Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ’66 RTO ಕಚೇರಿ’ಗಳಲ್ಲಿ ‘mVahan’ ಮೊಬೈಲ್ ಆಪ್‌ ಜಾರಿ, ಭ್ರಷ್ಟಾಚಾರಕ್ಕೆ ಬ್ರೇಕ್!

08/03/2026 5:02 PM

ಅಮೆರಿಕಕ್ಕೆ ಗಲ್ಫ್ ರಾಷ್ಟ್ರಗಳ ಶಾಕ್: ಬೃಹತ್ ಹೂಡಿಕೆ ಹಾಗೂ ಒಪ್ಪಂದಗಳ ಹಿಂಪಡೆಯುವಿಕೆಗೆ ಚಿಂತನೆ

08/03/2026 4:30 PM

SHOCKING: ಹಾಸನದಲ್ಲಿ ಮಲಗಿದ್ದ ವೇಳೆಯೇ ಹೃದಯಾಘಾತ; ಆರೋಗ್ಯ ಇಲಾಖೆ ನೌಕರ ಸಾವು

08/03/2026 3:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಎಲ್ಲಾ ಸರ್ಕಾರಿ ಶಾಲೆ ಶಿಕ್ಷಕರು, ಕಾಲೇಜು ಉಪನ್ಯಾಸಕರಿಗೆ ‘KAAMS ಮೊಬೈಲ್ ಹಾಜರಾತಿ’ ಕಡ್ಡಾಯ: ರಾಜ್ಯ ಸರ್ಕಾರ ಆದೇಶ
KARNATAKA

ಎಲ್ಲಾ ಸರ್ಕಾರಿ ಶಾಲೆ ಶಿಕ್ಷಕರು, ಕಾಲೇಜು ಉಪನ್ಯಾಸಕರಿಗೆ ‘KAAMS ಮೊಬೈಲ್ ಹಾಜರಾತಿ’ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

By kannadanewsnow0919/02/2026 6:12 AM

ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಶಿಕ್ಷಕರು, ಮುಖ್ಯ ಶಿಕ್ಷಕರು, ಉಪನ್ಯಾಸಕರು, ಪ್ರಾಂಶುಪಾಲರು, ಅಧಿಕಾರಿಗಳು ಬೋಧಕೇತರ ಸಿಬ್ಬಂದಿ, ಅಧಿಕಾರಿಗಳು ಕೆಎಎಎಂಎಸ್ ಮೊಬೈಲ್ ಅಪ್ಲಿಕೇಷನ್ ಮೂಲಕ ಹಾಜರಾತಿ ದಾಖಲಿಸುವುದು ಕಡ್ಡಾಯಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ.

ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ 2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ ಸಂಖ್ಯೆ 451ರಲ್ಲಿ “ಕೃತಕ ಬುದ್ಧಿಮತ್ತೆ (ಎಐ) ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಹಾಗೂ ಮುಖ ಚಹರೆ ಗುರುತಿಸುವ ಅಪ್ಲಿಕೇಶನ್‌ಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಎಲ್ಲಾ ಇಲಾಖೆಗಳಲ್ಲಿ ಕರ್ನಾಟಕ ಅಡ್ವಾನ್ಸ್ ಅಟೆಂಡೆನ್ಸ್ ಮ್ಯಾನೇಜೆಂಟ್ ಸಿಸ್ಟಮ್ (ಕರ್ತವ್ಯ ಕೆ.ಎ.ಎ.ಎಂ.ಎಸ್) ಅನ್ನು ಜಾರಿಗೆ ತರಲಾಗುವುದು” ಎಂದು ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿರುತ್ತಾರೆ ಎಂದಿದ್ದಾರೆ.

ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಎಲ್ಲಾ ಸಿಬ್ಬಂದಿಗೆ ಕರ್ತವ್ಯ (KAAMS) ಮೊಬೈಲ್ ಅಪ್ಲಿಕೇಶನ್ ಮೂಲಕ ಹಾಜರಾತಿಯನ್ನು ನಿರ್ವಹಿಸಲು ಪ್ರಸ್ತಾಪಿಸಲಾಗಿದ್ದು, ರಾಜ್ಯ ಸರ್ಕಾರಿ ನೌಕರರು ಮೊಬೈಲ್ ಅಪ್ಲಿಕೇಶನ್ ಅನ್ನು ಡೌನೋಡ್ ಮಾಡಿಕೊಳ್ಳಬಹುದು ಮತ್ತು ಕರ್ತವ್ಯ (KAAMS) ಮೊಬೈಲ್ ಅಪ್ಲಿಕೇಶನ್ ಬಳಸಿ HRMS ನಲ್ಲಿ ನೊಂದಾಯಿತ ಪ್ರಥಮ ಕೆಜಿಐಡಿ ಸಂಖ್ಯೆಯೊಂದಿಗೆ ನೊಂದಣಿ ಮಾಡಿಕೊಂಡು ತಮ್ಮ ಕರ್ತವ್ಯದ ಸ್ಥಳದಲ್ಲಿ ಹಾಜರಾತಿ ಗುರುತಿಸಬಹುದಾಗಿರುತ್ತದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಜ್ಯ ಸರ್ಕಾರದ ಅತಿ ದೊಡ್ಡ ಇಲಾಖೆಯಾಗಿದ್ದು, ರಾಜ್ಯದಾದ್ಯಂತ ಇರುವ ಸರ್ಕಾರಿ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಶಿಕ್ಷಣ ಸಂಸ್ಥೆಗಳು, ಡಯಟ್, ಸಿ.ಟಿ.ಇ, ಮತ್ತು ಇತರೆ ಕಚೇರಿಗಳಲ್ಲಿ ಹೆಚ್ಚಿನ ಸಂಖ್ಯೆಯ ಖಾಯಂ ಶಿಕ್ಷಕರು ಮತ್ತು ಉಪನ್ಯಾಸಕರು ಹಾಗೂ ತತ್ಸಮಾನ ವೃಂದದ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭೌತಿಕ ಅಥವಾ ವಿಕೇಂದ್ರೀಕೃತ ಕಾರ್ಯವಿಧಾನದ ಮೂಲಕ ನಿರ್ವಹಿಸಲಾಗುತ್ತಿರುವ ಹಾಜರಾತಿಯ ಮೇಲ್ವಿಚಾರಣೆಯು ಆಡಳಿತಾತ್ಮಕವಾಗಿ ಸಮರ್ಥತೆ ಮತ್ತು ಸಮಂಜಸತೆಯನ್ನು ಹೊಂದಿರುವುದಿಲ್ಲ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶಿಕ್ಷಣದ ಗುಣಮಟ್ಟದಲ್ಲಿ ಸುಧಾರಣೆ, ಸರ್ಕಾರದ ನೀತಿ ಮತ್ತು ಶೈಕ್ಷಣಿಕ ಸುಧಾರಣೆಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಶಿಕ್ಷಕರು, ಉಪನ್ಯಾಸಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳು / ಸಿಬ್ಬಂದಿಗೆ ನಿರಂತರ ವೃತ್ತಿಪರ ಅಭಿವೃದ್ಧಿಗೆ ಒತ್ತು ನೀಡುತ್ತದೆ ಮತ್ತು ವಿಷಯ ಜ್ಞಾನ, ಶೈಕ್ಷಣಿಕ ಕೌಶಲ್ಯಗಳು ಮತ್ತು ವೃತ್ತಿಪರ ಸಾಮರ್ಥ್ಯಗಳನ್ನು ಉನ್ನತೀಕರಿಸಲು ತರಬೇತಿ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ತರಬೇತಿ ಕಾರ್ಯಕ್ರಮಗಳನ್ನು ರಾಜ್ಯ, ಜಿಲ್ಲೆ ಮತ್ತು ಬ್ಲಾಕ್ ಹಂತದ ವಿವಿಧ ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ತರಬೇತಿ ಕಾರ್ಯಕ್ರಮದಲ್ಲಿ ಖಾಯಂ ಶಿಕ್ಷಕರು, ಖಾಯಂ ಉಪನ್ಯಾಸಕರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ತತ್ಸಮಾನದ ವೃಂದದ ಖಾಯಂ ಅಧಿಕಾರಿಗಳು/ಸಿಬ್ಬಂದಿಯ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಬೇಕಿರುತ್ತದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶಾಲಾ ಮತ್ತು ಪದವಿ ಪೂರ್ವ ಹಂತಗಳಲ್ಲಿ ಅಂದರೆ 10 ಮತ್ತು 12ನೇ ತರಗತಿಗಳ ಪರೀಕ್ಷಾ ಫಲಿತಾಂಶಗಳ ಸುರಕ್ಷಿತ ಮೌಲ್ಯಮಾಪನ ಪುಕ್ರಿಯೆಯನ್ನು ಅನುಸರಿಸುತ್ತದೆ. ಈ ಮೌಲ್ಯಮಾಪನ ಪ್ರಕ್ರಿಯೆಯನ್ನು ಜಿಲ್ಲಾ ಹಂತದಲ್ಲಿ ವಿವಿಧ ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಮೌಲ್ಯಮಾಪನ ಕೇಂದ್ರಗಳಲ್ಲಿ ಖಾಯಂ ಶಿಕ್ಷಕರು, ಖಾಯಂ ಉಪನ್ಯಾಸಕರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ತತ್ಸಮಾನದ ವೃಂದದ ಖಾಯಂ ಅಧಿಕಾರಿಗಳು/ಸಿಬ್ಬಂದಿಯ ಹಾಜರಿಯನ್ನು ಸಹ ಖಚಿತಪಡಿಸಿಕೊಳ್ಳಬೇಕಿರುತ್ತದೆ.

ಕರ್ತವ್ಯ (Kartavya) ಮೊಬೈಲ್ ಅಪ್ಲಿಕೇಷನ್ ಮೂಲಕ ಸಿಬ್ಬಂದಿಯ ಮುಖಚಹರೆ ಪರಿಶೀಲನೆಯೊಂದಿಗೆ ಸುರಕ್ಷಿತ ಲಾಗಿನ್ ಮೂಲಕ ಅಧಿಕೃತ ಖಾಯಂ ಸಿಬ್ಬಂದಿಯ ಹಾಜರಾತಿಯನ್ನು ಗುರುತಿಸುವುದನ್ನು ಖಚಿತಪಡಿಸುತ್ತದೆ ಹಾಗೂ ಸುಧಾರಿತ ಹಾಜರಾತಿ ಡ್ಯಾಶ್‌ಬೋರ್ಡ್ ಮತ್ತು ವರದಿಗಳನ್ನು ತ್ವರಿತವಾಗಿ ಸಂಸ್ಥೆಯ ಮುಖ್ಯಸ್ಥರಿಗೆ ಒದಗಿಸುತ್ತದೆ. ಅಕ್ರಮ ಮತ್ತು ತಿದ್ದುಪಡಿಗೆ ಅವಕಾಶವಿಲ್ಲದಂತೆ ಹಾಜರಾತಿಯನ್ನು ಗುರುತಿಸಲು ಅತ್ಯಾಧುನಿಕ ತಂತ್ರಜ್ಞಾನಗಳ (ಜಿಐಎಸ್ ಮತ್ತು ಕೃತಕ ಬುದ್ಧಿಮತ್ತೆ ಬಳಕೆಯನ್ನು ಉತ್ತೇಜಿಸುತ್ತದೆ ಮತ್ತು ಈ ಮೂಲಕ ಇಲಾಖೆಯ ಅಧಿಕಾರಿಗಳಿಗೆ ಸುಧಾರಿತ ಹಾಜರಾತಿ ಡ್ಯಾಶ್‌ಬೋರ್ಡ್ ಮೂಲಕ ವರದಿಗಳನ್ನು ಒದಗಿಸುತ್ತದೆ.

KAAMS ವ್ಯವಸ್ಥೆಯು ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ವರದಿಯನ್ನು ಒದಗಿಸುವ ಮೂಲಕ ಪರಿಣಾಮಕಾರಿ ಮತ್ತು ಕೇಂದ್ರೀಕೃತವಾಗಿ ಮೇಲ್ವಿಚಾರಣೆಯನ್ನು ಮಾಡಲು ಅವಕಾಶ ಕಲ್ಪಿಸುತ್ತದೆ. ಆಡಳಿತಾತ್ಮಕ ನಿಯಂತ್ರಣ, ನಿಯೋಜನೆ, ಯೋಜನೆ, ವೇತನ ಪ್ರಕ್ರಿಯೆ ಮತ್ತು ಶಿಸ್ತು ಮೇಲ್ವಿಚಾರಣೆಗೆ ಅಗತ್ಯವಿರುವ ನಿಖರವಾದ ಹಾಜರಾತಿ ವರದಿಗಳನ್ನು ಒದಗಿಸುವ ಮೂಲಕ ಇದು ದತ್ತಾಂಶ ಚಾಲಿತ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಬೆಂಬಲಿಸುತ್ತದೆ. ಸದರಿ ವ್ಯವಸ್ಥೆಯು ಉತ್ತರದಾಯಿತ್ವವನ್ನು ಬಲಪಡಿಸಲಿದ್ದು ಸಮಯಪ್ರಜ್ಞೆ ಮತ್ತು ಸಾಂಸ್ಥಿಕ ಶಿಸ್ತನ್ನು ಸುಧಾರಿಸುತ್ತದೆ ಮತ್ತು ದತ್ತಾಂಶ ಆಧಾರಿತ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಬೆಂಬಲಿಸುತ್ತದೆ ಹಾಗೂ ಈ ವ್ಯವಸ್ಥೆಯು ಹಾಜರಾತಿಯನ್ನು ನೈಜ ಸಮಯದಲ್ಲಿ ಸೆರೆಹಿಡಿಯುವುದನ್ನು ಖಾತ್ರಿಪಡಿಸುತ್ತದೆ ಹಾಗೂ ಭೌತಿಕ ಹಸ್ತಕ್ಷೇಪವನ್ನು ಕಡಿಮೆ ಮಾಡುತ್ತದೆ.

