ಬೆಂಗಳೂರು : ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ 1207 ಕಾನ್ಸ್ಟೇಬಲ್, ಅಬಕಾರಿ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹೌದು, ರಾಜ್ಯ ಸರ್ಕಾರವು ಅಬಕಾರಿ ಇಲಾಖೆಯಲ್ಲಿನ 1,207 ಹುದ್ದೆಗಳ ಭರ್ತಿಗೆ ಅನುಮತಿ ನೀಡಿದ್ದು, ಶೀಘ್ರವೇ ಅಧಿಕೃತ ಆದೇಶ ಹೊರಬೀಳಲಿದೆ. ಈ ಮೂಲಕ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಂತಾಗಿದೆ.
ಅಬಕಾರಿ ಇಲಾಖೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಮತ್ತು ಅಬಕಾರಿ ಪೇದೆಗಳ ಹುದ್ದೆಗಳ ಪೈಕಿ ಕಲ್ಯಾಣ ಕರ್ನಾಟಕ ವೃಂದ ಸೇರಿದಂತೆ 265 ಹಾಗೂ ಅಬಕಾರಿ ಉಪ ನಿರೀಕ್ಷಕರ ಹುದ್ದೆಗಳನ್ನು ಮತ್ತು 942 ಅಬಕಾರಿ ಪೇದೆಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಸರ್ಕಾರ ಅನುಮತಿ ನೀಡಿದೆ.
ಹುದ್ದೆಗಳ ವಿವರ ಹೀಗಿದೆ
ಅಬಕಾರಿ ಉಪ ನಿರೀಕ್ಷಕರು-265 ಹುದ್ದೆಗಳು
ಅಬಕಾರಿ ಪೇದೆಗಳು-942 ಹುದ್ದೆಗಳು
ಒಟ್ಟು 1207
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ , 12ನೇ, ಪದವಿಯನ್ನು ಪೂರ್ಣಗೊಳಿಸಿರಬೇಕು
ಅರ್ಜಿ ಸಲ್ಲಿಕೆ ದಿನಾಂಕ
ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ: ಶೀಘ್ರವೇ ಅಧಿಸೂಚನೆ ಪ್ರಕಟವಾಗಲಿದೆ.
ಸಂಬಳ
ರಾಜ್ಯ ಸರ್ಕಾರದ 7ನೇ ವೇತನ ಆಯೋಗದ ನಿಯಮಾವಳಿಗಳ ಅನ್ವಯ ವೇತನ ನಿಗದಿಯಾಗಲಿದೆ
ಅಬಕಾರಿ ಹುದ್ದೆಗಳ ನೇಮಕಾತಿ ವಯೋಮಿತಿ
ಕನಿಷ್ಟ 18 ವರ್ಷ ಗರಿಷ್ಟ 27 ವರ್ಷದವರೆಗೆ ಅರ್ಜಿ ಸಲ್ಲಿಸಬಹುದು.
ಆಯ್ಕೆವಿಧಾನ
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ, ದೈಹಿಕ ಪರೀಕ್ಷೆ & ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ.