ನವದೆಹಲಿ: ಭಾರತೀಯ ವನ್ಯಜೀವಿ ಸಂಸ್ಥೆ ನಡೆಸಿದ ಅಖಿಲ ಭಾರತ ಸಿಂಕ್ರೊನಸ್ ಆನೆ ಅಂದಾಜು (SAIEE) 2025 ರ ಪ್ರಕಾರ ದೇಶದಲ್ಲಿ 22,446 ಆನೆಗಳಿವೆ, ಇದು 2017 ರ ಅಂದಾಜಿಗಿಂತ ಸುಮಾರು 18% ಇಳಿದಿದೆ ಎಂದು ವರದಿಯಗಿದೆ.
ವರದಿಯ ಪ್ರಕಾರ ಕರ್ನಾಟಕ (6013) ಅತಿ ಹೆಚ್ಚು ಆನೆ ಸಂಖ್ಯೆಯನ್ನು ಹೊಂದಿದೆ. ಪಶ್ಚಿಮ ಘಟ್ಟಗಳು ಅತಿ ಹೆಚ್ಚು ಆನೆಗಳಿಗೆ (11,934) ನೆಲೆಯಾಗಿದೆ. ನಂತರ ಈಶಾನ್ಯ ಬೆಟ್ಟಗಳು ಮತ್ತು ಬ್ರಹ್ಮಪುತ್ರ ಪ್ರವಾಹ ಪ್ರದೇಶಗಳು 6,559. ಶಿವಾಲಿಕ್ ಬೆಟ್ಟಗಳು ಮತ್ತು ಗಂಗಾನದಿಯ ಬಯಲು ಪ್ರದೇಶಗಳು 2,062 ಆನೆಗಳನ್ನು ಹೊಂದಿವೆ. ಆದರೆ ಮಧ್ಯ ಭಾರತ ಮತ್ತು ಪೂರ್ವ ಘಟ್ಟಗಳು ಒಟ್ಟಾಗಿ 1,891 ಆನೆಗಳನ್ನು ಹೊಂದಿವೆ.
ಯಾವ ರಾಜ್ಯದಲ್ಲಿ ಎಷ್ಟು ಆನೆಗಳಿವೆ? ಇಲ್ಲಿದೆ ಮಾಹಿತಿ
ಕರ್ನಾಟಕ -6,013 ಆನೆಗಳನ್ನು ಹೊಂದಿದೆ.
ಅಸ್ಸಾಂ -4,159
ತಮಿಳುನಾಡು -3,136
ಕೇರಳ -2,785
ಉತ್ತರಾಖಂಡ -1,792
ಒಡಿಶಾ -912
ಛತ್ತೀಸಗಢ ಮತ್ತು ಜಾರ್ಖಂಡ–650
ಮಧ್ಯಪ್ರದೇಶ- 97
ಮಹಾರಾಷ್ಟ್ರ -63