ನವದೆಹಲಿ: ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ಅವರು ಮಂಗಳವಾರ ಲೋಕಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅವರು, ಡಿಯ ಜನರ ಪ್ರೀತಿಯೇ ತನ್ನನ್ನು ತನ್ನ ತವರು ರಾಜ್ಯಕ್ಕೆ ಮರಳಿ ಕರೆತಂದಿದೆ, ಚಲನಚಿತ್ರದಲ್ಲಿ ಮಾಡಿದಂತೆಯೇ ರಾಜಕೀಯದಲ್ಲಿಯೂ ತನ್ನದೇ ಆದ ಛಾಪು ಮೂಡಿಸಲು ಆಶಿಸುತ್ತೇನೆ .ಮಂಡಿಯ ಜನರು ಮತ್ತು ನನ್ನ ಮೇಲಿನ ಪ್ರೀತಿ ನನ್ನನ್ನು ಇಲ್ಲಿಗೆ ಕರೆತಂದಿದೆ. ನಮ್ಮ ದೇಶದಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಛಾಪು ಮೂಡಿಸುತ್ತಿದ್ದಾರೆ ಆದರೆ ಕೆಲವು ವರ್ಷಗಳ ಹಿಂದೆ ಮಂಡಿಯಲ್ಲಿ ಭ್ರೂಣ ಹತ್ಯೆಯ ಘಟನೆಗಳು ಹೆಚ್ಚಾಗಿದ್ದವು ಎಂದರು.
ಇಂದು, ಮಂಡಿಯ ಮಹಿಳೆಯರು ಸೈನ್ಯ, ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರದಲ್ಲಿದ್ದಾರೆ. ಕಾಂಗ್ರೆಸ್ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಪಕ್ಷದ ರಾಷ್ಟ್ರ ವಿರೋಧಿ ಮನಸ್ಥಿತಿ ದೇಶಕ್ಕೆ ಕಳವಳಕಾರಿಯಾಗಿದೆ ಎಂದು ಕಂಗನಾ ಹೇಳಿದರು.