ಕಲಬುರ್ಗಿ: ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಿರುವಾಗ, ರಾಜ್ಯದ ಎಲ್ಲಾ ವಾಣಿಜ್ಯ ಅಂಗಡಿ-ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕ ಕಡ್ಡಾಯಗೊಳಿಸಿ, ಸರ್ಕಾರ ಆದೇಶಿಸಿದೆ. ಒಂದು ವೇಳೆ ಈ ನಿಯಮ ತಪ್ಪಿದಲ್ಲಿ ಅಂಗಡಿಯ ಪರವಾನಗಿಯನ್ನೇ ರದ್ದುಗೊಳಿಸೋದಾಗಿ ಎಚ್ಚರಿಕೆ ನೀಡಿದೆ.

BIG NEWS: ತಮ್ಮಲ್ಲಿ ‘ಸಿದ್ಧರಾಮಯ್ಯ’ನವರಂತ ಒಬ್ಬ ನಾಯಕರಿದ್ದಾರೆಯೇ.? – ಬಿಜೆಪಿಗೆ, ಕಾಂಗ್ರೆಸ್ ಪ್ರಶ್ನೆ | Karnataka Congress

ಈ ಸಂಬಂಧ ಕಲಬುರ್ಗಿ ಪಾಲಿಕೆಯ ಆರೋಗ್ಯಾಧಿಕಾರಿ ಆದೇಶ ಹೊರಡಿಸಿದ್ದು, ಕಲಬುರ್ಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೆಂಗಳೂರಿನಲ್ಲಿನಂತೆ ಕರ್ನಾಟಕದಲ್ಲಿ ಕನ್ನಡ ಭಾಷೆಯು ಆಡಳಿತ ಭಾಷೆಯಾಗಿದ್ದು, ರಾಜ್ಯದಲ್ಲಿನ ನಾಮಫಲಕಗಳಲ್ಲಿ ಕನ್ನಡ ಬಳಸುವುದು ಕಡ್ಡಾಯವಾಗಿರುತ್ತದೆ ಎಂದಿದ್ದಾರೆ.

BREAKING NEWS: ಐಸಿಸ್ ಮಾದರಿಯ ಅಮರಾವತಿ ಹತ್ಯೆ: ಯುಎಪಿಎ ಅಡಿ ಪ್ರಕರಣ ದಾಖಲಿಸಿದ NIA | Amravati killing

ಕನ್ನಡ ನಾಮಫಲಕಗಳನ್ನು ಅಳವಡಿಸೋ ಸಂಬಂಧ ಸಮರ್ಪಕ ಅನುಷ್ಠಾನಕ್ಕಾಗಿ ಅಂಗಡಿ-ಮುಂಗಟ್ಟುಗಳ, ಉದ್ದಿಮೆಗಳಿಗೆ ಪರವಾನಿಗೆ ನೀಡುವ ಸಂದರ್ಭದಲ್ಲಿ ಕನ್ನಡ ಭಾಷೆಯ ನಾಮಫಲಕಗಳಲ್ಲಿ ಕನ್ನಡವನ್ನು ಅಗ್ರಸ್ಥಾನದಲ್ಲಿ ಬಳಸದೇ ಇದ್ದಲ್ಲಿ, ಉದ್ದಿಮೆ ಪರವಾನಗಿಯನ್ನು ರದ್ದು ಮಾಡಲಾಗುತ್ತದೆ ಎಂಬ ನಿಬಂಧನೆ ವಿಧಿಸಲು ಸರ್ಕಾರ ಆದೇಶಿಸಿರುತ್ತದೆ ಎಂದು ತಿಳಿಸಿದ್ದಾರೆ.

ಶಾಲೆಗಳ ದುಸ್ಥಿತಿ ಸರಿಪಡಿಸಲು ಸರಕಾರಕ್ಕೆ ತಿಂಗಳು ಗಡುವು ಕೊಟ್ಟ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಈ ಹಿನ್ನಲೆಯಲ್ಲಿ ಕಲಬುರ್ಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಖಾಸಗಿ ಉದ್ದಿಮೆ, ಮಳಿಗೆಗಳ ಉದ್ದಿಮೆದಾರರು ನಾಮಫಲಕಗಳನ್ನು ಪ್ರಧಾನವಾಗಿ ಕನ್ನಡದಲ್ಲಿ ಹಾಕುವುದು. ಅನ್ಯಭಾಷೆಯ ನಾಮಫಲಕಗಳಿಗಿಂತ ಕನ್ನಡ ಭಾಷೆಯನ್ನು ದಪ್ಪ, ದೊಡ್ಡ ಅಕ್ಷರಗಳಲ್ಲಿ ಇರುವಂತೆ ಹಾಕುವುದು. ಈ ನಿಯಮ ತಪ್ಪಿದಲ್ಲಿ ಅಂತಹ ಉದ್ದಿಮೆ, ವಾಣಿಜ್ಯ ಅಂಗಡಿ-ಮುಂಗಟ್ಟುಗಳ ಪರವಾನಗಿಯನ್ನು ರದ್ದು ಪಡಿಸಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.

Share.
Exit mobile version