಕಾರ್ಯದಕ್ಷತೆಗಳನ್ನು ಉತ್ತೇಜಿಸುತ್ತದೆ. ನೀಟಾದ ಸಮವಸ್ತ್ರವು ವೃತ್ತಿಪರತೆ ಮತ್ತು ಶಿಸ್ತಿನ ಪ್ರತಿಬಿಂಬ ಅಷ್ಟೇ ಅಲ್ಲ ಪರಿಣಾಮಕಾರಿ ಪೊಲೀಸ್ ಕಾರ್ಯನಿರ್ವಹಣೆಗೆ ಅತ್ಯಗತ್ಯ.

ಪ್ರತಿಯೊಬ್ಬ ಅಧಿಕಾರಿಯು ಸಾರ್ವಜನಿಕರ ವಿಶ್ವಾಸವು ಪೊಲೀಸ್ ಇಲಾಖೆಯ ಅತ್ಯಂತ ಮೌಲ್ಯಯುತ ಆಸ್ತಿಯೆಂಬುದನ್ನು ನೆನಪಿಟ್ಟುಕೊಳ್ಳಬೇಕು. ಈ ಸೂಚನೆಗಳಿಂದ ಯಾವುದೇ ವಿಚಲನವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಇಲಾಖಾ ನಿಯಮಗಳ ಪ್ರಕಾರ ವ್ಯವಹರಿಸಲಾಗುವುದು. ಎಲ್ಲಾ ಘಟಕಾಧಿಕಾರಿಗಳು ಈ ಸುತ್ತೋಲೆಯ ಅಂಶಗಳನ್ನು ತಮ್ಮ ಅಧೀನದಲ್ಲಿ ಇರುವ ಎಲ್ಲಾ ಸಿಬ್ಬಂದಿಗಳಿಗೆ ತಿಳಿಸಬೇಕು ಮತ್ತು ಕಟ್ಟುನಿಟ್ಟಾದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು.

BIGG NEWS: Karnataka Police make it mandatory to follow these 'guidelines' while on duty...! BIGG NEWS: ಕರ್ನಾಟಕ ಪೊಲೀಸರು ಕರ್ತವ್ಯದ ವೇಳೆ ಈ 'ಮಾರ್ಗಸೂಚಿ ಪಾಲನೆ' ಕಡ್ಡಾಯ...!
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ `ಮಾನವ-ವನ್ಯಪ್ರಾಣಿ ಸಂಘರ್ಷ’ ತಪ್ಪಿಸಲು ಡ್ರೋನ್ ಕ್ಯಾಮರಾಗಳ ಬಳಕೆ : CM ಸಿದ್ದರಾಮಯ್ಯ

14/11/2025 7:52 AM2 Mins Read

ALERT : ಸಾರ್ವಜನಿಕರೇ `ನಕಲಿ ಡಾಕ್ಟರ್’ ಗಳ ಬಗ್ಗೆ ಇರಲಿ ಎಚ್ಚರ : ‘SSLC’ ಓದಿ ವೈದ್ಯ ವೃತ್ತಿ ಮಾಡುತ್ತಿದ್ದ ವ್ಯಕ್ತಿಯ ಕ್ಲಿನಿಕ್ ಸೀಜ್.!

14/11/2025 7:45 AM1 Min Read

Childrens Day 2025 : ಇಂದು `ಮಕ್ಕಳ ದಿನಾಚರಣೆ’ : ಈ ದಿನದ ಇತಿಹಾಸ, ಥೀಮ್, ಮಹತ್ವ ತಿಳಿಯಿರಿ

14/11/2025 7:41 AM2 Mins Read
Recent News

BREAKING: ಜಮ್ಮು ಮತ್ತು ಕಾಶ್ಮೀರದಲ್ಲಿ ದೆಹಲಿ ಬಾಂಬರ್ ಉಮರ್ ಮೊಹಮ್ಮದ್ ನಿವಾಸ ಧ್ವಂಸ

14/11/2025 7:59 AM

BREAKING : ದೆಹಲಿ ಕಾರು ಬಾಂಬ್ ಸ್ಪೋಟದ ಉಗ್ರ `ಉಮರ್ ಮೊಹಮ್ಮದ್’ ಮನೆಯನ್ನು `IED’ ಸ್ಫೋಟಿಸಿದ ಭದ್ರತಾ ಸಂಸ್ಥೆಗಳು.!

14/11/2025 7:56 AM

ರಾಜ್ಯದಲ್ಲಿ `ಮಾನವ-ವನ್ಯಪ್ರಾಣಿ ಸಂಘರ್ಷ’ ತಪ್ಪಿಸಲು ಡ್ರೋನ್ ಕ್ಯಾಮರಾಗಳ ಬಳಕೆ : CM ಸಿದ್ದರಾಮಯ್ಯ

14/11/2025 7:52 AM

ALERT : ಸಾರ್ವಜನಿಕರೇ `ನಕಲಿ ಡಾಕ್ಟರ್’ ಗಳ ಬಗ್ಗೆ ಇರಲಿ ಎಚ್ಚರ : ‘SSLC’ ಓದಿ ವೈದ್ಯ ವೃತ್ತಿ ಮಾಡುತ್ತಿದ್ದ ವ್ಯಕ್ತಿಯ ಕ್ಲಿನಿಕ್ ಸೀಜ್.!

14/11/2025 7:45 AM
State News
KARNATAKA

ರಾಜ್ಯದಲ್ಲಿ `ಮಾನವ-ವನ್ಯಪ್ರಾಣಿ ಸಂಘರ್ಷ’ ತಪ್ಪಿಸಲು ಡ್ರೋನ್ ಕ್ಯಾಮರಾಗಳ ಬಳಕೆ : CM ಸಿದ್ದರಾಮಯ್ಯ

By kannadanewsnow5714/11/2025 7:52 AM KARNATAKA 2 Mins Read

ಬೆಂಗಳೂರು : ಮಾನವ-ವನ್ಯಪ್ರಾಣಿ ಸಂಘರ್ಷ ತಪ್ಪಿಸಲು ಡ್ರೋನ್ ಕ್ಯಾಮರಾಗಳ ನಿಗಾ ಹೆಚ್ಚಿಸಿ, ಕೃಪಾಕರ ಸೇನಾನಿ-ಸಂಜಯ್ ಗುಬ್ಬಿ ಸೇರಿದಂತೆ ತಜ್ಞರ ಜೊತೆ…

ALERT : ಸಾರ್ವಜನಿಕರೇ `ನಕಲಿ ಡಾಕ್ಟರ್’ ಗಳ ಬಗ್ಗೆ ಇರಲಿ ಎಚ್ಚರ : ‘SSLC’ ಓದಿ ವೈದ್ಯ ವೃತ್ತಿ ಮಾಡುತ್ತಿದ್ದ ವ್ಯಕ್ತಿಯ ಕ್ಲಿನಿಕ್ ಸೀಜ್.!

14/11/2025 7:45 AM

Childrens Day 2025 : ಇಂದು `ಮಕ್ಕಳ ದಿನಾಚರಣೆ’ : ಈ ದಿನದ ಇತಿಹಾಸ, ಥೀಮ್, ಮಹತ್ವ ತಿಳಿಯಿರಿ

14/11/2025 7:41 AM

ALERT : ರಕ್ತ ಸೋಂಕಿನ ಮೊದಲ ಲಕ್ಷಣಗಳು ಇವು : ತಡಮಾಡಿದರೆ ನಿಮ್ಮ ಅಂಗಾಂಗಗಳಿಗೆ ಹಾನಿ.!

14/11/2025 7:37 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.