ಶಿವಮೊಗ್ಗ : ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ವೈದ್ಯರು -5, ಆಡಿಯೋಮೆಟ್ರೀಕ್ ಅಸಿಸ್ಟೆಂಟ್-1, ತಾಲ್ಲೂಕು ಆಶಾ ಮೇಲ್ವಿಚಾರಕರು -1, ಡಿಇಐಸಿ ಮ್ಯಾನೆಜರ್-1 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ದಿ: 19/03/2024ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರ ವರೆಗೆ ಅರ್ಜಿಯ ನಮೂನೆಯನ್ನು ಎನ್.ಹೆಚ್.ಎಂ ವಿಭಾಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣ, ಬಿಹೆಚ್ ರಸ್ತೆ ಶಿವಮೊಗ್ಗ ಇಲ್ಲಿ ಪಡೆದುಕೊಳ್ಳಬೇಕು. ಅದೇ ದಿನ ಈ ಎಲ್ಲ ಹುದ್ದೆಯ ಮೂಲ ದಾಖಲಾತಿಗಳ ಪರಿಶೀಲನೆಯನ್ನು ಸಂಜೆ 5.30ರ ವರೆಗೆ ನಡೆಸಲಾಗುವುದು.
ವೈದ್ಯರು 70 ವರ್ಷಕ್ಕಿಂತ ಕಡಿಮೆ ಇದ್ದು ದೈಹಿಕವಾಗಿ ಎಲ್ಲಾ ಕರ್ತವ್ಯಗಳನ್ನು ನಿಭಾಯಿಸಲು ಅರ್ಹರಿರಬೇಕು ಹಾಗೂ ದೈಹಿಕ ಪ್ರಮಾಣ ಪತ್ರ ನೀಡುವುದು ಮತ್ತು ಕೆ.ಎಂ.ಸಿಯ ನೋಂದಣೆಯನ್ನು ಹೊಂದಿರತಕ್ಕದ್ದು. ಸರ್ಕಾರದ ನಿಯಮಾವಳಿ ಎನ್.ಹೆಚ್.ಎಂ ಮಾರ್ಗಸೂಚಿಯಂತೆ ಹುದ್ದೆವಾರು ವಯೋಮಿತಿ ಪರಿಗಣಿಸಲಾಗುವುದು. ಹುದ್ದೆಗಳಿಗೆ ನಮೂದಿಸಿರುವ ವೇತನದಲ್ಲಿ ಭವಿಷ್ಯ ನಿಧಿ/ವೃತ್ತಿ ತೆರಿಗೆ ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿರುವ ಪ್ರಕಾರ ತೆರಿಗೆಯನ್ನು ಇತ್ಯಾದಿ ಕಟಾವಣೆ ಮಾಡಲಾಗುವುದು. ಎನ್.ಹೆಚ್.ಎಂ ಮಾರ್ಗಸೂಚಿಯಂತೆ ನೇಮಕಾತಿಯು ಮೆರಿಟ್ ಕಂ ರೋಸ್ಟ್‍ರ್ ಆಧಾರದ ಮೇಲೆ ಮಾಡಲು ಕ್ರಮ ಕೈಗೊಳ್ಳಲಾಗುವುದು.
ಅಭ್ಯರ್ಥಿಗಳು ಸಂಬಂಧಪಟ್ಟ ಹುದ್ದೆಯ ಸ್ವಯಂ ದೃಢೀಕರಿಸಿದ ದಾಖಲೆಗಳ ನಕಲು ಪ್ರತಿ, ಇತ್ತೀಚಿನ ಭಾವಚಿತ್ರ, ಅನುಭವ ಪ್ರಮಾಣ ಪತ್ರ, ಗುರುತಿನ ಚೀಟಿ,ಜಾತಿ ಪ್ರಮಾಣ ಪತ್ರ, ಖಾಯಂ ವಿಳಾಸ ಸ್ವವಿವರದೊಂದಿಗೆ ಹಾಜರಾಗುವುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ : 08182-200337 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಸಂಘದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ತಿಳಿಸಿದ್ದಾರೆ.
BREAKING : ರಾಜಸ್ಥಾನದಲ್ಲಿ ವಾಯುಪಡೆಯ ‘ತೇಜಸ್ ವಿಮಾನ’ ಪತನ, ‘ಪೈಲಟ್’ ಸುರಕ್ಷಿತ
‘ನಮ್ಮ ಮೆಟ್ರೋ’ದಲ್ಲಿ ಬೆಚ್ಚಿ ಬೀಳಿಸೋ ಘಟನೆ: ‘ಅಪರಿಚಿತ ವ್ಯಕ್ತಿ’ ಓಡಾಟ, ಕೆಲಕಾಲ ‘ಸಂಚಾರ ಸ್ಥಗಿತ’