ರಾಜ್ಯ ಸರ್ಕಾರದ ಡಿಜಿಟಲ್ ಆಡಳಿತ, ಪಾರದರ್ಶಕತೆ ಮತ್ತು ಆಡಳಿತಾತ್ಮಕ ದಕ್ಷತೆಯ ಉದ್ದೇಶಗಳಿಗೆ ಅನುಗುಣವಾಗಿ ಕರ್ತವ್ಯ (Kartavya) ಮೊಬೈಲ್ ಆಪ್ ಅನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಖಾಯಂ ಶಿಕ್ಷಕರು, ಖಾಯಂ ಉಪನ್ಯಾಸಕರು, ತತ್ರಮಾನದ ವೃಂದದ ಖಾಯಂ ಅಧಿಕಾರಿ / ಸಿಬ್ಬಂದಿಗೆ ಮತ್ತು ಎಲ್ಲಾ ಖಾಯಂ ಬೋಧಕೇತರ ಸಿಬ್ಬಂದಿಯ ಹಾಜರಾತಿಯನ್ನು ಗುರುತಿಸಲು ಮತ್ತು ಮೇಲ್ವಿಚಾರಣೆ ಮಾಡಲು ಕರ್ತವ್ಯ(Kartavya) ಮೊಬೈಲ್ ಆಪ್ ಮೂಲಕ ಹಾಜರಾತಿ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸುವುದು ಆಡಳಿತಾತ್ಮಕವಾಗಿ ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ಅತ್ಯಗತ್ಯವಾಗಿರುತ್ತದೆ.

ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಬೆಂಗಳೂರು ಹಾಗೂ ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಇವರು ಖಾಯಂ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಹಾಜರಾತಿ ಸಂಬಂಧಪಟ್ಟಂತೆ KAAMS ತಂತ್ರಾಂಶವನ್ನು ಅನುಷ್ಠಾನಗೊಳಿಸುವ ಬಗ್ಗೆ ಏಕ ಕಡತಗಳನ್ನು ಪ್ರತ್ಯೇಕವಾಗಿ ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. KAAMS ತಂತ್ರಾಂಶದ ಪ್ರಾಯೋಗಿಕ ಯೋಜನೆ (Pilot) ಯನ್ನು ಈಗಾಲೇ ಯಶಸ್ವಿಯಾಗಿ ಕೈಗೊಳ್ಳಲಾಗಿರುತ್ತದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಎಲ್ಲಾ ಖಾಯಂ ಸಿಬ್ಬಂದಿಗಳು ಅಂದರೆ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳ ಶಿಕ್ಷಕರು, ಮುಖ್ಯ ಶಿಕ್ಷಕರು, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು, ಪ್ರಾಂಶುಪಾಲರು, ತತ್ಸಮಾನ ವೃಂದದ ಸಿಬ್ಬಂದಿ, ಮತ್ತು ಅಧಿಕಾರಿಗಳು ಮತ್ತು ಎಲ್ಲಾ ಕಚೇರಿಗಳಲ್ಲಿನ ಖಾಯಂ ಬೋಧಕೇತರ ಸಿಬ್ಬಂದಿ/ಅಧಿಕಾರಿಗಳ ಹಾಜರಾತಿಯನ್ನು ತಮ್ಮ ಕರ್ತವ್ಯದ ಸ್ಥಳದಲ್ಲಿ ಪ್ರತಿದಿನ ಹಾಗು ತರಬೇತಿ ಕಾರ್ಯಕ್ರಮದ ಅವಧಿಯಲ್ಲಿ ತರಬೇತಿ ಕೇಂದ್ರಗಳಲ್ಲಿ ಮತ್ತು ಹತ್ತನೇ ತರಗತಿ ಹಾಗೂ ಪದವಿ ಪೂರ್ವ ಪರೀಕ್ಷೆಗಳ ಮತ್ತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದ ನಡೆಸುವ ಎಲ್ಲಾ ಪರೀಕ್ಷೆಗಳ ಮೌಲ್ಯಮಾಪನ ಕೇಂದ್ರಗಳಲ್ಲಿ ಕಡ್ಡಾಯವಾಗಿ ಗುರುತಿಸಲು ಹಾಗೂ ಎಲ್ಲಾ ಸಹ ಇಲಾಖೆಗಳಲ್ಲಿ ಖಾಯಂ ಸಿಬ್ಬಂದಿಯ ಹಾಜರಾತಿ ದತ್ತಾಂಶದ ಏಕರೂಪತೆ, ಪಾರದರ್ಶಕತೆ ಮತ್ತು ಪರಿಶೀಲನೀಯತೆಯನ್ನು ಖಾತ್ರಿಪಡಿಸುವ ಸಂಬಂಧ ಕರ್ನಾಟಕ ಅಡ್ಯಾನ್ಸ್ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಕರ್ತವ್ಯ Kartavya – KAAMS) ಮೊಬೈಲ್ ಅಪ್ಲಿಕೇಷನ್ ಅನ್ನು ತಕ್ಷಣದಿಂದ ಕಡ್ಡಾಯವಾಗಿ ಜಾರಿಗೊಳಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಅವರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ (ಕಲಬುರ್ಗಿ / ಧಾರವಾಡ ಇವರ ವ್ಯಾಪ್ತಿಗೆ ಒಳಪಡುವು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, ಆಯುಕ್ತರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಿರ್ದೇಶಕರು, ಸರ್ಕಾರಿ ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆ ಇಲಾಖೆ, ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ನಿರ್ದೇಶಕರು, ರಾಜ್ಯ ಶಾಲಾ ನಾಯಕ ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣೆ ಸಂಸ್ಥೆ (SISLEP), ಮತ್ತು ನಿರ್ದೇಶಕರು, ಕರ್ನಾಟಕ ಪಠ್ಯಪುಸ್ತಕ ಸಂಘ, ಇವರಿಗೆ ಅನುಮತಿ ನೀಡಿ ಆದೇಶಿಸಿದ.

