ಬೆಂಗಳೂರು: ಸುಪ್ರೀಂ ಕೋರ್ಟ್ ಸೂಚನೆಯಂತೆ ಉತ್ತರಾಖಾಂಡದಲ್ಲಿ ಪತಂಜಲಿಯ ಕೆಲ ಉತ್ಪನ್ನಗಳಿಗೆ ನಿಷೇಧ ಹೇರಲಾಗಿದೆ. ಈ ಬೆನ್ನಲ್ಲೇ ಕರ್ನಾಟಕದಲ್ಲೂ ಪತಂಜಲಿ ಉತ್ಪನ್ನ ನಿಷೇಧದ ಭೀತಿ ಎದುರಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರೀಕ್ಷೆಗೆ ಆದೇಶಿಸಿದ್ದಾರೆ.
ಇಂದು ಈ ಬಗ್ಗೆ ಎಕ್ಸ್ ಮಾಡಿರುವಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಉತ್ತರಕಾಂಡದ BJP ಸರ್ಕಾರ #Patanjali 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದೆ. ಜನರ ಆರೋಗ್ಯದ ದೃಷ್ಟಿಯಿಂದ ರಾಜ್ಯದಲ್ಲಿ ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಲು ನಾನು ಆದೇಶಿಸಿದ್ದೆ. ಆಗ ತನ್ನ ಮನೆಗೇ ಬೆಂಕಿ ಬಿದ್ದಂತೆ ಚಡಪಡಿಸಿದ್ದ ವಿಪಕ್ಷ ನಾಯಕ ಆರ್.ಅಶೋಕ್ ಪತಂಜಲಿ ಸಂಸ್ಥೆ ಮೇಲೆ ದ್ವೇಷ ಯಾಕೆ ಎಂದು ನನ್ನನ್ನು ಪ್ರಶ್ನಿಸಿದ್ದರು. ಈಗ ಅವರದ್ದೇ ಪಕ್ಷ ಅಧಿಕಾರದಲ್ಲಿರುವ ಉತ್ತರಕಾಂಡ ಸರ್ಕಾರ ಪತಂಜಲಿಯ 14 ಉತ್ಪನ್ನಗಳ ಪರವಾನಿಗೆಯನ್ನೇ ರದ್ದು ಮಾಡಿದೆ. ಈಗ ಅಶೋಕ್‌ರವರು ನನಗೆ ಕೇಳಿದ್ದ ಪ್ರಶ್ನೆಯನ್ನು ಉತ್ತರಕಾಂಡ ಸರ್ಕಾರಕ್ಕೂ ಕೇಳುತ್ತಾರಾ.? ಎಂದು ಪ್ರಶ್ನಿಸಿದ್ದಾರೆ.
1
ಉತ್ತರಕಾಂಡದ BJP ಸರ್ಕಾರ #Patanjali 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದೆ.ಜನರ ಆರೋಗ್ಯದ ದೃಷ್ಟಿಯಿಂದ ರಾಜ್ಯದಲ್ಲಿ ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಲು ನಾನು ಆದೇಶಿಸಿದ್ದೆ.
ಆಗ ತನ್ನ ಮನೆಗೇ ಬೆಂಕಿ ಬಿದ್ದಂತೆ ಚಡಪಡಿಸಿದ್ದ ವಿಪಕ್ಷ ನಾಯಕ @RAshokaBJP ಪತಂಜಲಿ ಸಂಸ್ಥೆ ಮೇಲೆ ದ್ವೇಷ ಯಾಕೆ ಎಂದು ನನ್ನನ್ನು… https://t.co/vsqXbJqpZo
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 30, 2024
ಸುಳ್ಳು ಜಾಹೀರಾತು ನೀಡಿ ಜನರಿಗೆ ವಂಚಿಸಿದ್ದ #BabaRamdev ಹಾಗೂ ಆಚಾರ್ಯ ಬಾಲಕೃಷ್ಣ ಒಡೆತನದ #Patanjali ಸಂಸ್ಥೆಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಸರ್ವೋಚ್ಚ ನ್ಯಾಯಾಲಯವೇ ಪತಂಜಲಿ ಸಂಸ್ಥೆಯ ವಿಶ್ವಾಸರ್ಹತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾಗ ವಿಪಕ್ಷ ನಾಯಕ ಆರ್.ಅಶೋಕ್ ಪತಂಜಲಿ ಜನ ಮೆಚ್ಚಿದ ಬ್ರ್ಯಾಂಡ್ ಎಂದು ಸರ್ಟಿಫಿಕೇಟ್ ಕೊಟ್ಟಿದ್ದರು. ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸುವುದೇ ಅಪರಾಧವೆಂಬಂತೆ ವರ್ತಿಸಿದ್ದರು. ಆದರೆ ಅವರ ಪಕ್ಷದ ನೇತೃತ್ವದ ಉತ್ತರಕಾಂಡ ಸರ್ಕಾರ ಪತಂಜಲಿಯ ಲೈಸನ್ಸ್ ರದ್ದು ಮಾಡಿದೆ. ಉತ್ತರಕಾಂಡ ಸರ್ಕಾರದ ನಿರ್ಧಾರದ ಬಗ್ಗೆ ಮಾತಾಡಲು ಅಶೋಕ್‌ರವರಿಗೆ ಈಗ ತಾಕತ್ತಿದೆಯೇ.? ಎಂದು ಸವಾಲ್ ಹಾಕಿದ್ದಾರೆ.
2
ಸುಳ್ಳು ಜಾಹೀರಾತು ನೀಡಿ ಜನರಿಗೆ ವಂಚಿಸಿದ್ದ #BabaRamdev ಹಾಗೂ ಆಚಾರ್ಯ ಬಾಲಕೃಷ್ಣ ಒಡೆತನದ #Patanjali ಸಂಸ್ಥೆಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.ಸರ್ವೋಚ್ಚ ನ್ಯಾಯಾಲಯವೇ ಪತಂಜಲಿ ಸಂಸ್ಥೆಯ ವಿಶ್ವಾಸರ್ಹತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾಗ ವಿಪಕ್ಷ ನಾಯಕ @RAshokaBJP ಪತಂಜಲಿ ಜನ ಮೆಚ್ಚಿದ ಬ್ರ್ಯಾಂಡ್ ಎಂದು ಸರ್ಟಿಫಿಕೇಟ್… https://t.co/SU1RBpZhSJ
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 30, 2024
Modi Latter: ನೀವು ನನ್ನ ತಂಡದ ಸದಸ್ಯರಾಗುತ್ತಿರುವುದು ನನಗೆ ದೊಡ್ಡ ಶಕ್ತಿ: ಬೊಮ್ಮಾಯಿಗೆ ಮೋದಿ ಪತ್ರ
ವಸೂಲಿ ಮಾಡಿದ ‘ಬಡ್ಡಿ’ ಗ್ರಾಹಕರಿಗೆ ಹಿಂದಿಗಿಸಿ ; ಬ್ಯಾಂಕುಗಳಿಗೆ ‘RBI’ ಖಡಕ್ ಎಚ್ಚರಿಕೆ