ಬೆಂಗಳೂರು: ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಏಕೈಕ ಧ್ಯೇಯದೊಂದಿಗೆ 2,500 ಕಿ. ಮೀ. ಉದ್ದದ ಮಾನವ ಸರಪಳಿ ರಚಿಸಿದ್ದು ವಿಶ್ವದಾಖಲೆ ಬರೆದಿದೆ. ಈ ಐತಿಹಾಸಿಕ ಕ್ಷಣಕ್ಕೆ ಜೊತೆಯಾದ ಕರ್ನಾಟಕದ ಜನತೆಗೆ ಧನ್ಯವಾದಗಳನ್ನು ಕರ್ನಾಟಕ ಸರ್ಕಾರ ತಿಳಿಸಿದೆ.
ಸೆ.15ರಂದು ಭಾನುವಾರ ರಾಜ್ಯಾದ್ಯಂತ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಯಶಸ್ವಿಯಾಗಿ ಆಚರಿಸಲಾಯಿತು. 2,500 ಕಿ.ಮೀ. ಉದ್ದದ ಮಾನವ ಸರಪಳಿಯಲ್ಲಿ ಬರೋಬ್ಬರಿ 25 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ವಿಶ್ವ ದಾಖಲೆ ಸೃಷ್ಟಿಸಿದರು.
ರಾಜ್ಯದ 31 ಜಿಲ್ಲೆಗಳ ಪೈಕಿ ಗದಗ ಜಿಲ್ಲೆಯಲ್ಲಿ 2,18,891 ಮಂದಿ ಭಾಗವಹಿಸಿದ್ದು, ಅತಿ ಹೆಚ್ಚು (ಶೇ.21) ಜನರ ಭಾಗವಹಿಸುವಿಕೆಯಲ್ಲಿ ಮುಂಚೂಣಿ ಜಿಲ್ಲೆ ಎಂಬ ಹೆಗ್ಗಳಿಕೆ ಪಡೆದಿದೆ. ಉಡುಪಿ ಜಿಲ್ಲೆಯಲ್ಲಿ 1,48,322 ಮಂದಿ ಭಾಗವಹಿಸಿ, ಬರೋಬ್ಬರಿ 234 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಿಸಿದ್ದು, ಅತಿ ಉದ್ದದ ಮಾನವ ಸರಪಳಿ ನಿರ್ಮಾಣದಲ್ಲಿ ಇದು ಮುಂಚೂಣಿ ಜಿಲ್ಲೆ ಎಂಬ ಕೀರ್ತಿ ಪಡೆದಿದೆ.
ಅಂದಹಾಗೇ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15ರ ಬೆಳಗ್ಗೆ 9.30 ರಿಂದ 10 ಗಂಟೆಯ ವರೆಗೆ ಬೀದರ್‌ನಿಂದ ಚಾಮರಾಜನಗರದವರೆಗೆ 2,500 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಭಾಗವಹಿಸುವ ಎಲ್ಲರಿಗೂ ತಮ್ಮ ಭಾವಚಿತ್ರವುಳ್ಳ ಪ್ರಮಾಣಪತ್ರವನ್ನು ನೀಡಲಾಗಿದೆ.
BIG NEWS: ವಿಶ್ವವಿಖ್ಯಾತ ‘ಮೈಸೂರು ದಸರಾ’ಗೆ ಪ್ರಾಯೋಗಿಕ ‘ಕಾವೇರಿ ಆರತಿ’ ಆರಂಭ?
BIG UPDATE: ಬೆಂಗಳೂರಲ್ಲಿ BBMP ನಿರ್ಲಕ್ಷ್ಯಕ್ಕೆ ಮಹಾ ದುರಂತ: ಮೈದಾನದ ಗೇಟ್ ಬಿದ್ದು 10 ವರ್ಷದ ಬಾಲಕ ಸಾವು
ಇರಾನ್ ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ: 30 ಕಾರ್ಮಿಕರು ಸಾವು, ಹಲವರಿಗೆ ಗಾಯ | Iran coal mine blast