ಬೆಂಗಳೂರು: ಜೋಶಿಯವರೇ, ಮುನಿರತ್ನರನ್ನು ಬಂಧಿಸದೆ ಕೈಗೆ ಲಾಲಿಪಾಪ್ ಕೊಟ್ಟು ಮುದ್ದಾಡಬೇಕಿತ್ತೇ? ಮುನಿರತ್ನ ಪರಾರಿಯಾಗಲು ಅವಕಾಶ ಮಾಡಿಕೊಡಬೇಕಿತ್ತೆ? ಮುನಿರತ್ನ ಆಡಿದ ಮಾತುಗಳಿಗೆ ಬಿಜೆಪಿಯ ಸಹಮತವಿದೆಯೇ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ದಲಿತರ, ಒಕ್ಕಲಿಗರ ಹಾಗೂ ಮಹಿಳೆಯರ ಘನತೆಗೆ ಚ್ಯುತಿ ತರುವಂತಹ ಅನಾಗರಿಕ ಮಾತುಗಳನ್ನಾಡಿದ ಬಿಜೆಪಿ ಶಾಸಕ ಮುನಿರತ್ನರನ್ನು ಬಂಧಿಸಿದ್ದು ಪ್ರಹ್ಲಾದ್ ಜೋಶಿ ಅವರಿಗೆ ತುಂಬಾ ಸಂಕಟ ತಂದಿದೆ ಪಾಪ ಎಂದಿದೆ.
ಜೋಶಿಯವರೇ, ಮುನಿರತ್ನರನ್ನು ಬಂಧಿಸದೆ ಕೈಗೆ ಲಾಲಿಪಾಪ್ ಕೊಟ್ಟು ಮುದ್ದಾಡಬೇಕಿತ್ತೇ? ಮುನಿರತ್ನ ಪರಾರಿಯಾಗಲು ಅವಕಾಶ ಮಾಡಿಕೊಡಬೇಕಿತ್ತೆ? ಮುನಿರತ್ನ ಆಡಿದ ಮಾತುಗಳಿಗೆ ಬಿಜೆಪಿಯ ಸಹಮತವಿದೆಯೇ? ಸಂಘದ ಜೋಶಿಯವರಿಗೆ ದಲಿತರಿಗೆ, ಮಹಿಳೆಯರಿಗೆ ಮಾಡುವ ನಿಂದನೆಗಳು ಖುಷಿ ಕೊಡುತ್ತವೆಯೇ? ಮನುಸ್ಮೃತಿಯ ಅಜೆಂಡಾವನ್ನು ಪಾಲಿಸಿರುವುದಕ್ಕೆ ಹೆಮ್ಮೆ ಇದೆಯೇ? ಎಂದು ಕೇಳಿದೆ.
ಅಂಬೇಡ್ಕರ್ ಫೋಟೋ ತೆಗೆಸಿ ಶೋಷಿತರ ಬಗೆಗಿನ ಅಸಹನೆಯನ್ನು ಕಾರಿಕೊಂಡಿದ್ದ ಜೋಶಿಯವರಿಗೆ ದಲಿತ ನಿಂದಕ ಮುನಿರತ್ನರನ್ನು ಬಂಧಿಸಿದ್ದು ನೋವು ತಂದಿದ್ದರಲ್ಲಿ ಆಶ್ಚರ್ಯವಿಲ್ಲ ಎಂದು ತಿಳಿಸಿದೆ.
ದಲಿತರ, ಒಕ್ಕಲಿಗರ ಹಾಗೂ ಮಹಿಳೆಯರ ಘನತೆಗೆ ಚ್ಯುತಿ ತರುವಂತಹ ಅನಾಗರಿಕ ಮಾತುಗಳನ್ನಾಡಿದ ಬಿಜೆಪಿ ಶಾಸಕ ಮುನಿರತ್ನರನ್ನು ಬಂಧಿಸಿದ್ದು @JoshiPralhad ಅವರಿಗೆ ತುಂಬಾ ಸಂಕಟ ತಂದಿದೆ ಪಾಪ.
ಜೋಶಿಯವರೇ,
ಮುನಿರತ್ನರನ್ನು ಬಂಧಿಸದೆ ಕೈಗೆ ಲಾಲಿಪಾಪ್ ಕೊಟ್ಟು ಮುದ್ದಾಡಬೇಕಿತ್ತೇ?ಮುನಿರತ್ನ ಪರಾರಿಯಾಗಲು ಅವಕಾಶ ಮಾಡಿಕೊಡಬೇಕಿತ್ತೆ?
ಮುನಿರತ್ನ…
— Karnataka Congress (@INCKarnataka) September 15, 2024
ನಾಳೆಯಿಂದ ‘UPI ವಹಿವಾಟು ಮಿತಿ’ ಬದಲಾವಣೆ: ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ | UPI Transaction
BIG UPDATE: ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗ ಮುಟ್ಟಿ ದೌರ್ಜನ್ಯವೆಸಗಿದ್ದ ಶಿಕ್ಷಕ ಅರೆಸ್ಟ್: ಸೇವೆಯಿಂದ ಅಮಾನತು