ಮಂಡ್ಯ: ಜಿಲ್ಲೆಯ ಅಂಕೇಗೌಡ ಅವರಿಗೆ 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಗೌರವ ಸಂದಿದೆ. ಆ ಮೂಲಕ ಕನ್ನಡಿಗ ಅಂಕೇಗೌಡರಿಗೆ 2026ನೇ ಸಾಲಿನ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಿನಕುರಳಿ ಗ್ರಾಮದವರೇ ಅಂಕೇಗೌಡ ಆಗಿದ್ದಾರೆ. 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದಂತ ಕೀರ್ತಿ ಅಂಕೇಗೌಡ ಅವರಿಗೆ ಸಲ್ಲುತ್ತದೆ.
ಅಂಕೇಗೌಡ ಅವರು ಪುಸ್ತಕ ಮನೆ ಎನ್ನುವಂತ ಗ್ರಂಥಾಲಯವನ್ನೇ ನಿರ್ಮಿಸಿದ್ದಾರೆ. 20ನೇ ವಯಸ್ಸಿನಲ್ಲೇ ಪುಸ್ತಕ ಸಂಗ್ರಹಕ್ಕೆ ಇಳಿದಂತ ಅಂಕೇಗೌಡರು, ಪುಸ್ತಕ ಮನೆ ನಿರ್ಮಿಸಿ ಓದುವ ಹವ್ಯಾಸವನ್ನು ಹೆಚ್ಚಿಸುವಂತ ಕೆಲಸ ಮಾಡುತ್ತಿದ್ದಾರೆ.
ಇದೀಗ ಪುಸ್ತಕ ಮನೆಯ ಸರದಾರ ಸಾಧಕರಾದಂತ ಅಂಕೇಗೌಡ ಅವರಿಗೆ 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.
#WATCH | Padma Awards: Anke Gowda from Karnataka will be conferred the Padma Shri 2026 in the field of Literature and Education, as per sources
This year’s Padma Awards recognise a wide spectrum of unsung heroes from across the length and breadth of India. These include… pic.twitter.com/j6SaAleqST
— ANI (@ANI) January 25, 2026








