ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಅಸಮಾಧಾನದ ಭಿನ್ನಮತ ಸ್ಪೋಟಗೊಂಡಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧವೇ ರಹಸ್ಯ ಸಭೆಯನ್ನು ರೆಬೆಲ್ ನಾಯಕರು ನಡೆಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಈ ಸಂಬಂಧ ಬೆಳಗಾವಿಯ ಜಾಂಬೋಟಿ ರೆಸ್ತೆಯಲ್ಲಿರುವಂತ ರೆಸಾರ್ಡ್ ಒಂದರಲ್ಲಿ ಬಿಜೆಪಿಯ ರೆಬಲ್ ನಾಯಕರು ರಹಸ್ಯ ಸಭೆಯನ್ನು ನಡೆಸಲಿದ್ದಾರೆ ಎನ್ನಲಾಗಿದೆ.
ರೆಸಾರ್ಟ್ ನಲ್ಲಿ ನಡೆದಂತ ರಹಸ್ಯ ಸಭೆಯಲ್ಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ ಎನ್.ಆರ್ ಸಂತೋಷ್ ಕೂಡ ಭಾಗಿಯಾಗಿದ್ದು ತೀವ್ರ ಕುತೂಹಲವನ್ನು ಮೂಡಿಸಿದೆ.
ಅಂದಹಾಗೇ ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಬಹಿರಂಗವಾಗಿಯೇ ಹೇಳಿಕೆ ನೀಡುವ ಮೂಲಕ ಸಿಡಿದೆದ್ದಿದ್ದರು. ಈಗ ಇಬ್ಬರು ನಾಯಕರ ಜೊತೆಗೆ ಹಲವು ಅಸಮಾಧಾನಿತ ಬಿಜೆಪಿ ನಯಾಕರು ಇವರೊಂದಿಗೆ ಕೈಜೋಡಿಸಿದ್ದಾರೆ ಎನ್ನಲಾಗಿದೆ.
ಬೆಳಗಾವಿಯ ಜಾಂಬೋಟಿ ಬಳಿಯ ರೆಸಾರ್ಟ್ ನಲ್ಲಿ ನಡೆದಂತ ಬಿಜೆಪಿ ಅಸಮಾಧಾನಿತರ ರಹಸ್ಯ ಸಭೆಯಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್ ಸಿಂಹ, ಅಣ್ಣಾಸಾಹೇಬ ಜೊಲ್ಲೆ, ಕುಮಾರ್ ಬಂಗಾರಪ್ಪ, ಜಿಎಂ ಸಿದ್ದೇಶ್ ಸೇರಿದಂತೆ ವಿವಿಧ ಹತ್ತಕ್ಕೂ ಹೆಚ್ಚು ರೆಬಲ್ ನಾಯಕರು ಭಾಗಿಯಾಗಿದ್ದರು ಎನ್ನಲಾಗುತ್ತಿದೆ.
BIG UPDATE: ವಯನಾಡು ದುರಂತ: ಈವರೆಗೆ 24 ಮಕ್ಕಳು, 57 ಮಹಿಳೆಯರು ಸೇರಿ 130 ಮಂದಿ ನಾಪತ್ತೆ | Wayanad Landslide
‘ಚಂದ್ರಗುತ್ತಿ ದೇವಸ್ಥಾನ’ದ ಸರ್ವಾಂಗೀಣ ವಿಕಾಸಕ್ಕೆ ಕ್ರಮ: ಸಚಿವ ಮಧು ಬಂಗಾರಪ್ಪ