Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಮೈದಾನದಲ್ಲೇ ಕುಸಿದು ಬಿದ್ದು `ಹೃದಯಾಘಾತ’ದಿಂದ ಕ್ರಿಕೆಟರ್ ಸಾವು : ಆಘಾತಕಾರಿ ವಿಡಿಯೋ ವೈರಲ್ | WATCH VIDEO

07/02/2026 1:10 PM

Shocking: ನ್ಯುಮೋನಿಯಾ ಅಂದುಕೊಂಡಿದ್ದ ವೈದ್ಯರಿಗೆ ಶಾಕ್: ಒಂದು ವರ್ಷದ ಮಗುವಿನ ಶ್ವಾಸಕೋಶದಲ್ಲಿತ್ತು ಎಲ್‌ಇಡಿ ಬಲ್ಬ್!

07/02/2026 1:01 PM

SHOCKING : `ಫ್ರೀ ಫೈರ್ ಗೇಮ್’ ಚಟಕ್ಕೆ ಇಡೀ ಕುಟುಂಬ ಬಲಿ : ಬಿಹಾರದಲ್ಲಿ ಕರ್ನಾಟಕದ 4 ಮಂದಿ ಆತ್ಮಹತ್ಯೆ.!

07/02/2026 12:52 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ‘ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ’ ಜಾರಿ: ಯಾರಿಗೆ ಎಷ್ಟು ಪ್ರಮಾಣ.? ಇಲ್ಲಿದೆ ಆದೇಶ
KARNATAKA

ರಾಜ್ಯದಲ್ಲಿ ‘ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ’ ಜಾರಿ: ಯಾರಿಗೆ ಎಷ್ಟು ಪ್ರಮಾಣ.? ಇಲ್ಲಿದೆ ಆದೇಶ

By kannadanewsnow0926/08/2025 5:40 AM

ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿಯನ್ನು ಸರ್ಕಾರ ನಿಗದಿ ಪಡಿಸಿತ್ತು. ಇದೀಗ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಗಳಿಗೆ ಶಿಕ್ಷಣ, ಉದ್ಯೋಗದಲ್ಲಿ ಒಳ ಮೀಸಲಾತಿ ಕಲ್ಪಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಹಾಗಾದರೆ ಯಾರಿಗೆ ಎಷ್ಟು ಒಳ ಮೀಸಲಾತಿ ಪ್ರಮಾಣ ಅಂತ ಅಧಿಕೃತ ಆದೇಶ ಮುಂದೆ ಓದಿ.

