ಬೆಂಗಳೂರು: ಸಾರ್ವಜನಿಕರು ಸೇರಿದಂತೆ ಪೊಲೀಸ್ ಅಧಿಕಾರಿಗಳಿಗೂ ಆನ್ ಲೈನ್ ವಂಚಕರು ಟೋಫಿ ಹಾಕಿದ್ದಾರೆ. ಈ ಬೆನ್ನಲ್ಲೇ ಇದೀಗ ಕರ್ನಾಟಕ ಹೈಕೋರ್ಟ್ ನ ( Karnataka High Court ) ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ಬಿಟ್ಟಿಲ್ಲ. ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹೆಸರಿನಲ್ಲಿ ವಾಟ್ಸಾಪ್ ಮಾಡಿರುವಂತ ಆನ್ ಲೈನ್ ವಂಚಕರು ( Online Fraud ), 10 ಸಾವಿರ ಮೌಲ್ಯದ 9 ಅಮೆಜಾನ್ ಗಿಫ್ಟ್ ವೋಚರ್ ಪಡೆದು ವಂಚಿಸಿರೋದಾಗಿ ತಿಳಿದು ಬಂದಿದೆ. 

BIG NEWS: ಮಂಡ್ಯದ ‘ಮೈಶುಗರ್ ಕಾರ್ಖಾನೆ’ ಆರಂಭಕ್ಕೆ ಮುಹೂರ್ತ ಫಿಕ್ಸ್ | Mandya MySugar Factory

ಕರ್ನಾಟಕ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ಹೆಸರಿನಲ್ಲಿ ಹೈಕೋರ್ಟ್ ಪಿಆರ್ ಓಗೆ ಆಗಂತುಕ ವ್ಯಕ್ತಿಯೊಬ್ಬ ವಾಟ್ಸಾಪ್ ಸಂದೇಶ ಕಳುಹಿಸಿದ್ದಾನೆ. ತಾನು ಹಂಗಾಮಿ ಸಿಜೆ ಎಂಬುದಾಗಿ ಹೇಳಿಕೊಂಡು, ತಮಗೆ 10 ಸಾವಿರ ಮೌಲ್ಯದ 9 ಅಮೆಜಾನ್ ಗಿಫ್ಟ್ ವೋಚರ್ ಕಳಿಸುವಂತೆ ಸೂಚಿಸಿದ್ದಾರೆ. ಇದು ನಿಜವಿರಬೇಕು ಎಂಬುದಾಗಿ ನಂಬಿದಂತ ಪಿ ಆರ್ ಓ, 10 ಸಾವಿರ ಮೌಲ್ಯದ 9 ಅಮೆಜಾನ್ ಗಿಫ್ಟ್ ವೋಚರ್ ಕಳುಹಿಸಿದ್ದಾರೆ.

BIGG NEWS: ಅಟಲ್ ಪಿಂಚಣಿ ಯೋಜನೆ ಹೊಸ ನಿಯಮ: ಹೂಡಿಕೆದಾರರು ಅಕ್ಟೋಬರ್ ನಿಂದ ಸೇರುವಂತಿಲ್ಲ

ಆಗಸ್ಟ್ 6ರಂದು ಬೆಳಿಗ್ಗೆ 7.30ಕ್ಕೆ ಈ ಎಲ್ಲಾ ಘಟನೆ ನಡೆದ ಬಳಿಕ, ಪಿ ಆರ್ ಓ ಹೈಕೋರ್ಟ್ ಹಂಗಾಮಿ ಸಿಜೆ ಹೀಗೆ ಯಾಕ್ ಕೇಳಿದ್ದಾರೆ ಎಂಬುದಾಗಿ ಕ್ರಾಸ್ ವೆರಿಫಿಕೇಷನ್ ಮಾಡಿಕೊಂಡಾಗ, ಅದು ಆನ್ ಲೈನ್ ವಂಚಕರು ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ಈ ಸಂಬಂಧ ಬೆಂಗಳೂರಿನ ಸೈಬರ್ ಕ್ರೈಂ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ, ವಂಚಕರ ಪತ್ತೆಗೆ ಸೈಬರ್ ಕ್ರೈ ಠಾಣೆಯ ಪೊಲೀಸರು ಇಳಿದಿದ್ದಾರೆ.

Share.
Exit mobile version