ಕಾರ್ಯಕ್ರಮದ ಅನುಷ್ಠಾನಕ್ಕೆ ಇಲಾಖಾ ಮುಖ್ಯಸ್ಥರು ಪಾಲಿಸಬೇಕಾದ ಷರತ್ತುಗಳು:-

1. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಕರ್ತವ್ಯ (Kartavya) ಮೊಬೈಲ್ ಅಪ್ಲಿಕೇಷನ್ ಮೂಲಕ ಎಲ್ಲಾ ಖಾಯಂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ / ಅಧಿಕಾರಿಗಳ ಹಾಜರಾತಿ ದಾಖಲಿಸುವ ಪ್ರಕ್ರಿಯೆಯನ್ನು ತಕ್ಷಣದಿಂದಲೇ ಜಾರಿಗೊಳಿಸತಕ್ಕದ್ದು ಹಾಗೂ ಸಂಬಂಧಿಸಿದ ಇಲಾಖಾ ಮುಖ್ಯಸ್ಥರುಗಳು ಸದರಿ ಕಾರ್ಯಕ್ರಮದ ಅನುಷ್ಠಾನಾಧಿಕಾರಿಗಳಾಗಿ ಕಾರ್ಯನಿರ್ವಹಿಸತಕ್ಕದ್ದು.

2. Centre for e-Governance, KAMS ತಂಡವನ್ನು ತಕ್ಷಣವೇ ಸಂಪರ್ಕಿಸಿ, ಎಲ್ಲಾ ಇಲಾಖೆಗಳ ಖಾಯಂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ/ಅಧಿಕಾರಿಗಳ ಕರ್ತವ್ಯ (Kartavya- KAAMS) ಹಾಜರಾತಿಯನ್ನು HRMS ತಂತ್ರಾಂಶದೊಂದಿಗೆ ಸಂಯೋಜಿಸಲು ಅಗತ್ಯ ಕ್ರಮವಹಿಸತಕ್ಕದ್ದು.

3. ಶಾಲಾ ಶಿಕ್ಷಣ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ಇಲಾಖೆಯ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳ ಖಾಯಂ ಶಿಕ್ಷಕರು, ತತ್ಸಮಾನ ವೃಂದದ ಸಿಬ್ಬಂದಿ, ಮುಖ್ಯ ಶಿಕ್ಷಕರು, ಪದವಿಪೂರ್ವ ಕಾಲೇಜುಗಳ ಖಾಯಂ ಉಪನ್ಯಾಸಕರು, ಪ್ರಾಂಶುಪಾಲರು ಮತ್ತು ಎಲ್ಲಾ ಕಚೇರಿಗಳಲ್ಲಿನ ಖಾಯಂ ಬೋಧಕೇತರ ಸಿಬ್ಬಂದಿಗಳ / ಅಧಿಕಾರಿಗಳು ಹಾಜರಾತಿಯನ್ನು ತಮ್ಮ ಕರ್ತವ್ಯದ ಸ್ಥಳದಲ್ಲಿ, ತರಬೇತಿ ಕೇಂದ್ರದಲ್ಲಿ ಮತ್ತು ಮೌಲ್ಯಮಾಪನ ಕೇಂದ್ರಗಳಲ್ಲಿ ಕಡ್ಡಾಯವಾಗಿ ಪ್ರತಿ ದಿನ 02 ಬಾರಿ (In Time – Out Time) ಹಾಜರಾತಿಯನ್ನು ಕಡ್ಡಾಯವಾಗಿ ಕರ್ತವ್ಯ (Kartavya) ಮೊಬೈಲ್ ಅಪ್ಲಿಕೇಷನ್ ಮೂಲಕ ದಾಖಲಿಸಲು ಅನುಷ್ಠಾನಾಧಿಕಾರಿಗಳು ನಿರ್ದೇಶನ ನೀಡತಕ್ಕದ್ದು.

4, ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ / ಅಧಿಕಾರಿಗಳು ತಮ್ಮ ಹಾಜರಾತಿಯನ್ನು ಕರ್ತವ್ಯ (Kartavya – KAAMS) ಮೊಬೈಲ್ ಅಪ್ಲಿಕೇಷನ್ ಮೂಲಕ ದಾಖಲಿಸುತ್ತಿರುವುದನ್ನು ಕಛೇರಿ ಮುಖ್ಯಸ್ಥರು ದೃಢವಡಿಸಿಕೊಳ್ಳತಕ್ಕದ್ದು.

5. ಕರ್ತವ್ಯ (Kartavya KAAMS) ಮೊಬೈಲ್ ಅಪ್ಲಿಕೇಷನ್ ಮೂಲಕ ಹಾಜರಾತಿಯನ್ನು ದಾಖಲಿಸಲು ಉದ್ಭವಿಸುವ ತಾಂತ್ರಿಕ ದೋಷಗಳನ್ನು, ಇಲಾಖೆಗೆ ಸಂಬಂಧಿಸಿದ ಆ ಅವಶ್ಯಕತೆಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿನ ಅನುಷ್ಠಾನಾಧಿಕಾರಿಗಳು, Centre for e-Governance ಸಿಬ್ಬಂದಿ / KAAMS ಸಂಬಂಧಿಸಿದ – ಯೋಜನಾ ನಿರ್ದೇಶಕರನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳತಕ್ಕದ್ದು.

6. ಕರ್ತವ್ಯ Kartavya (KAAMS) ಮೊಬೈಲ್ ಅಪ್ಲಿಕೇಷನ್ ಮೂಲಕ ಕೂಡಲೇ ಎಲ್ಲಾ ಖಾಯಂ ಸಿಬ್ಬಂದಿ, ಅಧಿಕಾರಿಗಳು ನೊಂದಣಿ ಮಾಡಿ ಹಾಜರಾತಿಯನ್ನು ದಾಖಲಿಸುವುದನ್ನು ಉಪನಿರ್ದೇಶಕರು (ಆಡಳಿತ | ಅಭಿವೃದ್ಧಿ / ಪದವಿಪೂರ್ವ) ಇವರು ಖಚಿತಪಡಿಸಿಕೊಳ್ಳತಕ್ಕದ್ದು.

7. ಕ.ಎ.ಎ.ಎಂ.ಎಸ್  (KAAMS) ದತ್ತಾಂಶ ವರದಿಗಳನ್ನು ಕಾರ್ಯಕ್ಷಮತೆಯ ವಿಶ್ಲೇಷಣೆ, ಖಾಯಂ ಶಿಕ್ಷಕರ | ಉಪನ್ಯಾಸಕರ ನಿಯೋಜನೆ, ಸಿಬ್ಬಂದಿಯ ತರ್ಕಬದ್ಧಗೊಳಿಸುವಿಕೆ, ವೇತನ ಪಾವತಿಗೆ ಇಲಾಖಾ ಮುಖ್ಯಸ್ಥರು ಬಳಸತಕ್ಕದ್ದು.

8. ಕೆ.ಎ.ಎ.ಎಂ.ಎಸ್ (KAAMS) ಡ್ಯಾಶ್‌ಬೋರ್ಡ್‌ಅನ್ನು ಇಲಾಖೆಯ ಅವಶ್ಯಕತೆಯ ಅನುಗುಣವಾಗಿ ಕಛೇರಿ ಮುಖ್ಯಸ್ಥರು / ಇಲಾಖಾ ಮುಖ್ಯಸ್ಥರು ವೀಕ್ಷಿಸಲು / Role-based Access Control (RBAL) ನೀಡಲು (ಉದ್ಯೋಗಿ / ಸಂಸ್ಥೆಯ ಮುಖ್ಯಸ್ಥ / ತಾಲ್ಲೂಕು ಹಂತದ ಅಧಿಕಾರಿ/ ಜಿಲ್ಲಾ ಹಂತದ ಅಧಿಕಾರಿ / ಇಲಾಖಾ ಮುಖ್ಯಸ್ಥರು) Centre for e Governance ಸಿಬ್ಬಂದಿ / KAAMS ಸಂಬಂಧಿಸಿದ ಯೋಜನಾ ನಿರ್ದೇಶಕರನ್ನು ಸಂಪರ್ಕಿಸತಕ್ಕದ್ದು.

