ಬೆಂಗಳೂರು: ಪತ್ರಕರ್ತರಿಗೆ ಈ ಹಿಂದೆ ರೈಲ್ವೆ ಇಲಾಖೆಯಿಂದ ರಿಯಾಯಿತಿ ದರ ಪಾಸ್ ವಿತರಣೆ ಮಾಡಲಾಗಿತ್ತು. ಆದರೇ ಈ ಪಾಸ್ ಸ್ಥಗಿತಗೊಳಿಸಲಾಗಿತ್ತು. ಇಂತಹ ರೈಲ್ವೆ ರಿಯಾಯಿತಿ ಪಾಸ್ ಮುಂದುವರೆಸುವಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಕೆಯುಡಬ್ಲೂಜೆ ಅಧ್ಯಕ್ಷ ಶಿವಾನಂದ ತಗಡೂರು ಭೇಟಿಯಾಗಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ಕೇಂದ್ರದ ರೈಲ್ವೆ & ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಪತ್ರಕರ್ತರಿಗೆ ಮೊದಲಿದ್ದಂತೆ ರೈಲ್ವೆ ರಿಯಾಯಿತಿ ಪಾಸ್ ಮುಂದುವರಿಸಲು ಮನವಿ ಮಾಡಲಾಯಿತು ಎಂದಿದೆ.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರ ಕುರಿತು ಹೊರತಂದಿರುವ ಅಮೃತ ಬೀಜ ಪುಸ್ತಕವನ್ನು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸಚಿವರಿಗೆ ನೀಡಿದರು ಎಂದು ಹೇಳಿದೆ.
ಕೇಂದ್ರದ ರೈಲ್ವೆ&ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಪತ್ರಕರ್ತರಿಗೆ ಮೊದಲಿದ್ದಂತೆ ರೈಲ್ವೆ ರಿಯಾಯಿತಿ ಪಾಸ್ ಮುಂದುವರಿಸಲು ಮನವಿ ಮಾಡಲಾಯಿತು.ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರ ಕುರಿತು ಹೊರತಂದಿರುವ ಅಮೃತಬೀಜ ಪುಸ್ತಕವನ್ನು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸಚಿವರಿಗೆ ನೀಡಿದರು. @CMofKarnataka pic.twitter.com/cB26ovvOHv
— Karnataka Union of Working Journalists (R) (@KUWJ_R) August 29, 2025
ಅಭಿಮಾನ್ ಸ್ಟುಡಿಯೋ ಭೂಮಿ ಮರಳಿ ಪಡೆಯುವ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದೇನು ಗೊತ್ತಾ?
ಕಾಂಗ್ರೆಸ್‌ನಿಂದ ಮತಗಳ್ಳತನ ಆಗಿದೆ ಎಂದ ಸಿಎಂ ಸಿದ್ದರಾಮಯ್ಯ, ಜನರಿಗೆ ಉತ್ತರ ನೀಡಲಿ: ಆರ್.ಅಶೋಕ್