ಬೆಂಗಳೂರು: ಕೆಇಎ ಸಿಇಟಿ ಪರೀಕ್ಷೆಯನ್ನು ಏಪ್ರಿಲ್.18 ಮತ್ತು 18, 2024ರಂದು ನಡೆಸಲಾಗಿತ್ತು. ಈ ಪರೀಕ್ಷೆಯ ಫಲಿತಾಂಶವನ್ನು ಕೆಇಎಯಿಂದ ಮುಂದಿನವಾರ ಪ್ರಕಟಿಸುವುದಾಗಿ ಅಧಿಕೃತ ಮಾಹಿತಿ ನೀಡಿದೆ.
ಈ ಸಂಬಂಧ ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಏಪ್ರಿಲ್ ನಲ್ಲಿ ನಡೆದಿದ್ದಂತ ಕೆ-ಸಿಇಟಿ ಪರೀಕ್ಷೆಯ ಫಲಿತಾಂಶವನ್ನು ಮುಂದಿನವಾರ ಪ್ರಕಟಿಸಲಾಗುತ್ತದೆ. ಪರೀಕ್ಷೆ ಬರೆದಿದ್ದಂತ ವಿದ್ಯಾರ್ಥಿಗಳು ಫಲಿತಾಂಶವನ್ನು https://kea.kar.nic.in ಜಾಲತಾಣಕ್ಕೆ ಭೇಟಿ ನೀಡಿ ವೀಕ್ಷಿಸಬಹುದಾಗಿದೆ ಎಂದಿದೆ.
ಅಂದಹಾಗೇ 2024ರ ಕೆ-ಸಿಇಟಿ ಪರೀಕ್ಷೆಗೆ 3.27 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಈಗ ದ್ವಿತೀಯ ಪಿಯುಸಿ ಹಾಗೂ ಕೃಷಿ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶದ ನಂತ್ರ, ಕೆಇಎಯಿಂದ ಕೆ-ಸಿಇಟಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ.