ನವದೆಹಲಿ: ಬಾಲಿವುಡ್ ನ ಜನಪ್ರಿಯ ನಾಯಕಿ ಕಂಗನಾ ರಣಾವತ್ ಈ ಬಾರಿ ಎಂಪಿ ಟಿಕೆಟ್ ಸಿಕ್ಕಿದೆ. ಕೊನೆಗೂ ಬಾಲಿವುಡ್ ಕ್ವೀನ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಕಂಗನಾ ರಣಾವತ್ ಕಣಕ್ಕಿಳಿಯುತ್ತಿದ್ದಾರೆ.
ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ, “ಪ್ರಧಾನಿ ಮೋದಿ ವಾರಣಾಸಿಯಿಂದ, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಅರುಣಾಚಲ ಪಶ್ಚಿಮದಿಂದ, ಬಿಜೆಪಿ ಸಂಸದ ಬಿಷ್ಣು ಪದಾ ರೇ ಅಂಡಮಾನ್ ಮತ್ತು ನಿಕೋಬಾರ್ ನಿಂದ, ಬಿಜೆಪಿ ಸಂಸದ ತಪಿರ್ ಗಾವೊ ಅರುಣಾಚಲ ಪೂರ್ವದಿಂದ, ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್ ದಿಬ್ರುಗಢದಿಂದ ಸ್ಪರ್ಧಿಸಲಿದ್ದಾರೆ” ಎಂದು ಹೇಳಿದರು. ಲೋಕಸಭಾ ಚುನಾವಣೆಗೆ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ ಶನಿವಾರ ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
BIG NEWS: ಲೋಕಸಭಾ ಚುನಾವಣೆ: ‘ಕರ್ನಾಟಕದ ಕ್ಷೇತ್ರ’ಗಳಿಗೆ ‘ಬಿಜೆಪಿ ಮೊದಲ ಪಟ್ಟಿ’ಯಲ್ಲಿ ಘೋಷಣೆಯಾಗದ ಟಿಕೆಟ್
BREAKING: ರಾಜ್ಯ ಸರ್ಕಾರದಿಂದ ‘ಹಾವು ಕಡಿತ’ಕ್ಕೆ ಚಿಕಿತ್ಸೆ ನೀಡಲು ‘ಮಾರ್ಗಸೂಚಿ’ ಪ್ರಕಟ: ಈ ‘ನಿಯಮ ಪಾಲನೆ’ ಕಡ್ಡಾಯ