ಬೆಂಗಳೂರು: ಜಿಲ್ಲಾ / ತಾಲ್ಲೂಕು ಪಂಚಾಯಿತಿಗಳ ಪ್ರ.ದ.ಸ ಹಾಗೂ ದ್ವಿ.ದ.ಸ ಹುದ್ದೆಗಳ ಜಿಲ್ಲಾವಾರು ಮಾಹಿತಿ ಬಿಡುಗಡೆ ಮಾಡಲಾಗಿದೆ. ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿ ನೇರ ನೇಮಕಾತಿ ಕೋಟಾದಡಿ ಗಣನೀಯ ಮಟ್ಟದಲ್ಲಿ ಲಿಪಿಕ ವೃಂದದ ಹುದ್ದೆಗಳು ಖಾಲಿ ಇದ್ದು, ಸದರಿ ಹುದ್ದೆಗಳನ್ನು ಭರ್ತಿ ಮಾಡಲು ಈ ಹಿಂದೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ.
ಆರ್ಥಿಕ ಇಲಾಖೆಯು ಉಲ್ಲೇಖ(1)ರ ದಿನಾಂಕ: 02.11.2023ರ ಪತ್ರದಲ್ಲಿ 100 ಪು.ದ.ಸ ಹಾಗೂ 200 ದ್ವಿ.ದ.ಸ ಹುದ್ದೆಗಳನ್ನು ನೇರ ನೇಮಕಾತಿ ಮುಖೇನ ಭರ್ತಿ ಮಾಡಲು ಸಹಮತಿ ನೀಡಿದ್ದು, ಈ ಹುದ್ದೆಗಳನ್ನು ಜಿಲ್ಲಾ ಪಂಚಾಯತಿಯಲ್ಲಿ ನೇರ ನೇಮಕಾತಿ ಕೋಟಾದಡಿ ಮಂಜೂರಾದ / ಖಾಲಿ ಇರುವ ಹುದ್ದೆಗಳ ಆಧಾರದಲ್ಲಿ ಈ ಕೆಳಕಂಡಂತೆ ಹಂಚಿಕೆ ಮಾಡಲಾಗಿರುತ್ತದೆ. ಉಲ್ಲೇಖ 02 ರ ದಿನಾಂಕ: 13.02.2024 ರ ಆದೇಶದಲ್ಲಿ ತಿಳಿಸಿರುವಂತೆ ಜಿಲ್ಲಾ/ತಾಲ್ಲೂಕು ಲಿಪಿಕ ವೃಂದದ ಹುದ್ದೆಗಳಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ನೇಮಕಾತಿ ಹಾಗೂ ಶಿಸ್ತು ಪ್ರಾಧಿಕಾರಿಯಾಗಿದ್ದು, ಮೇಲೆ ತಿಳಿಸಿರುವ ಪ್ರ.ದ.ಸ ಹಾಗೂ ದ್ವಿ.ದ.ಸ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ online ಪ್ರಸ್ತಾವನೆ ಸಲ್ಲಿಕೆಯ ಕುರಿತಂತೆ ದಿನಾಂಕ: 09.02.2024 ರಂದು ಆಯುಕ್ತಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಗಾರದಲ್ಲಿ ಎಲ್ಲಾ ಜಿಲ್ಲಾ ಪಂಚಾಯಿತಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಲಾಗಿರುತ್ತದೆ.
ಉಲ್ಲೇಖ (03) ರ ದಿನಾಂಕ: 15.11.2023 ರ ಅಧಿಸೂಚನೆಯಲ್ಲಿ ಸಾಮಾನ್ಯ ಹುದ್ದೆಗಳಿಗೆ ಗುರುತಿಸಿರುವ ವಿಕಲಚೇತನ ಮೀಸಲಾತಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಲಿಪಿಕ ವೃಂದದ ಹುದ್ದೆಗಳಿಗೆ ಸಂಯೋಜಿಸುವಂತೆ ಹಾಗೂ ಉಲ್ಲೇಖ (04) ಮತ್ತು (05) ರ ಆದೇಶಗಳನ್ವಯ ಮೇಲಿನ ಪ್ರ.ದ.ಸ ಹಾಗೂ ದ್ವಿ.ದ.ಸ ಹುದ್ದೆಗಳಿಗೆ ಮೀಸಲಾತಿ ರೋಷ ಬಿಂದುಗಳನ್ನು ಗುರುತಿಸಿ, ಸ್ಪರ್ಧಾತ್ಮಕ ಪರೀಕ್ಷೆಯ ಮುಖೇನ ಸದರಿ ಹುದ್ದೆಗಳನ್ನು ಭರ್ತಿ ಮಾಡಲು online ಪುಸ್ತಾವನೆಯನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸಲ್ಲಿಸಲು ಕೂಡಲೇ ಅಗತ್ಯ ಕ್ರಮ ಕೈಗೊಂಡು, 15 ದಿನದೊಳಗಾಗಿ ಅನುಪಾಲನ ವರದಿಯನ್ನು ಆಯುಕ್ತಾಲಯಕ್ಕೆ ಸಲ್ಲಿಸುವಂತೆ ಈ ಮೂಲಕ ಸೂಚಿಸಿದೆ ಅಂತ ತಿಳಿಸಿದೆ.
BREAKING : ಪತ್ನಿಯ ಜೊತೆ ಅನೈತಿಕ ಸಂಬಂಧ ಶಂಕೆ : ಹಾವೇರಿಯಲ್ಲಿ ತಮ್ಮನನ್ನೇ ಭೀಕರವಾಗಿ ಕೊಲೆಗೈದ ಅಣ್ಣ
BREAKING:ಮುಂಬೈನಲ್ಲಿ ಭಾರೀ ಅಗ್ನಿ ಅವಘಡ: 15 ವಾಣಿಜ್ಯ ಘಟಕಗಳು, ಮನೆಗಳು ಬೆಂಕಿಗೆ ಆಹುತಿ | Fire Accident
ಸುರೇಶ್ ದೆಹಲಿಯಲ್ಲಿ ಕೂರುವ ಎಂಪಿಯಲ್ಲ ಹಳ್ಳಿಯ ಸಂಸದ : ಡಿಸಿಎಂ ಡಿಕೆ ಶಿವಕುಮಾರ ಹೇಳಿಕೆ