ಈ ಕುರಿತಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಅಧಿಕೃತವಾಗಿ ನಡವಳಿ ಹೊರಡಿಸಿದ್ದು, ಕರ್ನಾಟಕ ಸರ್ಕಾರವು ಮಾನ್ಯ ಸರ್ವೋಚ್ಚ ನ್ಯಾಯಾಲಯವು CA No 2317 ರಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಪಂಜಾಬ್ ರಾಜ್ಯ ಮತ್ತು ಇತರರು Vs ದೇವಿಂದರ್ ಸಿಂಗ್ ಪುಕರಣದಲ್ಲಿ ನೀಡಿರುವ ತೀರ್ಪಿನ ಅನ್ವಯ ಪರಿಶಿಷ್ಟ ಜಾತಿಗಳ ಒಳಮೀಸಲಾತಿ (ವರ್ಗೀಕರಣ) ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಆಯೋಗ ವಿಚಾರಣಾ ಕಾಯ್ದೆ 1952 ರಂತೆ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಇವರ ನೇತೃತ್ವದ ಏಕ ಸದಸ್ಯ ಆಯೋಗವನ್ನು ಸರ್ಕಾರದ ಆದೇಶ ಸಂಖ್ಯೆ : SWD/SLP/8 2024(P-1), ದಿನಾಂಕ: 12-11-2024 ಮತ್ತು ದಿನಾಂಕ: 03-12-2024 ರಂತೆ ರಚಿಸಿ ಆದೇಶಿಸಲಾಗಿದೆ. ಅದರಂತೆ, ಸದರಿ ಆಯೋಗವು ದಿನಾಂಕ: 04-08-2025 ರಂದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ. ಆಯೋಗವು ಪರಿಶಿಷ್ಟ ಜಾತಿಗಳನ್ನು ಪುವರ್ಗ ಎ, ಬಿ, ಸಿ, ಡಿ ಮತ್ತು ಇ ಎಂದು 5 ಗುಂಪುಗಳಾಗಿ ವರ್ಗೀಕರಿಸಿದ್ದು, ಸದರಿ ಆಯೋಗದ ವರದಿಯನ್ನು ಪರಿಶೀಲಿಸಿ, ಸೂಕ್ತ ನಿರ್ಧಾರಕ್ಕಾಗಿ, ಸಚಿವ ಸಂಪುಟದ ಮುಂದೆ ಮಂಡಿಸಲಾಗಿದೆ. ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ/ವರ್ಗೀಕರಣದ ಬಗ್ಗೆ ನ್ಯಾಯಮೂರ್ತಿ ಡಾ. ಹೆಚ್.ಎನ್. ನಾಗಮೋಹನ್ ದಾಸ್ ಆಯೋಗವು ನೀಡಿರುವ ವರದಿಯನ್ನು ಕೂಲಂಕುಷವಾಗಿ ಚರ್ಚಿಸಿ, ಕೆಲವು ಮಾರ್ಪಾಡುಗಳೊಂದಿಗೆ ಸದರಿ ವರದಿಯನ್ನು ಸಚಿವ ಸಂಪುಟವು ಒಪ್ಪಿರುತ್ತದೆ. ಈ ಹಿನ್ನೆಲೆಯಲ್ಲಿ ಈ ಕೆಳಕಂಡಂತೆ ಆದೇಶಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಅಗತ್ಯ ಮಾರ್ಪಾಡುಗಳೊಂದಿಗೆ ಅಂಗೀಕರಿಸಿ, ಪರಿಶಿಷ್ಟ ಜಾತಿಯಲ್ಲಿರುವ ಜಾತಿಗಳನ್ನು 5 ಪವರ್ಗಗಳ ಬದಲಾಗಿ ಪುವರ್ಗ- ಎ, ಪವರ್ಗ-ಬಿ ಮತ್ತು ಪುವರ್ಗ-ಸಿ ಎಂದು 3 ಪವರ್ಗಳಾಗಿ ವರ್ಗೀಕರಿಸಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪುಸ್ತುತ ಜಾರಿಯಲ್ಲಿರುವ ಶೇ.17% ಮೀಸಲಾತಿಯನ್ನು ಪವರ್ಗ- ಎ ರಲ್ಲಿನ ಸಮುದಾಯಗಳಿಗೆ ಶೇ.6%, ಪವರ್ಗ-ಬಿ ರಲ್ಲಿನ ಸಮುದಾಯಗಳಿಗೆ ಶೇ. 6% ಮತ್ತು ಪುವರ್ಗ -ಸಿ ರಲ್ಲಿನ ಸಮುದಾಯಗಳಿಗೆ ಶೇ.5% ರಷ್ಟು ನಿಗಧಿಪಡಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಿದೆ. (ವಿವರಗಳನ್ನು ಅನುಬಂಧ-1, 2 ಮತ್ತು 3 ರಲ್ಲಿ ನೀಡಲಾಗಿದೆ.

ಆಯೋಗದ ವರದಿಯಲ್ಲಿನ ಪುವರ್ಗ- ಇ ರಲ್ಲಿನ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಈ 3 ಸಮುದಾಯಗಳು ತಮ್ಮ ಮೂಲ ಜಾತಿಯನ್ನು ತಿಳಿಸದೇ ಇರುವುದರಿಂದ ಸದರಿ 3 ಜಾತಿಗಳು ಅನುಬಂಧಗಳಲ್ಲಿರುವ ಪವರ್ಗ-ಎ ಅಥವಾ ಪುವರ್ಗ-ಬಿ ಗಳಲ್ಲಿ ಮೀಸಲಾತಿ ಸೌಲಭ್ಯವನ್ನು ಪಡೆಯಬಹುದು.

