ಬೆಂಗಳೂರು: ಡೆಂಘೀ ಪ್ರಕರಣಗಳನ್ನ ಮುಂದಿಟ್ಟುಕೊಂಡು ಬಿಜೆಪಿ ಬೆಂಗಳೂರಿನ ಬಗ್ಗೆ ಬ್ಯಾಡ್ ಟ್ವೀಟ್ ಮಾಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವುದು ಹೊಸದೇನಲ್ಲ. ಆದರೆ ನಾವು ಮುಂಜಾಗೃತೆ ವಹಿಸಿ ಸಾವುಗಳಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಡೆಂಘೀ ನಿಯಂತ್ರಿಸಲು ಈಗಾಗಲೇ ಆರೋಗ್ಯ ಶ್ರಮವಹಿಸುತ್ತಿದೆ. ಡೆಂಘೀ ಜ್ವರದಿಂದ ಸಾವುಗಳಾಗದಂತೆ ಮುನ್ನೆಚ್ವರಿಕೆ ವಹಿಸಲು ನಾನು ಅಧಿಕಾರಿಗಳೊಂದಿಗೆ ಎರಡು ಸಭೆ ನಡೆಸಿದ್ದೇನೆ.. ಸಿಎಂ ನೇತೃತ್ವದಲ್ಲಿಯೂ ಸಭೆ ನಡೆಸಿ ಸಲಹೆ ಸೂಚನೆಗಳನ್ನ ನೀಡಲಾಗಿದೆ ಎಂದರು.
ಸಾವುಗಳನ್ನ ತಡೆಯುವ ನಿಟ್ಟಿನಲ್ಲಿ ಡೆಂಘೀ ಅರ್ಲಿ ಡಿಟೆಕ್ಷನ್ ಗೆ ಒತ್ತು ನೀಡಲಾಗಿದ್ದು, ಟೆಸ್ಟಿಂಗ್ ಹೆಚ್ಚಿಸಲಾಗಿದೆ. ಕಳೆದ ಸಾಲಿಗೆ ಹೊಲಿಸಿದರೆ ಶೇ 40 ರಷ್ಟು ಟೆಸ್ಟಿಂಗ್ ಹೆಚ್ವಿಸಲಾಗಿದೆ. ಟೆಸ್ಟಿಂಗ್ ಹೆಚ್ಚಳ ಮಾಡಿರುವುದರ ಪರಿಣಾಮ ಡೆಂಘೀ ಪ್ರಕರಣಗಳು ಹೆಚ್ಚಾಗಿವೆ ಎಂಬುದನ್ನ ವಿಪಕ್ಷವಾಗಿ ಬಿಜೆಪಿ ಅರಿತುಕೊಳ್ಳಲಿ. ಶೇ 0.09 ರಷ್ಟು ಡೆಂಘೀ ಡೆತ್ ರೇಟ್ ಇದೆ. ಬೆಂಗಳೂರಿನಲ್ಲಿ 2 ಸಾವಿಗೀಡಾಗಿದ್ದು, ಒಬ್ಬರಿಗೆ ಕ್ಯಾನ್ಸರ್ ಇತ್ತು ಎಂದು ತಿಳಿದುಬಂದಿದೆ.
ಈಗಾಗಲೇ ಈಡಿಸ್ ಸೊಳ್ಳೆಯ ಲಾರ್ವಾ ನಾಶಪಡಿಸುವ ಕಾರ್ಯ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಸ್ಥಳೀಯ ಸಂಸ್ಥೆಗಳಿಂದ ನಡೆಯುತ್ತಿದೆ.. ಪ್ರತಿ ಶುಕ್ರವಾರ ಲಾರ್ವಾನಾಶಕ ದಿನವನ್ನಾಗಿ ಆಂದೋಲನದ ರೀತಿಯಲ್ಲಿ ಕ್ರಮ ಕೈಗೊಂಡಿದ್ದೇವೆ. ಹೀಗಿದ್ದಾಗಲು ಡೆಂಘೀ ಯಲ್ಲಿ ಬಿಜೆಪಿ ರಾಜಕಾರಣ ಬೆರಸುವುದು ಸರಿಯಲ್ಲ ಎಂದರು.
ಯಾವ ಸರ್ಕಾರ ಅಸ್ಥಿತ್ವದಲ್ಲಿದೆ ಎಂದು ನೋಡಿ ಡೆಂಘೀ ಉಲ್ಬಣಗೊಳ್ಳುತ್ತದೆಯೇ ಎಂದು ಪ್ರಶ್ನಿಸಿರುವ ಸಚಿವರು, ಮೋದಿ ಸರ್ಕಾರ ದೇಶದಲ್ಲಿ ಕೋವಿಡ್ ಹಬ್ಬಿಸಿತು ಎಂದು ಆಪಾದಿಸಿದರೆ ಹೇಗಿರುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಕಾಯಿಲೆ ಹರಡುವುದನ್ನು ಈ ರೀತಿ ವ್ಯಾಖ್ಯಾನಿಸುವುದು, ಸಚಿವರಿಗೆ ಡೆಂಘೀ ಬರಲಿ ಎಂದು ಬಿಜೆಪಿ ಬಯಸುವುದು ಆ ಪಕ್ಷದ ಮನಃಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಆರೋಗ್ಯ ಇಲಾಖೆ ಈ ಹಿಂದೆ ಎಷ್ಟು ಅನಾರೋಗ್ಯವಾಗಿತ್ತು ಈಗ ಎಷ್ಟರ ಮಟ್ಟಿಗೆ ನಾವು ಸುಧಾರಣೆ ತಂದಿದ್ದೇವೆ ಎಂದು ಚರ್ಚಿಸಲು ನಾನು ಸಿದ್ಧನಿದ್ದೇನೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿಷ್ಕ್ರೀಯವಾಗಿದ್ದ ಔಷಧಿ ಸರಬರಾಜು ನಿಗಮವನ್ನ ನಮ್ಮ ಸರ್ಕಾರ ಸುಧಾರಣೆಯತ್ತ ತರುವ ಪ್ರಯತ್ನವನ್ನ ಸತತವಾಗಿ ಮಾಡುತ್ತಿದೆ ಎಂದರು.
ಮಳೆಗಾಲ ಪ್ರಾರಂಭವಾದಾಗ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತದೆ. ಯಾವ ಸರ್ಕಾರ ಅಸ್ಥಿತ್ವದಲ್ಲಿದೆ ? ಯಾರು 🏥ಆರೋಗ್ಯ ಸಚಿವರು ಎಂಬುದರ ಆಧಾರದ ಮೇಲೆ ಡೆಂಗಿ ಹೆಚ್ಚುತ್ತದೆಯೇ ? @BJP4Karnataka ನಾಯಕರು ಕನಿಷ್ಠ ಜ್ಞಾನವೂ ಇಲ್ಲದೇ ಮಾಡಿರುವ ಟೀಕೆಗೆ ನಾವು ತಿರುಗೇಟು ನೀಡಬಹುದಲ್ಲವೇ ? ಮೋದಿ ಸರ್ಕಾರ ದೇಶದಲ್ಲಿ #Covid_19 ಹಬ್ಬಿಸಿತು ಎಂದು… https://t.co/o4LFmtb1Qe
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 29, 2024