ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಕಾರ್ಗಲ್ ಪೊಲೀಸ್ ಠಾಣೆಯ ಪಿಎಸ್ಐ ಹೊಳೆಬಸಪ್ಪ ಅವರು ವೈರಲ್ ಸುದ್ದಿಯ ಬಗ್ಗೆ ಪತ್ರಕರ್ತರು ಕೇಳಿದಂತ ಪ್ರಶ್ನೆಗೆ ಸರಿಯಾಗಿ ಉತ್ತರಿಸದೇ ದರ್ಪ ತೋರಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೆವ್ವ ಅಡ್ಡಬಂದು, ಬೈಕ್ ಸವಾರರಿಬ್ಬರು ತೀವ್ರವಾಗಿ ಅಪಘಾತಗೊಂಡು, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬುದಾಗಿ ಸುದ್ದಿಯೊಂದು ವೈರಲ್ ಆಗಿತ್ತು. ಈ ಬಗ್ಗೆ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರಿಗೆ ಸ್ಪಷ್ಟನೆ ಕೂಡ ನೀಡಲಾಗಿತ್ತು.
ಹೀಗಿತ್ತು ಕಾರ್ಗಲ್ ಪೊಲೀಸ್ ಠಾಣೆಯ ಪತ್ರಿಕಾ ಪ್ರಕಟಣೆ
ದಿನಾಂಕ:-27-10-2024 ರಂದು ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಂಚಿಕೈ ರಸ್ತೆಯಲ್ಲಿ 2 ಜನ ಬೈಕ್ ಸವಾರರಿಗೆ ದೆವ್ವ ಎದುರಾಗಿ ಒಬ್ಬರು ತುಂಬಾ ಸೀರಿಯಸ್ ಆಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಹಾಗೂ ಇನ್ನೊಬ್ಬರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುತ್ತಾರೆ ಎಂದು ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿ ಫೋಟೋ ಹಾಗೂ ವೀಡಿಯೋ ಹರಿಬಿಟ್ಟಿದ್ದು, ಇದು ಸುಳ್ಳು ಸುದ್ದಿಯಾಗಿದ್ದು ಈ ತರಹದ ಯಾವುದೇ ಪ್ರಕರಣ ಬೆಳಕಿಗೆ ಬಂದಿರುವುದಿಲ್ಲ ಹಾಗೂ ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ, ಇಂತಹ ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿಲಾಗವುದು ಎಂಬುದಾಗಿ ಪಿ.ಎಸ್.ಐ ಕಾರ್ಗಲ್ ಪೊಲೀಸ್ ಠಾಣೆ ತಿಳಿಸಿದ್ದರು.
ಈ ಪತ್ರಿಕಾ ಪ್ರಕಟಣೆಗೆ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಪ್ರಕಟಿಸಬೇಕು ಎಂಬುದು ಗೊತ್ತಿರಲಿಲ್ಲವೇ.?
ಕಾರ್ಗಲ್ ಪೊಲೀಸ್ ಠಾಣೆಯ ಪಿಎಸ್ಐ ಹೊಳೆಬಸಪ್ಪ ಅವರ ಈ ಪತ್ರಿಕಾ ಪ್ರಕಟಣೆಯನ್ನು ಗಮನಿಸಿದಂತ ಕನ್ನಡ ನ್ಯೂಸ್ ನೌ ಸಂಪಾದಕ ವಸಂತ ಬಿ ಈಶ್ವರಗೆರೆ, ವೀಡಿಯೋ ಹೇಳಿಕೆ ಕೊಡಿ ಸಾರ್. ನಿಮ್ಮ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದಂತ ಸುದ್ದಿಯು ವೈರಲ್ ಆಗಿದೆ. ಸಾರ್ವಜನಿಕರಲ್ಲಿ ತಪ್ಪು ಸಂದೇಶ ಹೋಗಂತೆ ಸರಿಯಾದ ಮಾಹಿತಿ ಪ್ರಕಟಿಸಲಾಗುವುದು ಎಂಬುದಾಗಿ ಕರೆ ಮಾಡಿ ಕೋರಲಾಗಿತ್ತು.
