ನವದೆಹಲಿ: ಒಡಿಶಾದಲ್ಲಿ ಬೆಂಗಳೂರು ಕಾಮಾಕ್ಯ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಅಪಘಾತಕ್ಕೆ ಒಳಗಾಗಿದೆ. ಈ ಹಿನ್ನಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ಇಲಾಖೆಯಿಂದ ಸಹಾಯವಾಣಿ ಸಂಖ್ಯೆ ಬಿಡುಗಡೆ ಮಾಡಲಾಗಿದೆ.
ರೈಲು ಸಂಖ್ಯೆ 12551 ಬೆಂಗಳೂರು-ಕಾಮಾಕ್ಯ ಎಸಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ನ 11 ಬೋಗಿಗಳು ಪೂರ್ವ ಕರಾವಳಿ ರೈಲ್ವೆಯ ಖುರ್ದಾ ರಸ್ತೆ ವಿಭಾಗದ ಕಟಕ್-ನೆರ್ಗುಂಡಿ ರೈಲ್ವೆ ವಿಭಾಗದ ನೆರ್ಗುಂಡಿ ನಿಲ್ದಾಣದ ಬಳಿ 30.03.2025 ರಂದು (ಭಾನುವಾರ) ಬೆಳಿಗ್ಗೆ 11:54 ರ ಸುಮಾರಿಗೆ ಹಳಿ ತಪ್ಪಿವೆ ಎಂಬುದಾಗಿ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಪೂರ್ವ ಕರಾವಳಿ ರೈಲ್ವೆಯ ಜನರಲ್ ಮ್ಯಾನೇಜರ್ ಮತ್ತು ಖುರ್ದಾ ರಸ್ತೆಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮತ್ತು ಇತರ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಅಪಘಾತ ಪರಿಹಾರ ಮತ್ತು ವೈದ್ಯಕೀಯ ಪರಿಹಾರ ರೈಲನ್ನು ಸಹ ಸ್ಥಳಕ್ಕೆ ರವಾನಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬಾಧಿತ ರೈಲಿನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಕ್ಕೆ ಕಳುಹಿಸಲು ವಿಶೇಷ ರೈಲು ಯೋಜಿಸಲಾಗಿದೆ ಎಂದಿದೆ.
ಸಹಾಯವಾಣಿ ಸಂಖ್ಯೆ ಬಿಡುಗಡೆ
ಭುವನೇಶ್ವರ 8455885999
ಕಟಕ್ – 8991124238, 7205149591
ಭುವನೇಶ್ವರ – 8114382371
ಭದ್ರಾಕ್ – 9437443469
ಸಂಬಲ್ಪುರ ಜಂಕ್ಷನ್ – 8249999674
ಖುರ್ದಾ ರಸ್ತೆ – 6742492245
ಜೈಪುರ್ ಕಿಯೋಂಜಾರ್ – 9124639558
BREAKING: ಬೆಳಗಾವಿಯಲ್ಲಿ ಜಮೀನಿಗಾಗಿ 2 ಗುಂಪುಗಳ ನಡುವೆ ಮಾರಾಮಾರಿ: ಇಬ್ಬರಿಗೆ ಗಂಭೀರ ಗಾಯ
BREAKING: 10 & 12 ನೇ ತರಗತಿಯ ಹೊಸ ಪಠ್ಯಕ್ರಮವನ್ನು ಬಿಡುಗಡೆ ಮಾಡಿದ CBSE | New Syllabus For 10th, 12th