ಬೆಂಗಳೂರು: ಕಾಂತಾರ-1ರ ಸಿನಿಮಾ ಚಿತ್ರೀಕರಣದ ವೇಳೆಯಲ್ಲಿ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ನೀರಲ್ಲಿ ಮುಳುಗಿ ಸಾವಿನ ಪ್ರಕರಣ ಸಂಬಂಧ ನಟ ರಿಷಭ್ ಶೆಟ್ಟಿ, ಹೊಂಬಾಳೆ ಫಿಲ್ಮ್ ಸಂಸ್ಥೆ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಭಾರತೀಯ ಸಿನಿ ಕಾರ್ಮಿಕರ ಸಂಘ ಒತ್ತಾಯಿಸಿದೆ.
ಕಾಂತಾರ-2 ಸಿನಿಮಾ ಚಿತ್ರೀಕರಣದ ವೇಳೆಯಲ್ಲಿ ಕೊಲ್ಲೂರು ಬಳಿಯ ಸೌಪರ್ಣಿಕಾ ನದಿಗೆ ಸಿನಿಮಾ ತಂಡದವರೊಂದಿಗೆ ನದಿಗ ಈಜೋದಕ್ಕೆ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಕಪಿಲ್ ತೆರಳಿದ್ದರು. ಇಂತಹ ಅವರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದರು.
ಈ ಘಟನೆಯ ಸಂಬಂಧ ಅಖಿಲ ಭಾರತೀಯ ಸಿನಿ ಕಾರ್ಮಿಕರ ಸಂಘವು, ಇದೊಂದು ತೀವ್ರ ದುಖದ ಘಟನೆಯಾಗಿದೆ. 33 ವರ್ಷದ ಕಿರಿಯ ಕಲಾವಿದ ಕಪಿಲ್ ಸಾವಿಗೆ ಸಂಘವು ತೀವ್ರ ಸಂತಾಪ ಸೂಚಿಸುತ್ತದೆ. ಮೇ.6, 2025ರಂದು ನಡೆದಂತ ಈ ಘಟನೆ ಸಂಬಂಧ ಕೊಲ್ಲೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದಿದೆ.
ಜೂನಿಯರ್ ಆರ್ಟಿಸ್ಟ್ ಕಪಿಲ್ ಸಾವಿನ ಸಂಬಂಧ ನಿರ್ಮಾಪಕ ಹಾಗೂ ನಿರ್ಮಾಣ ಸಂಸ್ಥೆಯು ದಾರಿ ತಪ್ಪಿಸುವಂತ ಮಾಹಿತಿ ಒದಗಿಸುತ್ತಿದೆ. ಈ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸೋ ಸಂಬಂಧ ನಟ ರಿಷಬ್ ಶೆಟ್ಟಿ, ನಿರ್ಮಾಣ ಸಂಸ್ಥೆಯಾದಂತ ಹೊಂಬಾಳೆ ಫಿಲ್ಮಂ ಸಂಸ್ಥೆಯ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸಂಘ ಆಗ್ರಹಿಸಿದೆ. ಹೀಗಾಗಿ ನಟ ರಿಷಬ್ ಶೆಟ್ಟಿಗೆ ಮತ್ತೊಂದು ಸಂಕಷ್ಟ ಎದುರಾದಂತೆ ಆಗಿದೆ.
ಸಾಗರದ ಜನರೇ ಎಚ್ಚರ.! ಹೀಗೂ ಮೋಸ ಮಾಡ್ತಾರೆ ವಂಚಕರು, ಮೈಮರೆತ್ರೆ ಆಭರಣ ಕಳ್ಳರ ಪಾಲು