ಕನ್ನಡ ನ್ಯೂಸ್ ನೌ ಜೊತೆಗೆ ಪ್ರತಿಕ್ರಿಯಿಸಿದ್ದಂತ ಅವರು ಆಯ್ತು ವೀಡಿಯೋ ಮಾಡಿ ಕಳುಹಿಸುತ್ತೇನೆ ಎಂಬುದಾಗಿ ತಿಳಿಸಿದ್ದರು. ಆ ಬಳಿಕ ಎರಡು ಬಾರಿ ಕೇಳಿದಾಗಲೂ ಅದೇ ಉತ್ತರ ನೀಡಿದ್ದರು. ಆದರೇ ಕೊನೆಯ ಬಾರಿಗೆ ಮಾತನಾಡಿದ್ದು ಮಾತ್ರ ದರ್ಪದ ವರ್ತನೆಯಾಗಿತ್ತು. ಪತ್ರಿಕಾ ಪ್ರಕಟಣೆಯನ್ನು ವಾಟ್ಸಾಪ್ ಮೂಲಕ ಹಾಕೋ ಮೊದಲು ಸಾಹೇಬ್ರೆ ಹಿರಿಯ ಅಧಿಕಾರಿಗಳ ಮೂಲಕ ಇಂತಹ ಪ್ರಕಟಣೆ ಹೊರಡಿಸಬೇಕು ಎಂಬುದಾಗಿ ಗೊತ್ತಿರಲಿಲ್ಲವೇ.? ನಾವು ಕೇಳಿದಾಗ ಉತ್ತರಿಸಿದಂತ ನಿಮ್ಮ ಮಾತಿನ ದರ್ಪ ಸರಿಯೇ.? ನಾವು ಕೇಳಿದ್ದರಲ್ಲಿ ಏನಾದ್ರು ತಪ್ಪಿದ್ಯಾ ಹೇಳಿ ಕಾರ್ಗಲ್ ಠಾಣೆ ಪಿಎಸ್ಐ ಹೊಳೆಬಸಪ್ಪ ಸಾಹೇಬ್ರೆ.
ಒನ್ ಲೈನ್ ಆನ್ಸರ್ ಕೊಟ್ಟಿದ್ರೆ ಸಾಕಿತ್ತಲ್ವ ಸಾರ್.?
ವೀಡಿಯೋ ಹೇಳಿಕೆ ನಾವು ಕೊಡುವುದಕ್ಕೆ ಬರುವುದಿಲ್ಲ. ಡಿವೈಎಸ್ಪಿ ಇಲ್ಲವೇ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೊಡಬೇಕು ಎಂಬುದಾಗಿ ಒನ್ ಲೈನ್ ಆನ್ಸರ್ ಹೇಳಿದ್ರೆ ಮುಗಿದಿತ್ತು. ಅದನ್ನು ಬಿಟ್ಟು ಪತ್ರಕರ್ತರು ವೀಡಿಯೋ ಹೇಳಿಕೆ ಇನ್ನೂ ಕಳಿಸಲಿಲ್ವಲ್ಲ ಸಾರ್ ಅಂದಾಗ, ಡಿವೈಎಸ್ಪಿನೇ ಕೊಡಬೇಕಾ ಸಾರ್ ಅಂತನೂ ಕೇಳಿದ್ರೆ ಅದನ್ನ ನಾನು ಹೇಳೋದಕ್ಕೆ ಬರೋದಿಲ್ಲ ಅಂದ್ರೆ ಏನು ಅರ್ಥ ಸಾರ್.? ಇದಾ ನೀವು ಪತ್ರಕರ್ತರಿಗೆ ನೀಡುವ ಉತ್ತರವೇ.? ಒಂದು ಸಾಲಿನಲ್ಲಿ ಡಿವೈಎಸ್ಪಿ, ಇಲ್ಲವೇ ಎಸ್ಪಿಯವರಿಂದ ವೀಡಿಯೋ ಹೇಳಿಕೆ ಪಡೆಯಿರಿ. ನಾವು ಕೊಡುವುದಕ್ಕೆ ಬರೋದಿಲ್ಲ ಅಂದಿದ್ರೆ ಆಗ್ತಿತ್ತು ಅಲ್ವ ಸಾರ್.?
ಒಟ್ಟಾರೆಯಾಗಿ ಸಾಗರ ತಾಲ್ಲೂಕಿನ ಕಾರ್ಗಲ್ ಪಿಎಸ್ಐ ಹೊಳೆಬಸಪ್ಪ ಅವರ ನಡೆ ಸಾರ್ವಜನಿಕರೊಂದಿಗೆ, ಪತ್ರಕರ್ತರೊಂದಿಗೆ ವ್ಯವಧಾನಿತ, ವ್ಯವಹಾರಿತ, ಪ್ರತಿ ಮಾತಿನಲ್ಲೂ ಎಚ್ಚರಿಕೆಯನ್ನ ತೋರಬೇಕಿತ್ತು. ತೋರಬೇಕಿದೆ. ನಾವು ಹೇಳೋಕೆ ಬರೋದಿಲ್ಲ. ಯಾರನ್ನ ಕೇಳ್ತೀರೋ ಕೇಳಿ ಅನ್ನೋ ಥರ ತೋರಿದ್ದು ಮಾತ್ರ ಖಂಡನೀಯವೇ ಸರಿ. ಈ ಬಗ್ಗೆ ಸಾಗರ ತಾಲ್ಲೂಕಿನ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್, ಶಿವಮೊಗ್ಗ ಜಿಲ್ಲಾಧಿಕಾರಿ ಮಿಥುನ್ ಸಾಹೇಬ್ರು, ಕಾರ್ಗಲ್ ಪೊಲೀಸ್ ಠಾಣೆಯ ಪಿಎಸ್ಐಗೆ ಪತ್ರಕರ್ತರೊಂದಿಗೆ ಹೇಗೆ ಮಾತನಾಡಬೇಕು ಎಂಬುದನ್ನು ಕಲಿಸಿಕೊಡಲಿ. ಇನ್ಮುಂದೆ ಆದರೂ ತಮ್ಮ ಮಾತಿನ ಶೈಲಿಯನ್ನು ಬದಲಿಸಿಕೊಳ್ಳುವಂತೆ ಆಗಲಿದೆ.
ಕೊನೆಯದಾಗಿ… ಕನ್ನಡ ನ್ಯೂಸ್ ನೌ ಹೀಗೆ ಪ್ರಕಟಿಸಿದೆ ವೈರಲ್ ಸುದ್ದಿಯ ಬಗ್ಗೆ ಅಸಲಿ ಸತ್ಯ
Fact Check: ಸಾಗರದ ‘ಕಾರ್ಗಲ್’ನಲ್ಲಿ ಬೈಕ್ ಸವಾರರಿಗೆ ದೆವ್ವ ಎದುರಾಗಿ ಇಬ್ಬರು ಸೀರಿಯಸ್ ಆಗಿದ್ದಾರಾ.? ಇಲ್ಲಿದೆ ಅಸಲಿ ಸತ್ಯ ಹೀಗೆ ತರಬರಹದೊಂದಿಗೆ ಕನ್ನಡ ನ್ಯೂಸ್ ನೌ ಸಾರ್ವಜನಿಕರಿಗೆ ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದಂತ ವೈರಲ್ ಸುದ್ದಿಯ ಅಸಲಿ ಸತ್ಯವನ್ನು ಬಿಚ್ಚಿಟ್ಟಿದೆ. ಈ ಮೂಲಕ ಸಾರ್ವಜನಿಕರಿಗೆ ವೈರಲ್ ಆಗಿರುವ ವೀಡಿಯೋ ಹಿಂದಿನ ವಾಸ್ತವಾಂಶವನ್ನು ಬಿಚ್ಚಿಟ್ಟು, ಕ್ಲಾರಿಫಿಕೇಷನ್ ಕೊಡುವ ಕೆಲಸ ಮಾಡಿದೆ.
BIG NEWS : ದೇವಸ್ಥಾನಗಳಲ್ಲಿ `VIP’ ದರ್ಶನ ಸಮಾನತೆಯ ಹಕ್ಕಿನ ಉಲ್ಲಂಘನೆ : ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆ!
BIG NEWS : ತಾಯಿಯ ಮರಣದ ನಂತರ ಮಗಳು `ಅನುಕಂಪದ ನೇಮಕಾತಿ’ಗೆ ಅರ್ಹ : ಹೈಕೋರ್ಟ್ ಮಹತ್ವದ ಆದೇಶ.!