ಬೆಳಗಾವಿ ಸುವರ್ಣಸೌಧ : ಕರ್ನಾಟಕ ವಿಧಾನಸಭೆಯಲ್ಲಿ ಮಂಡಿಸಲಾದಂತೆ ಮತ್ತು ಪರಿಶೀಲನಾ ಸಮಿತಿಯು ಶಿಫಾರಸ್ಸು ಮಾಡಿದಂತೆ ಹಾಗೂ ಕರ್ನಾಟಕ ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿರುವ ಕರ್ನಾಟಕ ಭೂಕಂದಾಯ ಎರಡನೇ ತಿದ್ದುಪಡಿ ವಿಧೇಯಕ 2025ಕ್ಕೆ ಪರಿಷತ್ತಿನಲ್ಲಿ ಡಿ.17ರಂದು ಅಂಗೀಕಾರ ದೊರೆಯಿತು.
ಕೊಡಗು ಜಿಲ್ಲೆಯ ಭೂ ದಾಖಲೆಗಳನ್ನು ಕಾನೂನಿಗೆ ಅನುಗುಣವಾಗುವಂತೆ ಮಾಡಲು ಮತ್ತು ರಾಜ್ಯದ ಉಳಿದ ಭಾಗದಲ್ಲಿ ಅದರ ಸಂಗತತೆಯನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಿ ಈ ವಿಧೇಯಕ ತರಲಾಗುತ್ತಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿ ವಿಧೇಯಕವನ್ನು ಅಂಗೀಕರಿಸಲು ಕೋರಿದರು.
ಚರ್ಚೆಯ ಬಳಿಕ, ಧ್ವನಿಮತದ ಮೂಲಕ ಪರಿಷತ್ತ್ತಿನಲ್ಲಿ ವಿಧೇಯಕಕ್ಕೆ ಅನುಮೋದನೆ ದೊರೆಯಿತು.
ಭಗವದ್ಗೀತೆ ಬೋಧಿಸಿ ಎಂದಿದ್ದು ಧರ್ಮ ಸಂಘರ್ಷ ಉಂಟು ಮಾಡುವುದಕ್ಕಲ್ಲ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ








