ಶಿವಮೊಗ್ಗ: ನಿವೃತ್ತಿಯ ಬಳಿಕ ಹಲವಾರು ಪತ್ರಕರ್ತರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಅವರೆಲ್ಲರಿಗೂ ಪಿಂಚಣಿ ನಿಯಮ ಸಡಿಲಗೊಂಡರೇ ಪಿಂಚಣಿ ದೊರೆಯುವ ಕೆಲಸ ಆಗಲಿದೆ. ಆ ನಿಟ್ಟಿನಲ್ಲಿ ಸರ್ಕಾರ, ಕೆಯುಡಬ್ಲೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರ ಕಾರ್ಯಪ್ರವೃತ್ತರಾಗಲಿ ಎಂಬುದಾಗಿ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಅಭಿಪ್ರಾಯ ಪಟ್ಟರು.
ಇಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು.
ಪತ್ರಕರ್ತರು ಕೆಲಸದ ಕಡೆಗೆ ಗಮನ ಕೊಟ್ಟು ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ. ಇಂದು ಹಿರಿಯ ಪತ್ರಕರ್ತರ ದೊಡ್ಡ ಬೊಮ್ಮಯ್ಯ ಅವರನ್ನು ಕಳೆದುಕೊಳ್ಳುವಂತಾಗಿದೆ ಎಂಬುದಾಗಿ ಸಂತಾಪ ನುಡಿಗಳನ್ನಾಡಿದರು. ಪತ್ರಕರ್ತರ ಕೆಲಸದ ಜೊತೆಗೆ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ವ್ಯಾಯಾಮದಂತಹ ದಿನ ಚರಿಗಳನ್ನು ರೂಢಿಸಿಕೊಳ್ಳಬೇಕು. ಆರೋಗ್ಯದ ಕಡೆ ಗಮನ ಕೊಡಿ. ಕುಟುಂಬದ ಜೊತೆಗೆ ಸಮಯ ನೀಡಿ ಎಂದು ಸಲಹೆ ಮಾಡಿದರು.
ಕೆಯುಡಬ್ಲೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅಂತೂ ಸಂಕಷ್ಟದಲ್ಲಿ ಇದ್ದಂತಹ ಪತ್ರಕರ್ತರಿಗೆ ನೆರವಾದರು ಎಂಬುದಾಗಿ ಅವರ ಕಾರ್ಯವನ್ನು ಶ್ಲಾಘಿಸಿದರು.
ರಾಜ್ಯ ಸರ್ಕಾರ ರೂಪಿಸಿರುವ ಪತ್ರಕರ್ತರ ಪಿಂಚಣಿ ನಿಯಮಗಳು ಕಠಿಣವಾಗಿವೆ. ಅವುಗಳನ್ನು ಸರಳಗೊಳಿಸುವ ಕೆಲಸ ಆಗಬೇಕು. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ಶಿವಾನಂದ ತಗಡೂರ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಬದಲಾವಣೆ ಮಾಡುವ ಕೆಲಸ ಆಗಬೇಕು. ಇದರಿಂದ ಸಂಕಷ್ಟದಲ್ಲಿ ಇರವಂತ ಸಾಕಷ್ಟು ನಿವೃತ್ತ ಪತ್ರಕರ್ತರಿಗೆ ಸಹಾಯ ಆದಂತೆ ಆಗಲಿದೆ ಎಂದರು.
ಮಾಹಿತಿ ಹಕ್ಕನ್ನು ಸಾರ್ವಜನಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಎರಡನೇ ಮೇಲ್ಮನವಿ ಅರ್ಜಿಯನ್ನು ಸಲ್ಲಿಸೋದನ್ನೇ ಮರೆತು ಬಿಡುತ್ತಿದ್ದಾರೆ. ಆದರೆ ಆ ಕೆಲಸ ಮಾಡಬೇಡಿ. ಮೊದಲ ಅರ್ಜಿ ಸಲ್ಲಿಸಿದ ಬಳಿಕ ಎರಡನೇ ಅರ್ಜಿಯನ್ನು ತಪ್ಪದೇ ಸಲ್ಲಿಸುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಹಾಗೂ ರಾಜಶೇಖರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು…








