ಬೆಂಗಳೂರು: ರಾಜ್ಯದಲ್ಲಿ ಬಳಕೆಯಾಗದ ಇಂಧನ ಸಾಮರ್ಥ್ಯವನ್ನು ಬಳಸಿಕೊಳ್ಳುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಸಾಮಾನ್ಯ ಬ್ಯಾಟರಿ ಸಂಗ್ರಹಣೆ ಮತ್ತು ಪ್ರಸರಣ ಮಾರ್ಗಗಳೊಂದಿಗೆ ಒಟ್ಟು 19,000 ಮೆಗಾವ್ಯಾಟ್ ಸೌರ ಮತ್ತು ಪವನ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಕರ್ನಾಟಕ ಟೆಂಡರ್ ಕರೆಯಲು ಸಜ್ಜಾಗಿದೆ.
2030ರ ವೇಳೆಗೆ ಈ ಸಾಧನೆ ಮಾಡುವ ಗುರಿ ಹೊಂದಲಾಗಿದೆ ಎಂದು ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದರು.
ಈ ಕುರಿತು ಮಾತನಾಡಿದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ‘ಸೌರ ಮತ್ತು ಪವನ ವಿದ್ಯುತ್ ಎರಡನ್ನೂ ಬಳಸಿಕೊಳ್ಳುವತ್ತ ಗಮನ ಹರಿಸಲಾಗುವುದು.
“ಬೆಳಿಗ್ಗೆ ಸೌರ ವಿದ್ಯುತ್ ಉತ್ಪಾದನೆ ಹೆಚ್ಚಾಗಿರುತ್ತದೆ ಮತ್ತು ಸಂಜೆ ಪವನ ಶಕ್ತಿ ಉತ್ಪಾದನೆ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಆದ್ದರಿಂದ, ನಾವು ಹೈಬ್ರಿಡ್ ಮಾದರಿಗೆ ಹೋಗಲು ಮತ್ತು ಸಾಮಾನ್ಯ ಪ್ರಸರಣ ಮಾರ್ಗಗಳನ್ನು ಬಳಸಲು ಆಯ್ಕೆ ಮಾಡಿದ್ದೇವೆ. ಇದನ್ನು ಶೇಖರಣಾ ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗುವುದು” ಎಂದು ಅವರು ಹೇಳಿದರು.
ಶೇಖರಣಾ ವ್ಯವಸ್ಥೆಗಳ ಕೊರತೆಯಿಂದಾಗಿ, ಕರ್ನಾಟಕವು ಕೆಲವೊಮ್ಮೆ ಗರಿಷ್ಠ ಸಮಯದಲ್ಲಿ ವಿದ್ಯುತ್ ಕೊರತೆಯನ್ನು ಮತ್ತು ಗರಿಷ್ಠವಲ್ಲದ ಸಮಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಯನ್ನು ಎದುರಿಸುತ್ತದೆ. ಈ ಹೊಸ ಆರ್ ಇ ಯೋಜನೆಗಳು ರಾಜ್ಯದ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸುಧಾರಿಸುವುದಲ್ಲದೆ, ಗರಿಷ್ಠ ಸಮಯದಲ್ಲಿ ಬಳಸಲು ವಿದ್ಯುತ್ ಸಂಗ್ರಹಿಸಲು ಸಹಾಯ ಮಾಡುತ್ತದೆ.
19,000 ಮೆಗಾವ್ಯಾಟ್ ಪೈಕಿ 15,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಯೋಜಿಸಲಾಗಿದೆ