ಬೆಂಗಳೂರು : ಭಾರತದ ಮೂರನೇ ಅತಿ ದೊಡ್ಡ ಗ್ರಾಮೀಣ ಬ್ಯಾಂಕ್ ಆದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಖಾಲಿ ಇರುವ 1425 ಹುದ್ದೆಗಳಿಗಾಗಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 21 ಕೊನೆಯ ದಿನವಾಗಿದೆ.
ಭಾರತದ 3ನೇ ಅತಿ ದೊಡ್ಡ ಗ್ರಾಮೀಣ ಬ್ಯಾಂಕ್ ಆದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಖಾಲಿ ಇರುವ ಈ ಕೆಳಕಂಡ 1425 ಹುದ್ದೆಗಳಿಗೆ ಅರ್ಹ ಪದವೀಧರರಿಂದ ಆನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಪದವೀಧರರು ಸಪ್ಟೆಂಬರ್ 21, 2025 ರವರೆಗೆ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ಸಂಖ್ಯೆ
ಆಫೀಸ್ ಅಸಿಸ್ಟಂಟ್ (ಕ್ಲರ್ಕ್ )- 800
ಸಹಾಯಕ ವ್ಯವಸ್ಥಾಪಕ (ಆಫೀಸರ್ ಸ್ಕೆಲ್ – 1)- 500
ವ್ಯವಸ್ಥಾಪಕ (ಆಫೀಸರ್ ಸ್ಕೆಲ್ – 2)- 125
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21.09.2025
ನೇಮಕಾತಿ ಪ್ರಕ್ರಿಯೆ ಹಾಗೂ ಹುದ್ದೆಯ ಹೆಚ್ಚಿನ ಮಾಹಿತಿಯನ್ನು ಪಡೆಯಲು www.ibps.in ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.









