ಬೆಂಗಳೂರು: ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ನಡುವೆ ಕಾಟೇರಾ ಸಿನಿಮಾದ ಟೈಟಲ್ ವಿವಾದ ತಾರಕಕ್ಕೇರಿದೆ. ನಟ ದರ್ಶನ್ ಅಯ್ಯೋ ತಗಡೆ ರಾಬರ್ಟ್ ಟೈಟಲ್ ಕೊಟ್ಟಿದ್ದೇ ನಾನು ಅಂದರೇ, ನಿರ್ಮಾಪಕ ಉಮಾಪತಿ ಮಾತ್ರ ನಾನು ಈಗ ಏನು ಹೇಳಲ್ಲ. ಅವರ ಎತ್ತರಕ್ಕೆ ಬೆಳೆದಾಗ ಮಾತನಾಡುವೆ ಅಂತ ಹೇಳಿದ್ದಾರೆ.
ಇಂದು ಕಾಟೇರ ಚಿತ್ರದ 50ನೇ ದಿನ ಸಂಭ್ರಮಾಚರಣೆಯಲ್ಲಿ ಬಾಗಿಯಾಗಿ ಮಾತನಾಡಿದಂತ ನಟ ದರ್ಶನ್ ಅವರು, ಕಾಟೇರ ಚಿತ್ರದ ಕತೆ ಹೇಳಿದ್ದು ನಾನು, ಟೈಟಲ್ ಕೊಟ್ಟಿದ್ದು ನಾನೇ ಎಂಬುದಾಗಿ ಹೇಳಿದಂತ ನಿರ್ಮಾಪಕ ಉಮಾಪತಿಗೆ ಅಯ್ಯೋ ತಗಡೇ, ನಿನಗೆ ರಾಬರ್ಟ್ ಕಥೆ ಕೊಟ್ಟಿದ್ದೇ ನಾನು ಎಂಬುದಾಗಿ ಖಡಕ್ ತಿರುಗೇಟು ನೀಡಿದ್ದಾರೆ.
ಮುಂದುವರೆದು ಮಾತನಾಡಿದಂತ ಅವರು ಕೆಲವರು ಕಾಟೇರ ಚಿತ್ರದ ಕತೆ, ಟೈಟಲ್ ನಾನು ಕೊಟ್ಟಿದ್ದು ಅಂತ ಹೇಳಿಕೊಳ್ಳುತ್ತಿದ್ದಾರೆ. ಯಾಕಪ್ಪ ಬಂದು ಬಂದು ನನ್ನ ಹತ್ತಿರವೇ ಗುಮ್ಮಿಸಿಕೊಳ್ತೀಯಾ ಅಂತ ಪರೋಕ್ಷವಾಗಿ ನಿರ್ಮಾಪಕ ಉಮಾಪತಿ ಬಗ್ಗೆ ವಾಗ್ಧಾಳಿ ನಡೆಸಿದರು.
ರಾಬರ್ಟ್ ಚಿತ್ರದ ಕತೆ ಕೊಟ್ಟಿದ್ದೇ ನಾನು. ನೀನು ಕತೆ, ಟೈಟಲ್ ಕೊಟ್ಟಿದ್ದೇ ನಾನು ಅಂತ ಹೇಳಿಕೊಳ್ಳುತ್ತಿದ್ದರೇ, ನೀನೇ ಕಾಟೇರ ಚಿತ್ರವನ್ನು ಮಾಡಬಹುದಾಗಿತ್ತಲ್ಲ. ಯಾಕೆ ಮಾಡಲಿಲ್ಲ? ನಿನ್ನ ಜಡ್ಜ್ ಮೆಂಟ್ ಸರಿಯಿಲ್ಲ ಅಂದೆಂಗೆ ಆಯ್ತು ಎಂಬುದಾಗಿ ಕಿಡಿಕಾರಿದರು.
ನಟ ದರ್ಶನ್ ಹೇಳಿಕೆಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಹೇಳಿದ್ದೇನು.?
ಈಗ ನಾವು ಎಲ್ಲದಕ್ಕೂ ಉತ್ತರ ಕೊಟ್ಟುಕೊಂಡು ಕೂರುವುದಿಲ್ಲ. ರಾಬರ್ಟ್ ಚಿತ್ರಕ್ಕೆ ಕತೆ, ಟೈಟಲ್, ಹಣ ಕೊಡ ಅವರೇ ಹಾಕಿದ್ರು. ನನಗೆ ಮಾಡೋದಕ್ಕೆ ಬೇರೆ ಕೆಲಸಇದೆ. ನಾನಿನ್ನೂ ಅವರ ಮಟ್ಟಕ್ಕೆ ಬೆಳಎದಿಲ್ಲ. ಬೆಳೆದಾಗ ಉತ್ತರ ಕೊಡುತ್ತೇನೆ. ಸಮಯ, ಸಂದರ್ಭ ಬಂದಾಗ ಉತ್ತರ ಕೊಟ್ಟೇ ಕೊಡುತ್ತೇನೆ ಎಂದರು.
ನಟ ದರ್ಶನ್ ಗೆಲುವಿಗೆ ನಮ್ಮಿಂದ ಏನೂ ಕೊಡುಗೆ ಇಲ್ಲ. ದರ್ಶನ್ ಬಗ್ಗೆ ನಾನು ಹೇಳಬೇಕಾದದ್ದು ಬೇರೆ ಇದೆ. ಯಾರನ್ನು ಕೂರಿಸಿಕೊಂಡು ಕತೆ ಮಾಡಿದ್ದಾರೆ ಎಂದು ನನಗೆ ಗೊತ್ತಿದೆ. ಆ ಬಗ್ಗೆ ಸಮಯ ಬಂದಾಗ ಮಾತನಾಡುತ್ತೇನೆ ಎಂಬುದಾಗಿ ತಿರುಗೇಟು ನೀಡಿದ್ದಾರೆ.
BREAKING: ಭಾರತೀಯ ವೃತ್ತಿಪರರಿಗೆ ಬ್ಯಾಲೆಟ್ ಸಿಸ್ಟಮ್ ಮೂಲಕ 3,000 ವೀಸಾ ನೀಡಲು ‘ಯುಕೆ’ ಒಪ್ಪಿಗೆ
ಹೇಗಿದೆ ನೋಡಿ ಮೊದಲ ‘ಚಾಲಕ ರಹಿತ’ ನಮ್ಮ ಮೆಟ್ರೋ ರೈಲು : ಫೋಟೋ ರಿವಿಲ್ ಮಾಡಿದ ಬಿಎಂಆರ್‌ಸಿಎಲ್