ಬೆಂಗಳೂರು: ರಾಜ್ಯದ ಅಂಗಡಿ-ಮುಂಗಟ್ಟುಗಳಿಗೆ ಶೇ.60ರಷ್ಟು ನಾಮಫಲಕವನ್ನು ಕನ್ನಡದಲ್ಲೇ ಹಾಕುವಂತೆ ಕಡ್ಡಾಯಗೊಳಿಸಲಾಗಿದೆ. ಇದನ್ನು ಈಗ ಮಸೂದೆಯಾಗಿ ಜಾರಿಗೊಳಿಸೋದಕ್ಕಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರದಿಂದ ಮಂಡಿಸಲಾಗಿದೆ.
ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಬಳಕೆ ಮಾಡುವುದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿತ್ತು. ಇದಕ್ಕೆ ರಾಜ್ಯಪಾಲರಿಗೆ ಅಂಕಿತ ಸೂಚಿಸೋದಕ್ಕೂ ಕಾಯ್ದೆಯನ್ನು ಕಳುಹಿಸಲಾಗಿತ್ತು. ಆದ್ರೇ ರಾಜ್ಯಪಾಲರು ಇದನ್ನು ವಾಪಾಸ್ ಕಳುಹಿಸಿದ್ದರು.
ಇದೀಗ ಕೈಗಾರಿಕೆಗಳು, ವಾಣಿಜ್ಯ, ಚಟುವಟಿಕೆ ಕೇಂದ್ರಗಳು, ಆಸ್ಪತ್ರೆ, ಪ್ರಯೋಗಾಲಯಗಳು ಸೇರಿದಂತೆ ರಾಜ್ಯದಲ್ಲಿನ ಎಲ್ಲ ವಹಿವಾಟು ಕೇಂದ್ರಗಳ ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಬಳಕೆಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರ ನೀಡುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಮಸೂದೆ 2024 ಅನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಸಚಿವರ ಪರವಾಗಿ ಗೃಹ ಸಚಿವ ಜಿ.ಪರಮೇಶ್ವರ ಮಸೂದೆಯನ್ನು ಮಂಡಿಸಿದರು. ಮನರಂಜನಾ ಕೇಂದ್ರಗಳು, ಹೋಟೆಲ್ಗಳು, ಪ್ರಯೋಗಾಲಯಗಳು, ಟ್ರಸ್ಟ್ಗಳು, ಸಮಾಲೋಚನಾ ಕೇಂದ್ರಗಳು ಸೇರಿದಂತೆ ಎಲ್ಲ ಬಗೆಯ ಸಂಸ್ಥೆಗಳಿಗೂ ಈ ತಿದ್ದುಪಡಿ ಅನ್ವಯವಾಗಲಿದೆ. 2022ರ ಕಾಯ್ದೆಗೆ ಈ ತಿದ್ದುಪಡಿಯನ್ನು ತರಲಾಗುತ್ತಿದೆ.
BREAKING: BJP ಶಾಸಕ ‘ಕೆ.ಗೋಪಾಲಯ್ಯ’ಗೆ ಜೀವ ಬೆದರಿಕೆ: ಮಾಜಿ ಕಾರ್ಪೊರೇಟರ್ ‘ಪದ್ಮರಾಜ್’ ಬಂಧನ
BREAKING: ಕರ್ನಾಟಕದಿಂದ ರಾಜ್ಯಸಭಾ ಚುನಾವಣೆಗೆ ಕೈ ಅಭ್ಯರ್ಥಿಗಳ ಪಟ್ಟಿ ಪ್ರಕಟ | Rajya Sabha Election 2024