ಬೆಂಗಳೂರು : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಕಲಬುರಗಿಯಲ್ಲಿ ಏಪ್ರಿಲ್16 ರದು ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ನಿರುದ್ಯೋಗಿ ಯುವಕ ಮತ್ತು ಯುವತಿಯರು ಭಾಗವಹಿಸಬಹುದು.
ಉದ್ಯೋಗ ಮೇಳದಲ್ಲಿ 250 ಕ್ಕೂ ಹೆಚ್ಚಿನ ಪ್ರತಿಷ್ಠಿತ ಕಂಪನಿಗಳು ಪಾಲ್ಗೊಳ್ಳಲಿದ್ದು, ಯಾವುದೇ ವಿದ್ಯಾರ್ಹತೆ ಹೊಂದಿರುವ ನಿರುದ್ಯೋಗಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಉದ್ಯೋಕಾಂಕ್ಷಿಗಳು ನೋಂದಣಿಗಾಗಿ ಇಲಾಖೆಯಿಂದ ಸೃಜಿಸಲಾಗಿರುವ ಲಿಂಕ್: https://udyogamela.skillconnect.kaushalkar.com/ ಗೆ ಭೇಟಿ ನೋಂದಾಯಿಸಿಕೊಳ್ಳಬಹುದಾಗಿದೆ ಅಥವಾ ಕ್ಯೂಆರ್ ಕೋಡ್ ನ್ನು ಸ್ಕ್ಯಾನ್ ಮಾಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಬೆಂಗಳೂರು ಈ ಕಚೇರಿ ಅಥವಾ ಸಹಾಯವಾಣಿ ಸಂಖ್ಯೆ: 08022075030 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶ್ಯಲಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು https://skillconnect.kaushalkar.com ನಲ್ಲಿ ನೋಂದಾಯಿಸಿಕೊಂಡು ಈ ಉದ್ಯೋಗಮೇಳದಲ್ಲಿ ಭಾಗಿಯಾಗಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ಸಹಾಯವಾಣಿ ಸಂಖ್ಯೆ 08022075030 ಗೆ ಕರೆ ಮಾಡಿ.
ಕಲಬುರ್ಗಿಯಲ್ಲಿ ಏಪ್ರಿಲ್ 16, 2025 ರಂದು ನಡೆಯಲಿರುವ ಪ್ರಾದೇಶಿಕ ಮಟ್ಟದ ಬೃಹತ್ ಉದ್ಯೋಗ ಮೇಳ ಯಶಸ್ವಿಯಾಗಿ ಆಯೋಜಿಸಲು, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಕಾಂತಾ ನಾಯಕ್ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರು ನಾಗರಾಜ ಎನ್.ಎಂ., ಕಾರ್ಯನಿರ್ವಾಹಕ ನಿರ್ದೇಶಕಿ ಶ್ರೀಮತಿ ಸುಮತಿ, ಸಹಾಯಕ ನಿರ್ದೇಶಕಿ ಶ್ರೀಮತಿ ಸುಧಾ ಹಾಗೂ ಇವೆಂಟ್ ಮ್ಯಾನೇಜ್ಮೆಂಟ್ ತಂಡದ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ತಂಡ ಚನ್ನಪಟ್ಟಣದಲ್ಲಿ ನಡೆದ ಉದ್ಯೋಗ ಮೇಳದ ಅನುಭವ ಮತ್ತು ಪ್ರಗತಿಯನ್ನು ಪ್ರಸ್ತುತಪಡಿಸಿದರು. ಇದರ ಜೊತೆಗೆ ಕಲಬುರಗಿಯಲ್ಲಿ ನಡೆಯಬೇಕಾದ ಉದ್ಯೋಗ ಮೇಳದ ತಯಾರಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಉದ್ಯೋಗ ನೀಡುವ ಸಂಸ್ಥೆಗಳ ಆಯ್ಕೆ, ಸ್ಥಳ, ಪಾರ್ಕಿಂಗ್, ಆಹಾರ ಮತ್ತು ಲಾಜಿಸ್ಟಿಕ್ ವ್ಯವಸ್ಥೆ.
ಹೆಚ್ಚಿನ ಕಂಪನಿಗಳನ್ನು ಆಕರ್ಷಿಸಲು ಬೃಹತ್ ಮಟ್ಟದ ಪ್ರಚಾರ, ಆನ್ಲೈನ್ ನೋಂದಣಿ ವ್ಯವಸ್ಥೆ ಮತ್ತು ಸಹಾಯ ಕೇಂದ್ರ ಮಾಹಿತಿ ನೀಡಲಾಯಿತು.
ಈ ಸಭೆಯ ನಿರ್ಧಾರಗಳ ಆಧಾರದ ಮೇಲೆ ಮುಂದಿನ ಸಿದ್ಧತೆಗಳನ್ನು ವೇಗವಾಗಿ ನಡೆಸಿ, ಕಲಬುರ್ಗಿ ಉದ್ಯೋಗ ಮೇಳ – 2025 ಅನ್ನು ಯಶಸ್ವಿಯಾಗಿ ಆಯೋಜಿಸಲುಸಂಬಂಧಪಟ್ಟ ಇಲಾಖೆಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಸೂಚಿಸಲಾಯಿತು.
"ಕಲಬುರಗಿಯಲ್ಲಿ ಬೃಹತ್ ಉದ್ಯೋಗಮೇಳ"
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಕಲಬುರಗಿಯಲ್ಲಿ ಏಪ್ರಿಲ್ ಮೊದಲನೇ ವಾರದಂದು ಬೃಹತ್ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ.
ಉದ್ಯೋಗ ಮೇಳದಲ್ಲಿ 250 ಕ್ಕೂ ಹೆಚ್ಚಿನ ಪ್ರತಿಷ್ಠಿತ ಕಂಪನಿಗಳು ಪಾಲ್ಗೊಳ್ಳಲಿದ್ದು, ಯಾವುದೇ ವಿದ್ಯಾರ್ಹತೆ ಇರುವ ನಿರುದ್ಯೋಗಿಗಳು ಈ ಉದ್ಯೋಗಮೇಳದಲ್ಲಿ ಭಾಗಿಯಾಗಬಹುದು. pic.twitter.com/pefdknYtjw— 𝐊.𝐒.𝐃.𝐂 – ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (@Skill_Karnataka) March 15, 2025