ಬೆಂಗಳೂರು: ಶೀಘ್ರದಲ್ಲಿ ವಿವಿಧ ಇಲಾಖೆಗಳ 1900 ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುವುದು ಅಂತ ಸ್ಟೇಟಸ್ ರಿಪೋರ್ಟ್ ಅನ್ನು ಕೆ.ಪಿ.ಎಸ್.ಸಿ. ಬಿಡುಗಡೆ ಮಾಡಿದೆ.
ಇದರಲ್ಲಿ ಪಶು ಸಂಗೋಪನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯಲ್ಲಿ 14 ಪಶು ವೈದ್ಯಾಧಿಕಾರಿಗಳ ಬ್ಯಾಕ್ ಲಾಗ್ ಹುದ್ದೆಗಳು, ಬಿಬಿಎಂಪಿಯ ಕಿರಿಯ ಇಂಜಿನಿಯರ್, ರಿಕವರಿ ಆಫೀಸರ್ ಡಿ. ದೇವರಾಜ ಅರಸು, , ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ಜಿಲ್ಲಾ ವ್ಯವಸ್ಥಾಪಕರ ಹುದ್ದೆಗಳು, ಸ್ಟಾಫ್ ನರ್ಸ್ ಗಳು, ಪೌರಾಡಳಿತ ಇಲಾಖೆಯಲ್ಲಿ ಕಿರಿಯ ಆರೋಗ್ಯ ನಿರೀಕ್ಷಕರು ಕರ ವಸೂಲಿಗಾರರ ಹುದ್ದೆಗಳು ಕೂಡ ಸೇರಿವೆ. ಸದ್ಯ ಈ ಹುದ್ದೆಗಳ ನೇಮಕಾತಿಗೆ ಡಿಸೆಂಬರ್ ನಲ್ಲಿ ಕೆ.ಪಿ.ಎಸ್.ಸಿ. ಆರ್ಥೀಕ ಇಲಾಖೆಯ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪರಿಶೀಲನೆ ನಡೆಸಿ ಅಧಿಸೂಚನೆ ಹೊರಡಿಸಲಾಗುವುದು ಅಂತ ತಿಳಿದು ಬಂದಿದೆ.