ನವದೆಹಲಿ : ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ರೈಲ್ವೆ ನೇಮಕಾತಿ ಕೋಶ (RRC) ಈಶಾನ್ಯ ರೈಲ್ವೆ (NER) ಅಡಿಯಲ್ಲಿನ ಕಾರ್ಯಾಗಾರವು ಘಟಕಗಳಲ್ಲಿ 1104 ಆಕ್ಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ (RRC NER Apprentice Recruitment 2024). ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಪ್ರಾರಂಭವಾಗಿದೆ. 10ನೇ ತರಗತಿಯೊಂದಿಗೆ ಸಂಬಂಧಪಟ್ಟ ಟ್ರೇಡ್’ನಲ್ಲಿ ಐಟಿಐ ಉತ್ತೀರ್ಣರಾದವರು ಅರ್ಜಿ ಸಲ್ಲಿಸಲು ಅರ್ಹರು.
ಅರ್ಜಿ ಸಲ್ಲಿಸಲು ಜುಲೈ 11 ಕೊನೆಯ ದಿನವಾಗಿದೆ. ಆದಾಗ್ಯೂ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು, ಹುದ್ದೆಗಳ ವಿವರಗಳು, ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಿತಿ, ಅರ್ಜಿ ಮಾದರಿ ಇತ್ಯಾದಿಗಳನ್ನು ತಿಳಿದುಕೊಳ್ಳುವುದು ಮುಖ್ಯ. ಈ ಎಲ್ಲದರ ಬಗ್ಗೆ ಮಾಹಿತಿಯನ್ನು ಇಲ್ಲಿ ಕಾಣಬಹುದು.
ಹುದ್ದೆಗಳ ವಿವರ.!
1. ಮೆಕ್ಯಾನಿಕಲ್ ವರ್ಕ್ ಶಾಪ್ (ಗೋರಖ್ ಪುರ)-411 (ವಿಭಾಗವಾರು ಹುದ್ದೆಗಳು: ಫಿಟ್ಟರ್-140, ವೆಲ್ಡರ್-62, ಎಲೆಕ್ಟ್ರಿಷಿಯನ್-17, ಕಾರ್ಪೆಂಟರ್-89, ಪೇಂಟರ್-87, ಮೆಷಿನಿಸ್ಟ್-16).
2. ಕ್ಯಾರೇಜ್ ಮತ್ತು ವ್ಯಾಗನ್ (ಲಕ್ನೋ ಜಂಕ್ಷನ್)-155 (ವಿಭಾಗವಾರು ಹುದ್ದೆಗಳು: ಫಿಟ್ಟರ್-120, ವೆಲ್ಡರ್-06, ಟ್ರಿಮ್ಮರ್-06, ಕಾರ್ಪೆಂಟರ್-11, ಪೇಂಟರ್-06, ಮೆಷಿನಿಸ್ಟ್-06)
3. ಮೆಕ್ಯಾನಿಕಲ್ ವರ್ಕ್ ಶಾಪ್ (ಇಜ್ಜತ್ ನಗರ)-151 (ವಿಭಾಗವಾರು ಹುದ್ದೆಗಳು: ಫಿಟ್ಟರ್-39, ವೆಲ್ಡರ್-30, ಎಲೆಕ್ಟ್ರಿಷಿಯನ್-32, ಕಾರ್ಪೆಂಟರ್-39, ಪೇಂಟರ್-11)
4. ಕ್ಯಾರೇಜ್ ಮತ್ತು ವ್ಯಾಗನ್ (ವಾರಣಾಸಿ)-75 (ವಿಭಾಗವಾರು ಹುದ್ದೆಗಳು: ಫಿಟ್ಟರ್-66, ವೆಲ್ಡರ್-02, ಕಾರ್ಪೆಂಟರ್-03, ಟ್ರಿಮ್ಮರ್-02, ಪೇಂಟರ್-02)
5. ಕ್ಯಾರೇಜ್ ಮತ್ತು ವ್ಯಾಗನ್ (ಇಜ್ಜತ್ ನಗರ) – 64 (ವಿಭಾಗವಾರು ಹುದ್ದೆಗಳು : ಫಿಟ್ಟರ್ -64)
6. ಸಿಗ್ನಲ್ ವರ್ಕ್ ಶಾಪ್ (ಗೋರಖ್ ಪುರ ಕಂಟೋನ್ಮೆಂಟ್)-63 (ವಿಭಾಗವಾರು ಹುದ್ದೆಗಳು: ಫಿಟ್ಟರ್-31, ವೆಲ್ಡರ್-08, ಟರ್ನರ್-15, ಕಾರ್ಪೆಂಟರ್-03, ಮೆಷಿನಿಸ್ಟ್-06)
7. ಡೀಸೆಲ್ ಶೆಡ್ (ಇಜ್ಜತ್ ನಗರ)-60 (ವಿಭಾಗವಾರು ಹುದ್ದೆಗಳು: ಎಲೆಕ್ಟ್ರಿಷಿಯನ್-30, ಮೆಕ್ಯಾನಿಕಲ್ ಡೀಸೆಲ್-30)
8. ಬ್ರಿಡ್ಜ್ ವರ್ಕ್ ಶಾಪ್ (ಗೋರಖ್ ಪುರ ಕಂಟೋನ್ಮೆಂಟ್)-35 (ವಿಭಾಗವಾರು ಹುದ್ದೆಗಳು: ಫಿಟ್ಟರ್-21, ವೆಲ್ಡರ್-11, ಮೆಷಿನಿಸ್ಟ್-03)
9. ಡೀಸೆಲ್ ಶೆಡ್ (ಗೊಂಡಾ) – 90 (ವಿಭಾಗವಾರು ಹುದ್ದೆಗಳು: ಫಿಟ್ಟರ್ -13, ವೆಲ್ಡರ್ -02, ಎಲೆಕ್ಟ್ರಿಷಿಯನ್ -20, ಮೆಕ್ಯಾನಿಕ್ ಡೀಸೆಲ್ -55)
ಶೈಕ್ಷಣಿಕ ಅರ್ಹತೆ.!
ಅಭ್ಯರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ ಹತ್ತನೇ ತರಗತಿ ಸೇರಿದಂತೆ ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಉತ್ತೀರ್ಣರಾಗಿರಬೇಕು.
ವಯಸ್ಸಿನ ಮಿತಿ.!
ಜೂನ್ 12, 2024ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯಸ್ಸು 15 ರಿಂದ 24 ವರ್ಷಗಳ ನಡುವೆ ಇರಬೇಕು.
ಅರ್ಜಿ ಶುಲ್ಕ.!
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 100 ರೂಪಾಯಿ.
ಎಸ್ಟಿ, ಎಸ್ಸಿ, ಮಹಿಳೆಯರು ಮತ್ತು ವಿಕಲಚೇತನರು ಶುಲ್ಕ ಪಾವತಿಸುವ ಅಗತ್ಯವಿಲ್ಲ.
ಆಯ್ಕೆ ಪ್ರಕ್ರಿಯೆ.!
10ನೇ ತರಗತಿ ಮತ್ತು ಐಟಿಐ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ.