ಬೆಂಗಳೂರು: ಸರ್ಕಾರಿ ವಿಶ್ಲೇಷಕರು, ಔಷಧ ಪರೀಕ್ಷಾ ಪ್ರಯೋಗಾಲಯ, ಇವರು ಮೆ. ಹನುಚೇತ್ ಲ್ಯಾಬೋರೇಟರಿಸ್‍ನ ರ್ಯಾಬಿಫ್ರೋ-20 (ರ್ಯಾಬೆಫ್ರಜೋಲ್ ಗ್ಯಾಸ್ಟ್ರೋ-ರಿಸಿಸ್ಟೆಂಟ್ ಟ್ಯಾಬ್ಲೆಟ್ಸ್ ಐಪಿ 20 ಎಂಜಿ), ಮೆ. ಜಗತ್ ಫಾರ್ಮದ ಪೋಲಿಕ್ ಆಸಿಡ್ ಟ್ಯಾಬ್ಲೆಟಸ್ ಐಪಿ 5 ಎಂಜಿ (ಬಿ-9 5 ಎಂಜಿ), ಮೆ. ಆರ್ಕಾನ್ ಲ್ಯಾಬ್ಸ್‍ನ ಪೆಂಟೋಲಿನ್-40(ಪ್ಯಾಂಟೋಫ್ರಜೋಲ್ ಸೋಡಿಯಂ ಗ್ಯಾಸ್ಟೋ-ರಿಸಿಸ್ಟೆಂಟ್ ಟ್ಯಾಬ್ಲೆಟ್ಸ್ ಐಪಿ), ಮೆ. ಕೆರಾನ್ ಲೈಫ್ ಸೈನ್ಸ್ ಪ್ರೈ.ಲಿ.ನ ಫೆಸ್ಟೆಂಡಜೋಲ್ ಟ್ಯಾಬ್ಲೆಟ್ಸ್ 150 ಎಂಜಿ ವೆಟ್ (ಪೆನ್‍ಜಿ-150 ಟ್ಯಾಬ್ಲೆಟ್ಸ್), ಮೆ. ಅಲ್ಟ್ರಾ ಡ್ರಗ್ಸ್ ಲಿ.ನ ಮೆಸುಲೈಡ್ & ಪ್ಯಾರಸೆಟಮೋಲ್ (ಗಿಮ್ಯಾಕ್-ಪಿ ಟ್ಯಾಬ್ಲೆಟ್ಸ್), ಮೆ. ಬಜಾಜ್ ಫರ್ಮಾಲೇಷನ್ಸ್‍ನ ಪಿ-ಬಿಟ್-40 (ಪ್ಯಾಂಟೋಫ್ರಜೋಲ್ ಗ್ಯಾಸ್ಟ್ರೋ-ರಿಸಿಸ್ಟೆಂಟ್ ಟ್ತಾಬ್ಲೆಟ್ಸ್ ಟ್ಯಾಬ್ಲೆಟ್ಸ್ ಐಪಿ), ಮೆ. ನಾನ್ ನಾನ್ಜ್ ಮೆಡ್ ಸೈನ್ಸ್ ಫಾರ್ಮಾ ಪ್ರೈ.ಲಿ.ನ ಸಿಪ್ಲಾಡಿನ್ (ಪೋವಿಡನ್-ಅಯೋಡಿನ್ ಸಲೂಷನ್ ಐಪಿ), ಮೆ. ಶ್ರೀಜಿ. ಹೇಲ್ತ್ ಕೇರ್‍ನ ಡಿನಿಮ್-ಪ್ಲಸ್ ಬೋಲಸ್(ವೆಟ್) (ನಿಮ್ಸುಲೈಡ್ & ಪ್ಯಾರಸೆಟಮೋಲ್ ಬೋಲಸ್) (ವೆಟ್), ಮೆ. ಸೆಜಾ ಫಾರ್ಮಲೇಷನ್ಸ್ ಪ್ರೈ.ಲಿ. ನ ಕ್ರೊಟೋನಾಲ್ (ಡಿಸಲ್ಪಿರಾಮ್ ಟ್ಯಾಬ್ಲೆಟ್ಸ್ ಐ.ಪಿ. 500 ಎಂಜಿ) ಮತ್ತು ಮೆ. ಅಬಾನ್ ಫಾರ್ಮಾಸೂಟಿಕಲ್ಸ್‍ನ ಪ್ಯಾಂಟಾಸೇಫ್-40 (ಪ್ಯಾಂಟೋಫ್ರಜೋಲ್ ಗ್ಯಾಸ್ಟ್ರೋ-ರಿಸಿಸ್ಟೆಂಟ್ ಟಯಾಬ್ಲೆಟ್ಸ್ ಐಪಿ-40 ಎಂಜಿ) ಔರ್ಷಇಗಳು / ಕಾಂತಿ ವರ್ಧಕಗಳು ಉತ್ತಮ ಗುಣಮಟ್ಟದ್ದಲ್ಲವೆಂದು ಘೋಷಿಸಿರುತ್ತಾರೆ.
ಈ ಔಷಧಿಗಳನ್ನು / ಕಾಂತಿವರ್ಧಕಗಳನ್ನು ಔಷಧ ವ್ಯಾಪರಿಗಳು, ಸಗಟು ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲಿ, ಮಾರಾಟ ಮಾಡುವುದಾಗಲಿ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು. ಯಾರಾದರೂ ಸದರಿ ಔಷಧಿಗಳ ದಾಸ್ತಾನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರುವುದಲ್ಲದೇ, ಸಾರ್ವಜನಿಕರು ಈ ಔಷಧಿಗಳನ್ನು / ಕಾಂತಿವರ್ಧಕಗಳನ್ನು ಉಪಯೋಗಿಸಬಾರದೆಂದು ಕರ್ನಾಟಕ ರಾಜ್ಯದ ಔಷಧ ನಿಂತ್ರಕಕರಾದ ಭಾಗೋಜಿ ಟಿ. ಖಾನಪೂರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.