ಬೆಂಗಳೂರು : ಸಾರಿಗೇತರ ( ವೈಟ್ ಬೋರ್ಡ್ ) ವಾಹನಗಳನ್ನು ಸಾರಿಗೆ ( ಯೆಲ್ಲೋ ಬೋರ್ಡ್ ) ವಾಹನಗಳನ್ನಾಗಿ ಬಳಕೆ ಮಾಡುತ್ತಿರುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಗೆ ಹಲವಾರು ದೂರುಗಳು ಸಲ್ಲಿಕೆಯಾಗಿದ್ದವು. ಈ ಹಿನ್ನಲೆಯಲ್ಲಿ ಜ್ಞಾನಭಾರತಿ ಆರ್‌ಟಿಓ ಶ್ರೀನಿವಾಸ ಪ್ರಸಾದ್ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ‘ಲಾಂಗ್ ಡ್ರೈವ್’ ಎಂಬ ಅನಧಿಕೃತ ಅಗ್ರಿಗೇಟರ್ ಸಂಸ್ಥೆಯ ಅಡಿಯಲ್ಲಿ ಆಚರಣೆ ಮಾಡುತ್ತಿದ್ದ 7 ವಾಹನಗಳನ್ನು ವಶಪಡಿಸಿಕೊಂಡಿದೆ.
ವಾಹನ ಮಾಲೀಕರು ತಮ್ಮ ಸಾರಿಗೇತರ (ವೈಟ್ ಬೋರ್ಡ್) ವಾಹನಗಳನ್ನು ಅನಧಿಕೃತ ಆಪ್ ಅಡಿಯಲ್ಲಿ ವಾಣಿಜ್ಯ ಬಳಕೆಗೆ (ಯೆಲ್ಲೋ ಬೋರ್ಡ್) ನೀಡುವುದು ಕಾನೂನಿಗೆ ವಿರುದ್ದವಾಗಿದೆ. ಇಂತಹ ಪ್ರಕರಣಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ವ್ಯಾಪಕವಾದ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಆದುದರಿಂದ, ವಾಹನ ಮಾಲೀಕರು ತಮ್ಮ ಸಾರಿಗೇತರ (ವೈಟ್ ಬೋರ್ಡ್) ವಾಹನಗಳನ್ನು ಅನಧಿಕೃತ ಆಪ್ ಅಡಿಯಲ್ಲಿ ವಾಣಿಜ್ಯ ಬಳಕೆಗೆ (ಯೆಲ್ಲೋ ಬೋರ್ಡ್) ನೀಡಬಾರದೆಂದು ಈ ಮೂಲಕ ಎಚ್ಚರಿಕೆ ನೀಡಲಾಗಿದೆ.
ಈ ತಪಾಸಣಾ ಸಮಯದಲ್ಲಿ ಇಂತಹ ವಾಹನಗಳು ಕಂಡುಬಂದಲ್ಲಿ, ಅಂತಹ ವಾಹನಗಳನ್ನು ವಶಪಡಿಸಿಕೊಂಡು, ಮೋಟಾರು ವಾಹನ ಕಾಯ್ದೆ 1988 ರ ಕಲಂ 53 (1) (b) (ii) ಪ್ರಕಾರ ವಾಹನಗಳ ನೋಂದಣಿ ಪ್ರಮಾಣ ಪತ್ರವನ್ನು 3-4 ತಿಂಗಳ ಕಾಲಾವಧಿಗೆ ಅಮಾನತ್ತು ಪಡಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಆಯುಕ್ತರಾದ ಎ ಎಂ ಯೋಗೀಶ್ ತಿಳಿಸಿದ್ದಾರೆ.
BIG UPDATE: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆ: ಹೀಗಿದೆ 3 ಗಂಟೆಯವರೆಗಿನ ಮತದಾನದ ವಿವವ
BREAKING : ಭಾರತವನ್ನು ‘ಹಿಂದೂ ರಾಷ್ಟ್ರ’ ವನ್ನಾಗಿ ಮಾಡಲು ನಾವು ಬಿಡಲ್ಲ : ಯತೀಂದ್ರ ಸಿದ್ದರಾಮಯ್ಯ ವಿವಾದ!