ಬೆಂಗಳೂರು : ಪ್ರೆಸಿಡೆನ್ಸಿ ಫೌಂಡೇಶನ್ ಫೆಬ್ರವರಿ 15 ರ ನಾಳೆ ಕರ್ನಾಟಕದ ಯುವಕರಿಗೆ, ವಿಶೇಷವಾಗಿ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದವರಿಗೆ ಸಹಾಯ ಮಾಡಲು ಉದ್ಯೋಗ ಮೇಳವನ್ನು ಆಯೋಜಿಸಿದೆ.
ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಮತ್ತು ಕರ್ನಾಟಕ ಸರ್ಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆ ಸಹಯೋಗದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಆಸಕ್ತರು, ಎಸ್ಎಸ್ಎಲ್ಸಿ, ದ್ವಿತಿಯ ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರು ಪಾಲ್ಗೊಳ್ಳಬಹುದಾಗಿದೆ. ಹೊಸಬರು ಮತ್ತು ಅನುಭವಸ್ಥರೂ ಕೂಡ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಮೇಳಕ್ಕೆ ಬರುವಾಗ 10 ರೆಸ್ಯೂಮ್ ಗಳು ತರುವಂತೆ ಸೂಚನೆ ನೀಡಲಾಗಿದೆ.
ನಗರದ ‘ಖುದ್ದೂಸ್ ಸಾಹಿಬ್ಸ್ ಈದ್ಗಾ ಮೈದಾನ, ಮಿಲ್ಲರ್ಸ್ ರಸ್ತೆ, ಕಂಟೋನ್ಮೆಂಟ್ ರೈಲ್ವೆ ಕಾರ್ಟ್ರ್ಸ್, ಬೆನ್ಸನ್ ಟೌನ್, ಬೆಂಗಳೂರು- 560046