9. ಎಲ್ಲಾ ಸಿಬ್ಬಂದಿಗಳ ಹಾಜರಾತಿಯನ್ನು ಕರ್ತವ್ಯದ ಸ್ಥಳ / ಕಾರ್ಯಸ್ಥಾನ / ತರಬೇತಿ ಕೇಂದ್ರ / ಮೌಲ್ಯಮಾಪನ ಕೇಂದ್ರಗಳ Geo-fenced boundaries ಒಳಗೆ ಮಾತ್ರ KAAMS ಮೊಬೈಲ್ ಆಪ್ ಮೂಲಕ ದಾಖಲಿಸಲು ಅನುಮತಿಸತಕ್ಕದ್ದು.

10. 3(KAAMS) ಮೊಬೈಲ್ ಅಪ್ಲಿಕೇಷನ್ ಮೂಲಕ ದಾಖಲಾದ ಹಾಜರಾತಿ ಮಾಹಿತಿಯನ್ನು SATS – EEDS ತಂತ್ರಾಂಶದೊಂದಿಗೆ ಸಂಯೋಜಿಸಲು ಇಲಾಖಾ ಮುಖ್ಯಸ್ಥರು ಅಗತ್ಯ ಕ್ರಮವಹಿಸತಕ್ಕದ್ದು.

11. ಕರ್ತವ್ಯ Kartavya ಮೊಬೈಲ್ ಅಪ್ಲಿಕೇಷನ್ ಮೂಲಕ ಹಾಜರಾತಿಯನ್ನು ದಾಖಲಿಸುವ ಸಂಬಂಧ ತರಬೇತಿ ಕಾರ್ಯಕ್ರಮಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ Centre for e Governance ಮೂಲಕ ಕೂಡಲೇ ಆನ್‌ಲೈನ್ ತರಬೇತಿಯನ್ನು ಆಯೋಜಿಸಲು ಅನುಷ್ಠಾನಾಧಿಕಾರಿಗಳು ಅಗತ್ಯ ಕ್ರಮವಹಿಸತಕ್ಕದ್ದು.

12. ಶಾಲೆಗಳು ಹಾಗೂ ಕಾಲೇಜುಗಳಲ್ಲಿ ದಿನನಿತ್ಯ ದಾಖಲಿಸಲಾಗುವ KAAMS ಹಾಜರಾತಿ ವಿವರಗಳು SATS ತಂತ್ರಾಂಶದ ಮೂಲಕ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗತಕ್ಕದ್ದು ಹಾಗೂ ಕಚೇರಿಗಳ ಹಾಜರಾತಿ ವಿವರಗಳು ಸಂಬಂಧಿತ ಇಲಾಖೆಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿ, ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗತಕ್ಕದ್ದು.

13. KAAMS ನಿಂದ ಮಾಸಿಕ ಅನುಸರಣಾ ವರದಿಗಳು ಸ್ವಯಂಚಾಲಿತವಾಗಿ ಸೃಜಿಸಲು ಹಾಗೂ ಶಾಲಾ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ Kartavya ಮೊಬೈಲ್ ಅಪ್ಲಿಕೇಷನ್ ಮೂಲಕ ದಾಖಲಿಸುತ್ತಿರುವ ಹಾಜರಾತಿ ಪ್ರಗತಿ ವರದಿಯನ್ನು ಪ್ರತಿ ಮಾಹೆ ಸರ್ಕಾರಕ್ಕೆ ಸಲ್ಲಿಸಲು ಅನುಷ್ಟಾನಾಧಿಕಾರಿಗಳು ಅಗತ್ಯ ಕ್ರಮವಹಿಸತಕ್ಕದ್ದು.

ಈ ಆದೇಶವನ್ನು ಸಚಿವ ಸಂಪುಟದ ಪುಕರಣ ಸಂಖ್ಯೆ: ಸಿ.61/2026, ದಿನಾಂಕ: 22.01.2026ರಲ್ಲಿ ನೀಡಿರುವ ಅನುಮೋದನೆ ಮೇರೆಗೆ ಹಾಗೂ ಸರ್ಕಾರದ ಆದೇಶ ಸಂಖ್ಯೆ: ಎಫ್.ಡಿ 04 ಟಿಎಫ್‌ಪಿ 2025, ದಿನಾಂಕ: 01.01.2026ರಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿರುವ ಅಧಿಕಾರದನ್ವಯ ಹೊರಡಿಸಿದೆ.

