ಬೆಂಗಳೂರು : ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಕಿರಿಯ ಸಹಾಯಕರ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಡಿಸೆಂಬರ್ 4 ರ ನಾಳೆಯಿಂದ ಅರ್ಜಿ ಸಲ್ಲಿಕೆ ಅರಂಭವಾಗಲಿದೆ.
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ (ಅಧಿಕಾರಿಗಳು ಮತ್ತು ನೌಕರರ ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 2021ರ ರೀತ್ಯಾ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ವಿವಿಧ ವೃಂದಗಳ ಹುದ್ದೆಗಳಿಗೆಅಧಿಸೂಚನೆಯನ್ನು ದಿನಾಂಕ:12.03.2024ರಂದು ಹೊರಡಿಸಲಾಗಿದ್ದು, ಸದರಿ ಅಧಿಸೂಚನೆಯಲ್ಲಿನ ಕ್ರಮ ಸಂಖ್ಯೆ:06ರಲ್ಲಿನ ಕಿರಿಯ ಸಹಾಯಕರ ಉಳಿಕೆ ವೃಂದದ ಹುದ್ದೆಗಳ ಕುರಿತಂತೆ ಈ ಕೆಳಕಂಡಂತೆ ಓದಿಕೊಳ್ಳತಕ್ಕದ್ದು.
ಹುದ್ದೆಯ ಹೆಸರು: ಕಿರಿಯ ಸಹಾಯಕರು-07 ಹುದ್ದೆಗಳು
ಹುದ್ದೆಗಳ ಸಂಖ್ಯೆ: ಉಳಿಕೆ ಮೂಲ ವೃಂದ 06 ಹುದ್ದೆಗಳು, ಕಲ್ಯಾಣ ಕರ್ನಾಟಕ 01 ಹುದ್ದೆ
ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲು ಪರಿಷ್ಕೃತ ದಿನಾಂಕವು ಈ ಕೆಳಕಂಡಂತಿರುತ್ತದೆ.
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ
04.12.2024.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
03.01.2025.
ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ
04.01.2025.
ವಯೋಮಿತಿ
ದಿನಾಂಕ:12.03.2024ರ ಅಧಿಸೂಚನೆಯ ಕ್ರಮ ಸಂಖ್ಯೆ:3(1)ರಲ್ಲಿನ ವಯೋಮಿತಿ ಸಡಿಲಿಕೆ ಕೋಷ್ಠಕದಲ್ಲಿ ನಮೂದಿಸಿರುವ “ಗರಿಷ್ಠ ವಯೋಮಿತಿಗೆ 02 ವರ್ಷಗಳ ಸಡಿಲಿಕೆ ನೀಡಲಾಗಿದೆ” ಎಂಬುದರ ಬದಲಾಗಿ “03 ವರ್ಷಗಳ ಸಡಿಲಿಕೆ ನೀಡಲಾಗಿದೆ” ಎಂಬುದಾಗಿ ಓದಿಕೊಳ್ಳತಕ್ಕದ್ದು.
ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ದಿನಾಂಕ:12.03.2024ರ ಅಧಿಸೂಚನೆಯಲ್ಲಿ ನಿಗಧಿಪಡಿಸಿರುವ ಎಲ್ಲಾ ಅರ್ಹತೆ, ಸೂಚನೆ, ನಿಬಂಧನೆ ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂಬುದನ್ನು ಅಭ್ಯರ್ಥಿಗಳು ಗಮನಿಸಬಹುದಾಗಿದೆ.