ರಾಜ್ಯ ಸಿವಿಲ್ ಸೇವೆಗಳ ಹುದ್ದೆಗಳಿಗೆ ಒಳಮೀಸಲಾತಿ ಹಿನ್ನೆಲೆಯಲ್ಲಿ ತಡೆಹಿಡಿಯಲಾದ ನೇರ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಕ್ರಮವಹಿಸುವುದು. ಎಲ್ಲಾ ಇಲಾಖೆಗಳು ಮತ್ತು ಅವುಗಳ ಅಧೀನದ ಎಲ್ಲಾ ನಿಗಮ/ಮಂಡಳಿ/ಸಂಸ್ಥೆಗಳಲ್ಲಿ ಮುಂಬಡ್ತಿ ಪ್ರಕ್ರಿಯೆಯನ್ನೂ ಸಹ ಮುಂದುವರೆಸಬಹುದಾಗಿದೆ.

ಉದ್ಯೋಗಳ ನೇಮಕಾತಿಯಲ್ಲಿ ಹಾಜರಾಗುವ ಎಲ್ಲಾ ಅಭ್ಯರ್ಥಿಗಳಿಗೆ ಆಯಾ ನೇಮಕಾತಿಗಳಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಪ್ರತ್ಯೇಕವಾಗಿ ಆದೇಶ ಹೊರಡಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಅಗತ್ಯ ಕ್ರಮವಹಿಸುವುದು. 5) ಹೊಸ ದತ್ತಾಂಶ ಅಥವಾ ಮಾಹಿತಿ ಬಂದಾಗ ಅಗತ್ಯ ಮಾರ್ಪಾಡುಗಳನ್ನು ಮಾಡಲು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗಕ್ಕೆ ಅಧಿಕಾರ ನೀಡುವ ಬಗ್ಗೆ, ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಅಧಿನಿಯಮ, 2002ಕ್ಕೆ ಸೂಕ್ತ ತಿದ್ದುಪಡಿ ಮಾಡಲಾಗುವುದು.

ಪರಿಶಿಷ್ಟ ಜಾತಿಗಳಲ್ಲಿನ ಚಲನಶೀಲತೆಯನ್ನು ಹಾಗೂ ಲಭ್ಯವಾಗುವ ದತ್ತಾಂಶಗಳನ್ನು ಪರಿಶೀಲಿಸಿಕೊಂಡು, ಕಾಲಕಾಲಕ್ಕೆ ಈ ಜಾತಿಗಳನ್ನು ಅಧ್ಯಯನ ಮಾಡಿ, ವರದಿ ನೀಡಲು ಶಾಶ್ವತ ಪರಿಶಿಷ್ಟ ಜಾತಿಗಳ ಆಯೋಗವನ್ನು ರಚಿಸಲಾಗುವುದು.

ಒಳ ಮೀಸಲಾತಿ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದ್ದು, ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ಅಪರಾಧ ಪುಕರಣಗಳ ಕುರಿತು ಪರಿಶೀಲಿಸಿ ತುರ್ತಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಬಗ್ಗೆ ಸದರಿ ವಿಷಯಕ್ಕೆ ಸಂಬಂಧಿಸಿದ ಸಚಿವ ಸಂಪುಟ ಉಪಸಮಿತಿಯು ಕ್ರಮವಹಿಸುವುದು. (ಗೃಹ ಇಲಾಖೆ ಈ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವುದು)

ಮೇಲ್ಕಂಡ ಆದೇಶವನ್ನು ಸಚಿವ ಸಂಪುಟ ಪುಕರಣ ಸಂಖ್ಯೆ: ಸಿ658/2025, ದಿನಾಂಕ: 19-08-2025ರನ್ವಯ ಹೊರಡಿಸಲಾಗಿದೆ ಎಂದಿದ್ದಾರೆ.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಿನಲ್ಲಿ `ಹೃದಯವಿದ್ರಾವಕ ಘಟನೆ’ : ಪತಿ ಸಾವಿನ ಸುದ್ದಿ ತಿಳಿದು ಪತ್ನಿಯೂ ಆತ್ಮಹತ್ಯೆ.!

