ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, 1650 ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಈ ಕಛೇರಿಯ ಉಲ್ಲೇಖಿತ ಪತ್ರವನ್ನು ಗಮನಿಸಲು ಕೋರಲಾಗಿದೆ. ಸದರಿ ಪತ್ರದಲ್ಲಿ 1650 ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ (275 ಕಲ್ಯಾಣ ಕರ್ನಾಟಕ ಮತ್ತು 1375 ಕಲ್ಯಾಣ ಕರ್ನಾಟಕೇತರ ಹುದ್ದೆಗಳು) ಸಂಬಂಧಪಟ್ಟ ಘಟಕಗಳಿಂದ ವರ್ಗಿಕರಣವನ್ನು ಪಡೆದು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಕೋರಲಾಗಿತ್ತು ಹಾಗೂ ಘಟಕವಾರು ಹುದ್ದೆಗಳ ಹಂಚಿಕೆಯ ವಿವರವನ್ನು ಅನುಬಂಧ ಆ ರಲ್ಲಿ ಒದಗಿಸಲಾಗಿತ್ತು.
ಸದರಿ 1650 ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು ಆಡಳಿತಾತ್ಮಕ ಕಾರಣಗಳಿಂದ ಮರು ಹಂಚಿಕೆಮಾಡಲಾಗಿದ್ದು, ಘಟಕವಾರು ಹುದ್ದೆಗಳ ಮರು ಹಂಚಿಕೆಯ ವಿವರವನ್ನು ಅನುಬಂಧ-ಅರಲ್ಲಿ ಲಗತ್ತಿಸಿದೆ. ಹಾಗೂ ಸದರಿ ಹುದ್ದೆಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಘಟಕಗಳಿಂದ ವರ್ಗಿಕರಣವನ್ನು ಪಡೆದು ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳವಂತೆ ಕೋರಲಾಗಿದೆ.