ಕೆಲ ಸಿನಿಮಾಗಳು ಬಿಡುಗಡೆಗೆ ಮೊದಲೇ ಕಥೆ, ಚಿತ್ರದಲ್ಲಿನ ಸ್ಪೆಷಲ್ ಕಂಟೆಂಟ್ ಮೂಲಕವೇ ಸಿಕ್ಕಾಪಟ್ಟೆ ಟಾಕ್ ಕ್ರಿಯೇಟ್ ಮಾಡ್ಬಿಡುತ್ವೆ. ಅದೇ ರೀತಿ ಈಗಿನ ಸಮಾಜದ ಗಂಭೀರ ಸಮಸ್ಯೆಯೊಂದನ್ನು ಮುಖ್ಯ ಕಥೆಯನ್ನಾಗಿಸಿಕೊಂಡು ತೆರೆ ಕಾಣಲು ಸಜ್ಜಾಗಿದೆ ವಿಕ್ರಂ ಪ್ರಭು ಸಾರಥ್ಯದ ವೆಡ್ಡಿಂಗ್ ಗಿಫ್ಟ್ ಸಿನಿಮಾ. ವಿಶೇಷ ಅಂದ್ರೆ ನಾಯಕಿಯಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ನಟಿ ಪ್ರೇಮ ಈ ಚಿತ್ರದ ಮೂಲಕ ಹಲವು ವರ್ಷಗಳ ನಂತ್ರ ಮುಖ್ಯ ಪಾತ್ರದ ಮೂಲಕ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡ್ತಿದ್ದಾರೆ.

ಒಂದು ಕಾಲಕ್ಕೆ ನಾಯಕಿಯರಾಗಿ ತೆರೆ ಮೇವೆ ಮಿಂಚಿದ್ದ ಹಲವು ಜನ ನಟಿಯರು ಲಾಂಗ್ ಗ್ಯಾಪ್ ಬಳಿಕ ಮತ್ತೆ ಚಿತ್ರರಂಗದಲ್ಲಿ ಇದೀಗ ಸಕ್ರಿಯರಾಗಿದ್ದಾರೆ. ಅದೇ ರೀತಿ ಕೆಲ ವರ್ಷಗಳು ಬಣ್ಣದ ಲೋಕದಿಂದ ಕಣ್ಮರೆಯಾಗಿದ್ದ ನಟಿ ಪ್ರೇಮ ಉತ್ತಮ ಕಥೆ ಹಾಗೂ ಪಾತ್ರವಿರುವ ಸಿನಿಮಾ ಮೂಲಕವೇ ಮತ್ತೆ ಚಿತ್ರರಂಗಕ್ಕೆ ಹೆಜ್ಜೆ ಇಡ್ಬೇಕು ಅಂದುಕೊಂಡಿದ್ರು. ಅವರ ಆಸೆಯಂತೆಯೇ ಇದೀಗ ಕಮರ್ಷಿಯಲ್ ಎಲಿಮೆಂಟ್ಸ್ ಜೊತೆಗೆ ಒಂದೊಳ್ಳೆ ಸೋಶಿಯಲ್ ಮೆಸೇಜ್ ಕೂಡ ಇರುವಂತಹ ವೆಡ್ಡಿಂಗ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ರೀ ಎಂಟ್ರಿ ಕೊಡ್ತಿದ್ದಾರೆ. ಈ ಚಿತ್ರದಲ್ಲಿ ಪ್ರೇಮ ಲಾಯರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈಗಾಗ್ಲೇ ತಮ್ಮ ಸಿನಿ ಜರ್ನಿಯ ಹಲವಾರು ಚಿತ್ರಗಳ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಜನಮನ ಗೆದ್ದಿರುವ ಪ್ರೇಮ ವೆಡ್ಡಿಂಗ್ ಗಿಫ್ಟ್ ಚಿತ್ರದ ಲಾಯರ್ ರೋಲ್ ನಲ್ಲೂ ಮೋಡಿ ಮಾಡಲು ಬರ್ತಿದ್ದಾರೆ.

ಇನ್ನೂ ನಿಶಾನ್ ಈ ಚಿತ್ರದ ನಾಯಕನ ಪಾತ್ರದಲ್ಲಿ ನಟಿಸಿದ್ರೆ, ನಾಯಕಿಯಾಗಿ ಸೋನು ಗೌಡ ಸಹ ಚಾಲೆಂಜಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಜೊತೆಗೆ ಪವಿತ್ರಾ ಲೋಕೇಶ್, ಅಚ್ಯುತ್ ಕುಮಾರ್ ಇನ್ನೂ ಮುಂತಾದ ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ. ಈಗಾಗ್ಲೇ ಚಿತ್ರದ ಟೀಸರ್, ಟ್ರೈಲರ್ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಬಾಲಚಂದ್ರ ಪ್ರಭು ಅವರ ಸಂಗೀತ ಸಂಯೋಜನೆ ಇರುವ ಚಿತ್ರದ ಹಾಡುಗಳೂ ಸೊಗಸಾಗಿ ಮೂಡಿ ಬಂದಿವೆ.

Share.
Exit mobile version