07/02/2026 12:32 PM1 Min Read

ಮಹಿಳೆಯರೇ ಗಮನಿಸಿ : ಇದನ್ನು ವಾಷಿಂಗ್ ಮೆಷಿನ್ ಗೆ ಸೇರಿಸಿದ್ರೆ ಬಟ್ಟೆ ಮೇಲಿನ ಕಲೆ ಹೋಗುತ್ತದೆ.!

07/02/2026 12:15 PM1 Min Read

ಗಮನಿಸಿ : ಉತ್ತಮ ಆರೋಗ್ಯಕ್ಕಾಗಿ 40 ವರ್ಷಕ್ಕಿಂತ ಮೇಲ್ಪಟ್ಟವರು ತೆಗೆದುಕೊಳ್ಳಬೇಕಾದ ಪೂರಕಗಳು ಇವು.!

07/02/2026 12:02 PM1 Min Read
Recent News

SHOCKING : ಮೈದಾನದಲ್ಲೇ ಕುಸಿದು ಬಿದ್ದು `ಹೃದಯಾಘಾತ’ದಿಂದ ಕ್ರಿಕೆಟರ್ ಸಾವು : ಆಘಾತಕಾರಿ ವಿಡಿಯೋ ವೈರಲ್ | WATCH VIDEO

07/02/2026 1:10 PM

Shocking: ನ್ಯುಮೋನಿಯಾ ಅಂದುಕೊಂಡಿದ್ದ ವೈದ್ಯರಿಗೆ ಶಾಕ್: ಒಂದು ವರ್ಷದ ಮಗುವಿನ ಶ್ವಾಸಕೋಶದಲ್ಲಿತ್ತು ಎಲ್‌ಇಡಿ ಬಲ್ಬ್!

07/02/2026 1:01 PM

SHOCKING : `ಫ್ರೀ ಫೈರ್ ಗೇಮ್’ ಚಟಕ್ಕೆ ಇಡೀ ಕುಟುಂಬ ಬಲಿ : ಬಿಹಾರದಲ್ಲಿ ಕರ್ನಾಟಕದ 4 ಮಂದಿ ಆತ್ಮಹತ್ಯೆ.!

07/02/2026 12:52 PM

BREAKING: ಅಮೃತಸರ ಏರ್‌ಪೋರ್ಟ್‌ನಲ್ಲಿ ಡ್ರೋನ್ ಭೀತಿ: ಒಂದು ಗಂಟೆ ಏರ್‌ಸ್ಪೇಸ್ ಬಂದ್ !

07/02/2026 12:50 PM
State News
KARNATAKA

BREAKING : ಬೆಂಗಳೂರಿನಲ್ಲಿ `ಹೃದಯವಿದ್ರಾವಕ ಘಟನೆ’ : ಪತಿ ಸಾವಿನ ಸುದ್ದಿ ತಿಳಿದು ಪತ್ನಿಯೂ ಆತ್ಮಹತ್ಯೆ.!

By kannadanewsnow5707/02/2026 12:32 PM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಪತಿ ಸಾವಿನ ಸುದ್ದಿ ತಿಳಿದು ಪತ್ನಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಮಾದನಾಯಕಹಳ್ಳಿಯಲ್ಲಿ…

ಮಹಿಳೆಯರೇ ಗಮನಿಸಿ : ಇದನ್ನು ವಾಷಿಂಗ್ ಮೆಷಿನ್ ಗೆ ಸೇರಿಸಿದ್ರೆ ಬಟ್ಟೆ ಮೇಲಿನ ಕಲೆ ಹೋಗುತ್ತದೆ.!

07/02/2026 12:15 PM

ಗಮನಿಸಿ : ಉತ್ತಮ ಆರೋಗ್ಯಕ್ಕಾಗಿ 40 ವರ್ಷಕ್ಕಿಂತ ಮೇಲ್ಪಟ್ಟವರು ತೆಗೆದುಕೊಳ್ಳಬೇಕಾದ ಪೂರಕಗಳು ಇವು.!

07/02/2026 12:02 PM

BREAKING : ಮಾಜಿ ಶಾಸಕ `ಯಜಮಾನ್ ಮೋತಿ ವೀರಣ್ಣ’ ನಿಧನ | Moti Veeranna passes away

07/02/2026 11:47 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.