ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :  ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ʻ ಕಾಂತಾರ ಸಿನಿಮಾ ʼ  ಟೀಮ್ 50ನೇ ಸಂಭ್ರಮದಲ್ಲಿ ಇರುವಾಗ ಕಮಲ್ ಹಾಸನ್ ಚಿತ್ರ ವೀಕ್ಷಿಸಿದ್ದಾರೆ. ಸಿನಿಮಾ ಕುರಿತು ಕಮಲ್ ಹಾಸನ್  ರಿಷಬ್ ಶೆಟ್ಟಿಗೆ ಹೇಳಿದ್ದೇನು ಗೊತ್ತಾ? ಇಲ್ಲಿದೆ ಈ ಸ್ಟೋರಿ ಓದಿ..

ಒಟ್ಟಿಗೆ ʻFIFA ವಿಶ್ವಕಪ್ʼ ವೀಕ್ಷಿಸಲು 23 ಲಕ್ಷ ರೂ. ಕೊಟ್ಟು ಮನೆ ಖರೀದಿಸಿದ ಕೇರಳದ ಫುಟ್‌ಬಾಲ್ ಅಭಿಮಾನಿಗಳು

ಕಮಲ್ ಹಾಸನ್ ಕಾಂತಾರ ಸಿನಿಮಾದ ಕಥೆ, ಅದನ್ನು ನಿರೂಪಿಸಿದ ರೀತಿ ಹಾಗೂ ರಿಷಬ್ ಶೆಟ್ಟಿ ನಟನೆಯನ್ನು ಮೆಚ್ಚಿಕೊಂಡು ಬೆನ್ನು ತಟ್ಟಿದ್ದಾರೆ. ನವೆಂಬರ್ 18 ರಂದು ಕಾಂತಾರ ಸಿನಿಮಾ ನೋಡಿದ ಕಮಲ್ ಹಾನಸ್ ಅವರು ನಿರ್ದೇಶಕ ರಿಷಬ್ ಶೆಟ್ಟಿಗೆ ಕಾಲ್ ಮಾಡಿ, ಅಭಿನಂದಿಸಿದ್ದಾರೆ.

ಕಾಂತಾರ ಸಿನಿಮಾ ಐವತ್ತು ದಿನಗಳ ಪೂರೈಸಿದ ನಂತರವೂ ಅದರ ಕ್ರೇಜ್ ಮಾತ್ರ ಇನ್ನೂ ನಿಂತಿಲ್ಲ. ಬಿಡುವಾದಾಗೆಲ್ಲ ಸಿಲೆಬ್ರಿಟಿಗಳು ಸಿನಿಮಾ ನೋಡಿ, ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಕಾಂತಾರದ ಬಗ್ಗೆ ಬರೆದುಕೊಳ್ಳುತ್ತಿದ್ದಾರೆ.

ಒಟ್ಟಿಗೆ ʻFIFA ವಿಶ್ವಕಪ್ʼ ವೀಕ್ಷಿಸಲು 23 ಲಕ್ಷ ರೂ. ಕೊಟ್ಟು ಮನೆ ಖರೀದಿಸಿದ ಕೇರಳದ ಫುಟ್‌ಬಾಲ್ ಅಭಿಮಾನಿಗಳು

ಮೊನ್ನೆಯಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ನೋಡಿ, ರಿಷಬ್ ಶೆಟ್ಟಿ ಅವರನ್ನೇ ಮನೆಗೆ ಕರೆಯಿಸಿಕೊಂಡು ಸತ್ಕರಿಸಿದ್ದರು. ಇದೀಗ ಬಾಲಿವುಡ್ ನಟ ಸುನೀಲ್ ಶೆಟ್ಟಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಒಟ್ಟಿಗೆ ʻFIFA ವಿಶ್ವಕಪ್ʼ ವೀಕ್ಷಿಸಲು 23 ಲಕ್ಷ ರೂ. ಕೊಟ್ಟು ಮನೆ ಖರೀದಿಸಿದ ಕೇರಳದ ಫುಟ್‌ಬಾಲ್ ಅಭಿಮಾನಿಗಳು

‘ನಾನು ಕಾಂತಾರ ಸಿನಿಮಾ ನೋಡಿದೆ. ನನಗೆ ಅರಿವಿಲ್ಲದಂತೆ ಕಣ್ಣೀರು ಬಂತು. ತುಂಬಾ ಭಾವುಕನಾಗಿಬಿಟ್ಟೆ. ಯಾಕೆಂದರೆ, ನಾನು ಆ ನೆಲದವನು. ಅಲ್ಲಿ ಹುಟ್ಟಿ ಬೆಳೆದವನು. ಹಾಗಾಗಿ ಕಾಂತಾರ ಸಿನಿಮಾ ನನಗೆ ಬೇಗ ಕನೆಕ್ಟ್ ಆಯಿತು’ ಎಂದು ಮಾತನಾಡಿದ್ದಾರೆ. ರಿಷಬ್ ಶೆಟ್ಟಿ ಅವರ ನಿರ್ದೇಶನ ಹಾಗೂ ನಟನೆಯ ಬಗ್ಗೆಯೂ ಕೊಂಡಾಡಿದ್ದಾರೆ. ರಿಷಬ್ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಗ್ರೇಟ್ ಜಾಬ್ ಎಂದು ಹಾಡಿಹೊಗಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಸುನೀಲ್ ಶೆಟ್ಟಿ, ಕನ್ನಡದ ಸಿನಿಮಾ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ.

ಒಟ್ಟಿಗೆ ʻFIFA ವಿಶ್ವಕಪ್ʼ ವೀಕ್ಷಿಸಲು 23 ಲಕ್ಷ ರೂ. ಕೊಟ್ಟು ಮನೆ ಖರೀದಿಸಿದ ಕೇರಳದ ಫುಟ್‌ಬಾಲ್ ಅಭಿಮಾನಿಗಳು

‘ಕಾಂತಾರ’ ಚಿತ್ರವು ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಸೆ. 30ರಂದು ಬಿಡುಗಡೆಯಾದ ಚಿತ್ರವು ರಾಜ್ಯದ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲದೆ, ವಿದೇಶಗಳಲ್ಲೂ ಹಲವು ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಮುಗಿಸಿ, 100ನೇ ದಿನದತ್ತ ದಾಪುಗಾಲಿಟ್ಟಿದೆ. ಬರೀ ಕನ್ನಡವಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್ ಆಗಿರುವ ‘ಕಾಂತರ’, ಅಲ್ಲೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.

Share.
Exit mobile version