ಕೊಪ್ಪಳ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕೊಪ್ಪಳದಲ್ಲಿ ಮಾರ್ಚ್ 15 ರಂದು ರಂದು ವಾಕ್ ಇನ್ ಇಂಟರ್‌ವ್ಯೂವ್ ಆಯೋಜಿಸಲಾಗಿದೆ. ವಾಕ್ ಇನ್ ಇಂಟರ್‌ವ್ಯೂವ್‌ನಲ್ಲಿ ಖಾಸಗಿ ಸಂಸ್ಥೆಗಳು ಭಾಗವಹಿಸಲಿದ್ದು, ತಮ್ಮಲ್ಲಿರುವ ಖಾಲಿ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ.

ಅಂದು ಬೆಳಿಗ್ಗೆ 10 ರಿಂದ 1:30 ಗಂಟೆಯವರೆಗೆ ವಾಕ್ ಇನ್ ಇಂಟರ್‌ವ್ಯೂವ್ ನಡೆಯಲಿದ್ದು, ಎಲ್ಲರಿಗೂ ಉಚಿತ ಪ್ರವೇಶವಿರುತ್ತದೆ. 18 ರಿಂದ 30 ವರ್ಷ ವಯೋಮಾನದ ಪಿಯುಸಿ/ತತ್ಸಮಾನ, ಐಟಿಐ,  ಯಾವುದೇ ಪದವಿ ಅಭ್ಯರ್ಥಿಗಳಿಗೆ ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಹ ವಿದ್ಯಾರ್ಹತೆ ಹೊಂದಿದ ಯುವಕ ಮತ್ತು ಯುವತಿಯರು, ನಿರುದ್ಯೋಗಿ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು ಮತ್ತು ಆಧಾರ ಕಾರ್ಡಿನ ಪ್ರತಿ, ಬಯೋಡಾಟಾ ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ವಾಕ್ ಇನ್ ಇಂಟರ್‌ವ್ಯೂವ್‌ನಲ್ಲಿ ಭಾಗವಹಿಸಿ ಉದ್ಯೋಗದ ನೆರವು ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ, ದೂ.ಸಂ: 08539-220859 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share.
Exit mobile version