GOOD NEWS: ರಾಜ್ಯದ 108 ಆಂಬುಲೆನ್ಸ್ ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿ: ಬೋನಸ್, ಪ್ರೋತ್ಸಾಹಧನಕ್ಕೆ ಸರ್ಕಾರ ಗ್ರೀನ್ ಸಿಗ್ನಲ್

Share. Facebook Twitter LinkedIn WhatsApp Email

Related Posts

ರಾಜ್ಯದ ’66 RTO ಕಚೇರಿ’ಗಳಲ್ಲಿ ‘mVahan’ ಮೊಬೈಲ್ ಆಪ್‌ ಜಾರಿ, ಭ್ರಷ್ಟಾಚಾರಕ್ಕೆ ಬ್ರೇಕ್!

08/03/2026 5:02 PM1 Min Read

SHOCKING: ಹಾಸನದಲ್ಲಿ ಮಲಗಿದ್ದ ವೇಳೆಯೇ ಹೃದಯಾಘಾತ; ಆರೋಗ್ಯ ಇಲಾಖೆ ನೌಕರ ಸಾವು

08/03/2026 3:32 PM1 Min Read

ALERT : `WhatsApp’ ಬಳಕೆದಾರರೇ ಎಚ್ಚರ : ಈ `ಮೆಸೇಜ್’ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ !

08/03/2026 3:30 PM2 Mins Read
Recent News

ರಾಜ್ಯದ ’66 RTO ಕಚೇರಿ’ಗಳಲ್ಲಿ ‘mVahan’ ಮೊಬೈಲ್ ಆಪ್‌ ಜಾರಿ, ಭ್ರಷ್ಟಾಚಾರಕ್ಕೆ ಬ್ರೇಕ್!

08/03/2026 5:02 PM

ಅಮೆರಿಕಕ್ಕೆ ಗಲ್ಫ್ ರಾಷ್ಟ್ರಗಳ ಶಾಕ್: ಬೃಹತ್ ಹೂಡಿಕೆ ಹಾಗೂ ಒಪ್ಪಂದಗಳ ಹಿಂಪಡೆಯುವಿಕೆಗೆ ಚಿಂತನೆ

08/03/2026 4:30 PM

SHOCKING: ಹಾಸನದಲ್ಲಿ ಮಲಗಿದ್ದ ವೇಳೆಯೇ ಹೃದಯಾಘಾತ; ಆರೋಗ್ಯ ಇಲಾಖೆ ನೌಕರ ಸಾವು

08/03/2026 3:32 PM

ALERT : `WhatsApp’ ಬಳಕೆದಾರರೇ ಎಚ್ಚರ : ಈ `ಮೆಸೇಜ್’ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ !

08/03/2026 3:30 PM
State News
KARNATAKA

ರಾಜ್ಯದ ’66 RTO ಕಚೇರಿ’ಗಳಲ್ಲಿ ‘mVahan’ ಮೊಬೈಲ್ ಆಪ್‌ ಜಾರಿ, ಭ್ರಷ್ಟಾಚಾರಕ್ಕೆ ಬ್ರೇಕ್!

By kannadanewsnow0908/03/2026 5:02 PM KARNATAKA 1 Min Read

ಬೆಂಗಳೂರು: ಕರ್ನಾಟಕ ರಾಜ್ಯದ ಸಾರಿಗೆ ಕ್ಷೇತ್ರದಲ್ಲಿ ಪಾರದರ್ಶಕತೆ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ, ಸಾರಿಗೆ ಸಚಿವ ರಾಮಲಿಂಗಾ…

SHOCKING: ಹಾಸನದಲ್ಲಿ ಮಲಗಿದ್ದ ವೇಳೆಯೇ ಹೃದಯಾಘಾತ; ಆರೋಗ್ಯ ಇಲಾಖೆ ನೌಕರ ಸಾವು

08/03/2026 3:32 PM

ALERT : `WhatsApp’ ಬಳಕೆದಾರರೇ ಎಚ್ಚರ : ಈ `ಮೆಸೇಜ್’ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ !

08/03/2026 3:30 PM

ರಾಜ್ಯ ಬಜೆಟ್‌ನಲ್ಲಿ ಕ್ವಾಂಟಮ್‌ ರೋಡ್‌ಮ್ಯಾಪ್‌ ಗೆ 10 ಕೋಟಿ ರೂ ಘೋಷಣೆ: ಸಮಗ್ರ ಅಭಿವೃದ್ದಿಯ ಐತಿಹಾಸಿಕ ಹೆಜ್ಜೆ: ಸಚಿವ ಎನ್‌ ಎಸ್‌ ಭೋಸರಾಜು

08/03/2026 3:23 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.