ಜೋಧ್‌ಪುರ: ರಾಜಸ್ಥಾನದ ಜೋಧ್‌ಪುರ ನಗರದ ರತನಾಡ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯೊಂದರಲ್ಲಿ ಹಗಲು ಹೊತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ತಂದೆಯನ್ನು ಮರದ ಕೋಲಿನಿಂದ ನಿರ್ದಯವಾಗಿ ಥಳಿಸಿದ ಆಘಾತಕಾರಿ ವಿಡಿಯೋ ವೈರಲ್‌ ಆಗುತ್ತಿದೆ.

ವೈರಲ್‌ ಆಗಿರುವ ವಿಡಿಯೋದಲ್ಲಿ, ವ್ಯಕ್ತಿ ಮತ್ತು ಅವನ ತಂದೆ ಯಾವುದೋ ವಿಷಯಕ್ಕೆ ಪರಸ್ಪರ ಜಗಳವಾಡುತ್ತಿರುವುದನ್ನು ಕಾಣಬಹುದು. ಸ್ವಲ್ಪ ಸಮಯದ ನಂತರ, ಬೀದಿಯಲ್ಲಿ ಬಿದ್ದಿರುವ ಮರದ ಪೀಸೊಂದರಿಂದ ತನ್ನ ತಂದೆಗೆ ಕ್ರೂರವಾಗಿ ಹೊಡೆಯಲು ಪ್ರಾರಂಭಿಸುತ್ತಾನೆ. ನಂತ್ರ, ನಿರಾಶೆಗೊಂಡು ನಂತರ ಮರದ ಹಲಗೆಯನ್ನು ಎಸೆಯುತ್ತಾನೆ.

ತಂದೆ-ಮಗನ ನಡುವೆ ವಾಗ್ವಾದ ಮುಂದುವರೆದಂತೆ, ಕೆಲವು ನೆರೆಹೊರೆಯವರು ದೂರದಿಂದಲೇ ಅವರನ್ನು ತಡೆಯಲು ಪ್ರಯತ್ನಿಸುತ್ತಾರೆ. ಆದರೂ ಅವನು ಅವರ ಮಾತನ್ನು ಕೇಳದೆ ಮತ್ತೆ ತನ್ನ ತಂದೆಯ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸುತ್ತಾನೆ. ಅವರಿಬ್ಬರ ನಡುವಿನ ವಾಗ್ವಾದ ಮುಂದುವರೆದಾಗ ಅವನು ತನ್ನ ತಂದೆಗೆ ಕಪಾಳಮೋಕ್ಷ ಮಾಡಿ, ಹೊಡೆಯುವುದನ್ನು ಕಾಣಬಹುದು.

ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿ ತನ್ನ ತಂದೆಯ ಮೇಲೆ ಹಲ್ಲೆ ನಡೆಸಿರುವುದು ಇದೇ ಮೊದಲಲ್ಲ. ಮನೆಯ ವಿಷಯಕ್ಕೆ ಸಂಬಂಧಿಸಿದಂತೆ ಮಗನು ತನ್ನ ತಂದೆಯೊಂದಿಗೆ ಆಗಾಗ್ಗೆ ಜಗಳವಾಡುತ್ತಾನೆ. ಘಟನೆ ನಡೆಯುವ ಒಂದು ದಿನದ ಮೊದಲು ಆ ವ್ಯಕ್ತಿ ತನ್ನ ತಂದೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬ್ರಿಟನ್‌ ರಾಣಿ ʻಎಲಿಜಬೆತ್ IIʼ ಅಂತ್ಯಕ್ರಿಯೆಯಲ್ಲಿ ಆಹ್ವಾನಿಸದ ಅತಿಥಿಯೊಬ್ಬರು ಭಾಗಿ… ಯಾರವರು?

Good News: ಸರ್ಕಾರಿ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ

ಶಿಕ್ಷಕರ ಪರಸ್ಪರ ವರ್ಗಾವಣೆ ಇನ್ಮುಂದೆ ಸುಲಭ: ವರ್ಗಾವಣೆ ಕಾಯಿದೆಗೆ ತಿದ್ದುಪಡಿ ಮಾಡಲು ರಾಜ್ಯ ಸಂಪುಟ ತೀರ್ಮಾನ

Share.
Exit mobile version