ಬೆಂಗಳೂರು: ಕೇಂದ್ರ ಸರ್ಕಾರ ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ನೀಡಿದಂತೆ ಇಂದು ಬರ ಪರಿಹಾರವನ್ನು ನೀಡಿದೆ. ಈ ಮೂಲಕ ಮತ್ತೆ ಕರ್ನಾಟಕ ದ್ವೇಷ ಮುಂದುವರೆಸಿದೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಕಿಡಿಕಾರಿದೆ.
ಇಂದು ಈ ಬಗ್ಗೆ ಎಕ್ಸ್ ಮಾಡಿರುವಂತ ಕಾಂಗ್ರೆಸ್, ಬರ ಪರಿಹಾರದಲ್ಲಿ ಕೇಂದ್ರ ಸರ್ಕಾರದ ಮೋಸದ ಕಣ್ಣಾಮುಚ್ಚಾಲೆ ಆಟ ಮುಂದುವರೆದಿದೆ, ಸುಪ್ರೀಂ ಕೋರ್ಟಿನ ಆದೇಶವನ್ನು ಪಾಲಿಸಿದಂತೆಯೂ ಇರಬೇಕು, ಕರ್ನಾಟಕಕ್ಕೆ ಅನ್ಯಾಯ ಆಗುವಂತೆಯೂ ಇರಬೇಕು ಎಂಬ ಚಾಣಾಕ್ಷತನ ತೋರಿದೆ ಎಂದು ವಾಗ್ಧಾಳಿ ನಡೆಸಿದೆ.
ಕರ್ನಾಟಕ ಬೇಡಿಕೆ ಇಟ್ಟಿದ್ದು 18,172 ಕೋಟಿ, ಆದರೆ ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎನ್ನುವಂತೆ ಕೇವಲ 3,454 ಕೋಟಿ ಮಾತ್ರ ಬಿಡುಗಡೆ ಮಾಡಿ ತನ್ನ ಕರ್ನಾಟಕ ದ್ವೇಷ ಮುಂದುವರೆಸಿದೆ ಎಂಬುದಾಕಿ ಕಿಡಿಕಾರಿದೆ.
ರಾಯಚೂರಲ್ಲಿ ಅಮಾನವೀಯ ಘಟನೆ: ‘ಮರಣೋತ್ತರ ಪರೀಕ್ಷೆ’ಗೆ 2000 ರೂ ಲಂಚಕ್ಕೆ ಬೇಡಿಕೆ