ನವದೆಹಲಿ : ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) 2026-27ನೇ ಸಾಲಿನ ಪ್ರೊಬೇಷನರಿ ಆಫೀಸರ್/ ಮ್ಯಾನೇಜ್ಮೆಂಟ್ ಟ್ರೈನಿ (PO/MT) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
IBPSನಲ್ಲಿ 5,208 ಪಿಒ/ಎಂಟಿ ಹುದ್ದೆಗಳಿವೆ. ಒಟ್ಟು ಹುದ್ದೆಗಳ ಸಂಖ್ಯೆ : 5,208 ಆಗಿವೆ.
ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 21.07.2025ಕ್ಕೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು.
ವಯೋಮಿತಿ : 01.07.2025ಕ್ಕೆ ಅನ್ವಯವಾಗುವಂತೆ 20 ರಿಂದ 30 ವರ್ಷ ವಯಸ್ಸಾಗಿರಬೇಕು. (02.07.1995 ಮತ್ತು 01.07.2005 ರ ನಡುವೆ ಜನಿಸಿದವರು ಅರ್ಹರು). ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ, ಇಎಸ್ಎಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಸಂಬಳ : ತಿಂಗಳಿಗೆ 48,480 ರಿಂದ 85,920 ರೂಪಾಯಿ (ಮೂಲ ವೇತನ) ಮತ್ತು ಇತರ ಭತ್ಯೆಗಳು.
ಆಯ್ಕೆ ಪ್ರಕ್ರಿಯೆ : ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ, ವ್ಯಕ್ತಿತ್ವ ಪರೀಕ್ಷೆ ಮತ್ತು ಸಂದರ್ಶನದ ಮೂಲಕ.
ಅರ್ಜಿ ಸಲ್ಲಿಸುವುದು ಹೇಗೆ?
» ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21.07.2025
» ಪ್ರಿಲಿಮಿನರಿ ಪರೀಕ್ಷೆ : ಆಗಸ್ಟ್ 2025.
» ಮುಖ್ಯ ಪರೀಕ್ಷೆ : ಅಕ್ಟೋಬರ್ 2025.
» ಸಂದರ್ಶನ : ಡಿಸೆಂಬರ್ 2025 ಜನವರಿ 2026
» ವೆಬ್ಸೈಟ್ : https://www.ibps.in
ಎಸ್ಎಸ್ಸಿ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 2025ನೇ ಸಾಲಿಗೆ ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಗ್ರೂಪ್-ಬಿ (ಗೆಜೆಟೆಡ್ ಅಲ್ಲದ, ಸಚಿವಾಲಯೇತರ) ಮತ್ತು ಜೂನಿಯರ್ ಎಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್) ಹುದ್ದೆಗಳಿಗೆ ಅರ್ಜಿಗಳನ್ನ ಆಹ್ವಾನಿಸಿದೆ.
ಒಟ್ಟು ಹುದ್ದೆಗಳ ಸಂಖ್ಯೆ : 1,340
ವಿದ್ಯಾರ್ಹತೆ: ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಆಟೋಮೊಬೈಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಅಥವಾ ಪದವಿ ಪಡೆದಿರಬೇಕು. ಕೆಲವು ಹುದ್ದೆಗಳಿಗೆ ಕೆಲಸದ ಅನುಭವ ಇರಬೇಕು. ವಯೋಮಿತಿ: 01.01.2026ಕ್ಕೆ ಅನ್ವಯವಾಗುವಂತೆ 30 ವರ್ಷ ಮೀರಿರಬಾರದು. ಸಿಪಿಡಬ್ಲ್ಯುಡಿಯ ಕೆಲವು ಹುದ್ದೆಗಳಿಗೆ ಅಭ್ಯರ್ಥಿಗಳು 32 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.
» ವೇತನ ಶ್ರೇಣಿ : 35,400 ರಿಂದ 1,12,400 ರೂ
» ಆಯ್ಕೆ ವಿಧಾನ : ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ.?
» ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 21/07/2025 ಕೊನೆಯ ದಿನವಾಗಿದೆ.
» ಅರ್ಜಿ ಪರಿಷ್ಕರಣೆ ದಿನಾಂಕಗಳು : 01.08.2025 ರಿಂದ 02.08.2025
» ಪೇಪರ್ -1 ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕಗಳು : 27.10.2025 ರಿಂದ 31.10.2025
» ಪೇಪರ್ -2 ಪರೀಕ್ಷೆ : ಜನವರಿ ಮತ್ತು ಫೆಬ್ರವರಿ 2026 ನಡುವೆ
» ವೆಬ್ ಸೈಟ್ : https://ssc.gov.in
ವಾಹನ ಸವಾರರೇ ಎಚ್ಚರ, ‘ಲೂಸ್ ಫಾಸ್ಟ್ ಟ್ಯಾಗ್’ ಕಪ್ಪುಪಟ್ಟಿಗೆ ಸೇರ್ಪಡೆ, ‘NHAI’ ಮಹತ್ವದ ಕ್ರಮ
NEET PG 2025 : ಜುಲೈ 21ಕ್ಕೆ ‘ನೀಟ್ ಪಿಜಿ -2025’ ಸಿಟಿ ಸ್ಲಿಪ್, ಜುಲೈ 31ರಂದು ‘ಅಡ್ಮಿಟ್ ಕಾರ್ಡ್’ ಬಿಡುಗಡೆ
ರಾಜ್ಯದ ‘ಕಟ್ಟಡ ಕಾರ್ಮಿಕ’ರಿಗೆ ಗುಡ್ ನ್ಯೂಸ್: ‘ಧನ ಸಹಾಯ, ಪರಿಹಾರ’ದ ಮೊತ್ತ ಹೆಚ್ಚಿಸಿ ಸರ್ಕಾರ ಆದೇಶ
ರಾಜ್ಯದ ‘ಕಟ್ಟಡ ಕಾರ್ಮಿಕ’ರಿಗೆ ಗುಡ್ ನ್ಯೂಸ್: ‘ಧನ ಸಹಾಯ, ಪರಿಹಾರ’ದ ಮೊತ್ತ ಹೆಚ್ಚಿಸಿ ಸರ್ಕಾರ ಆದೇಶ