ಕಲಬುರ್ಗಿ: ಜಿಲ್ಲೆಯಲ್ಲಿ ಬಡ್ಡಿ ಹಣ ಕೊಡದ ಕಾರಣ, ವ್ಯಕ್ತಿಯೊಬ್ಬರ ಮೇಲೆ ಆಸಿಡ್ ಎರಚಿ ಅಮಾನವೀಯ ಕೃತ್ಯ ವೆಸಗಿರೋ ಘಟನೆ ನಡೆದಿದೆ.
ಕಲಬುರ್ಗಿಯ ಖರ್ಗೆ ಪೆಟ್ರೋಲ್ ಬಂಕ್ ಬಳಿಯಲ್ಲಿ ಮೀನು ವ್ಯಾಪಾರಿಯಾಗಿದ್ದಂತ ಜುಬೇರ್ ಅಹ್ಮದ್ ಎಂಬುವರು ಅರ್ಷದ್, ಪರ್ವೇಜ್ ಎಂಬುವರಿದೆ 35 ಲಕ್ ಸಾಲವನ್ನು ಪಡೆದಿದ್ದರು. ಈ ಹಣಕ್ಕೆ ಬಡ್ಡಿ, ಚಕ್ರಹಡ್ಡಿ ಅಂತ 90 ಲಕ್ಷ ಕೊಡುವಂತೆ ಅರ್ಷದ್ ಗ್ಯಾಂಗ್ ಜುಬೇರ್ ಅಹ್ಮದ್ ಪೀಡಿಸುತ್ತಿತ್ತು.
ಇತ್ತೀಚೆಗೆ ಜುಬೇರ್ ನನ್ನು ಕರೆಸಿಕೊಂಡಂತ ಇಮ್ರಾನ್ ಖಾನ್ ಎಂಬ ವ್ಯಕ್ತಿ, ಆತನನ್ನು ಕೂಡಿ ಹಾಕಿ ಹಲ್ಲೆ ಕೂಡ ನಡೆಸಲಾಗಿದೆ. ಅಲ್ಲದೇ ಕಲಬುರ್ಗಿಯ ಖರ್ಗೆ ಪೆಟ್ರೋಲ್ ಬಂಕ್ ಬಳಿಯಲ್ಲಿ ಆಸಿಡ್ ದಾಳಿ ಕೂಡ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಸಂಬಂಧ ಕಲಬುರ್ಗಿಯ ಎಂ.ಬಿ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
‘ಒಬ್ಬ ಶಾಸಕ’ನಿಗೆ ಬಿಜೆಪಿಯಿಂದ ’50 ಕೋಟಿ’ ಆಫರ್: ಸಿಎಂ ಸಿದ್ಧರಾಮಯ್ಯ ಸ್ಪೋಟಕ ಹೇಳಿಕೆ
ಬೆಂಗಳೂರಿನ ‘ರಾಮೇಶ್ವರಂ ಕೆಫೆ’ ಸ್ಪೋಟದ ಆರೋಪಿಯ ಬಗ್ಗೆ ‘NIA’ಗೆ ಮಹತ್ವದ ಸುಳಿವು ಪತ್ತೆ