ಶಿವಮೊಗ್ಗ: ಜನವರಿ.17ರಂದು ಸಾಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಶ್ರಮಜೀವಿಗಳಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿರುವುದಾಗಿ ತಾಲ್ಲೂಕು ಅಧ್ಯಕ್ಷ ಜನಾರ್ಧನ ಪೂಜಾರಿ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಾಗರ ತಾಲ್ಲೂಕು ಘಟಕದ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದಿಂದ ದಿನಾಂಕ 17-01-2026ರಂದು ಬೆಳಗ್ಗೆ 10 ಗಂಟೆಗೆ ಸಾಗರದ ದುರ್ಗಾಂಬ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯಾಧ್ಯಕ್ಷರಾದಂತ ಎ.ಕೃಷ್ಣೇಗೌಡ್ರು, ಶಿವಮೊಗ್ಗ ಜಿಲ್ಲಾಧ್ಯಕ್ಷರಾದಂತ ಕಿರಣ್ ಕುಮಾರ್.ಹೆಚ್.ಎಸ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕವಿತಾ.ಸಿ, ಸಾಗರ ನಗರ ಮಹಿಳಾ ಘಟಕದ ಅಧ್ಯಕ್ಷಎ ಮಾಲತಿ ಸಾಗರ್ ಸೇರಿದಂತೆ ಸಂಘದ ಇತರರು ಉಪಸ್ಥಿರಲಿದ್ದಾರೆ ಎಂದರು.
ಇನ್ನೂ ಸಂಜೆ 6 ಗಂಟೆಯಿಂದ ಶ್ರಮಜೀವಿಗಳಿಗೆ ಸನ್ಮಾನ ಹಾಗೂ ಸಾಗರದ ವಿವಿಧ ಕಲಾವಿದರುಗಳಿಂದ ಸಂಗೀತ ರಸ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಾಗರದ ಸಮಸ್ತ ಜನತೆಯು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜನಾರ್ಧನ್, ಮಾಲತಿ, ವಿನಯ್, ರವಿ, ಗಣೇಶ್ ಆಚಾರ್, ಅರುಣ್ ಕುಮಾರ್ ಪಾಳೇಗಾರ್ ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ… ಸಂಪಾದಕರು..
BREAKING: ಸಾಗರದಲ್ಲಿ ‘ಪ್ರತಿಷ್ಠಿತ ಪತ್ರಿಕೆ’ ಹೆಸರಲ್ಲಿ ವಸೂಲಿ, ಇಬ್ಬರ ವಿರುದ್ಧ ಪೊಲೀಸರಿಗೆ ‘KUWJ ದೂರು’








