ಬೆಂಗಳೂರು: ಪಿಎಸ್‌ ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸದ್ಯ ಮಾಜಿ ಎಡಿಜಿಪಿ ಅಮೃತ್ ಪೌಲ್‍ ಜೈಲಿನಲ್ಲಿದ್ದಾರೆ. ಅಲ್ಲಿ ಅವರಿಗೆ ಒಂಟಿತನ ಕಾಡುತ್ತಿದ್ದರಿಂದ ತೀವ್ರ ಡಿಪ್ರೆಶನ್‌ ಗೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.

BIGG BREAKING NEWS : ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ : ಕೇರಳದಲ್ಲಿ ಮೂವರು ಪ್ರಮುಖ ಆರೋಪಿಗಳು ಪೊಲೀಸರ ವಶಕ್ಕೆ

 

ಹೀಗಾಗಿ ಅವರನ್ನು ಜೈಲಾಧಿಕಾರಿಗಳು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಇಷ್ಟು ದಿನ ಆರಾಮ್‌ ಆಗಿದ್ದ ಹಿರಿಯ ಅಧಿಕಾರಿ ಅಮೃತ್ ಪೌಲ್‍ ಹಗರಣದಿಂದ ಜೈಲು ಸೇರಿದ್ದೆ ಅವರಿಗೆ ಮಾನಸಿಕವಾಗಿ ಹಿಂಸೆ ಶುರುವಾಗಿದೆ.

BIGG BREAKING NEWS : ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ : ಕೇರಳದಲ್ಲಿ ಮೂವರು ಪ್ರಮುಖ ಆರೋಪಿಗಳು ಪೊಲೀಸರ ವಶಕ್ಕೆ

 

ಅದೆಷ್ಟೋ ಆರೋಪಿಗಳ ಜೈಲಿಗೆ ಕಳುಹಿಸಿದ್ದ ಅಮೃತ್ ಪೌಲ್ ಅದೇ ಆರೋಪಿಗಳ ಜೊತೆ ಕಾಲ ಕಳೆಯುವಂತೆ ಆಗಿದೆ. ಆರೋಪಿಗಳ ಜೊತೆ ಬೆರೆಯುವುದಕ್ಕೂ ಆಗದೆ ಒಂಟಿತನ ಅವರಿಗೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಡಿಪ್ರೆಶನ್‍ಗೆ ಹೋಗಿದ್ದಾರೆ.
ಇನ್ನು ಅಮೃತ್ ಪೌಲ್ ಬಂಧನವಾಗುವ ಮುಂಚೆಯಿಂದಲೂ ಡಿಪ್ರೆಶನ್‍ಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಮಾಡಿದ ಕೆಲಸದಿಂದ ಜೈಲು ಸೇರಿ ಅವರಿಗಿದ್ದ ಸಮಸ್ಯೆ ಉಲ್ಬಣವಾಗಿದೆ.

Share.
Exit mobile version