ನವದೆಹಲಿ: ಕೇಂದ್ರ ಸರ್ಕಾರವು ಅಟಲ್ ಪಿಂಚಣಿ ಯೋಜನೆಯ ಹೂಡಿಕೆ ನಿಯಮಗಳಿಗೆ ತಿದ್ದುಪಡಿ ತಂದಿದ್ದು, 2022 ರ ಅಕ್ಟೋಬರ್ 1 ರಿಂದ ಅನ್ವಯವಾಗಲಿದೆ.

BIGG NEWS: PSI ನೇಮಕಾತಿ ಹಗರಣ; ಜೈಲಿನಲ್ಲಿ ಅಮೃತ್ ಪೌಲ್‍ಗೆ ಕಾಡುತ್ತಿದೆ ಖಿನ್ನತೆ; ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ

 

ಬದಲಾದ ಅಟಲ್ ಪಿಂಚಣಿ ಯೋಜನಾ ನಿಯಮಗಳಲ್ಲಿ, ಆದಾಯ ತೆರಿಗೆ ಪಾವತಿಸುವವರು 2022 ರ ಅಕ್ಟೋಬರ್ 1 ರಿಂದ ಅಟಲ್ ಪಿಂಚಣಿ ಯೋಜನೆಯ ಖಾತೆಯನ್ನು ತೆರೆಯಲು ಅರ್ಹರಾಗಿರುವುದಿಲ್ಲ. ಆದಾಯ ತೆರಿಗೆ ಪಾವತಿದಾರರಾಗಿರುವ ಹೂಡಿಕೆದಾರರು 2022 ರ ಅಕ್ಟೋಬರ್ 1 ರಂದು ಅಥವಾ ನಂತರ ಎಪಿವೈ ಯೋಜನೆಗೆ ಸೇರಿದರೆ, ಅವರ ಎಪಿವೈ ಖಾತೆಯನ್ನು ಮುಚ್ಚಬೇಕಾಗುತ್ತದೆ. ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಹಣಕಾಸು ಸೇವೆಗಳ ಇಲಾಖೆ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ.

Share.
Exit mobile version